ರಾಗ - : ತಾಳ -
ಕುಣಿ ಕುಣಿಯಲೋ ಬಾಲಗೋಪಾಲ ll ಪ ll
ಗೋಪಾಲ ನೀರದ ನೀರ ll ಅ ಪ ll
ಯಮುನಾ ತೀರದಿ ಹಿಮಕಿರಣನು ತಾ
ಮಮತೆಯ ತೋರಲು ಬೆಳಗುತಿಹ
ಘಮಘಮಿಸುವ ಈ ಸುಮಗಳು ಸೂಸಿರೆ
ಪ್ರಮದೆಯರೆಲ್ಲರ ಪ್ರೇಮಾಂಗಣದಲಿ ll 1 ll
ಗಂಧವ ಮಾರುತ ಬೀರುತಲಿರುವನು
ಇಂದಿರೆ ಕೊಳಲಿನ ರೂಪದಲಿ
ಚಂದದಿ ನಾದವ ತುಂಬಲು ಪರಮಾ
ನಂದವು ಮಾನಸ ಮಂದಿರದಲಿ ನೀ ll 2 ll
ಕಾಯವು ರೋಮಾಂಚಿತವಾಯ್ತೊ
ಮಾಯವಾದವೊ ಮೋಹಗಳು
ತಾಯಿ ಮಡಿಲು ಸೇರಿದ ಶಿಶುವಂದದಿ
ಹಾಯವೆನಿಸಿತೊ ಜೀವನ ಯಾತ್ರೆಯು ll 3 ll
ಕಾಮ ಕ್ರೋಧ ಲೋಭ ಮೋಹ ಮದ ಮತ್ಸರ ಬಿಡಿಸೊ
ಸ್ವಾಮಿ ನಿನ್ನಯ ಪಾದಯುಗಳವೆ ಕ್ಷೇಮವೆನ್ನಿಸೊ
ಸಾರಾಸಾರ ವಿವೇಕದಿ ಮೋಕ್ಷದ ಕೋರಿಕೆ ಪುಟ್ಟಿಸೊ
ನಾರಾಯಣ ನಿನ್ನ ಕರುಣದಿ ಭವ ಪಾರ ಸೇರಿಸೋ ll 4 ll
ಸಾರದ ಕರುಣಕೆ ಕಾರಣ ಬಿಂಬದ ಮೂರುತಿ ದರುಶನವು
ಭಾರತಿ ರಮಣನ ಮಂಗಳಶಾಸ್ತ್ರ ವಿಚಾರವೆ ಕಾರಣವು
ಭಕುತ ಜನ ಪ್ರಸನ್ನ ಲಕುಮಿರಮಣ ಎನ್ನು
ತಕಿಟ ತಕಿಟ ಎಂದು ll 5 ll
***