ಶ್ರೀ ಪ್ರಸನ್ನ ಶ್ರೀನಿವಾಸದಾಸರು ಶ್ರೀ ಬ್ರಹ್ಮಣ್ಯತೀರ್ಥರನ್ನು ಕುರಿತು ಮಾಡಿರುವಂತಹ ಕೃತಿ
ರಾಗ : ವಸಂತ ಆದಿತಾಳ
ವರ ಗುರುವರ್ಯ ಶ್ರೀ ಬ್ರಹ್ಮಣ್ಯತೀರ್ಥರ
ಚರಣ ಕಮಲಕೆ ನಾ ಅನುದಿನ ನಮಿಪೆ ॥ಪ॥
ಪರಿಪರಿ ದುರಿತವ ತ್ವರಿತದಿ ತರಿದು ಶ್ರೀ
ಹರಿಮಧ್ವ ಚರಣಂಗಳಲಿ ಭಕ್ತಿ ಕೊಡುವಂತೆ ॥ಅ.ಪ॥
ವರ ಮಧ್ವಮುನಿ ಹೃಸ್ಥ ನರಹರಿ ಶ್ರೀಕೃಷ್ಣ
ಕರಗಳ ಕಟಿಯಲಿಟ್ಟಿರುವ ವಿಠಲರಾಯ
ವರ ವೇದವ್ಯಾಸ ವರಾಹನರ್ಚಕರಾದ
ವರ ಪುರುಷೋತ್ತಮ ಮುನಿಕರ ಕಮಲಜ ॥೧॥
ವಿಪ್ರ ವೃದ್ಧರಿಗೆ ಇವರು ದಯವನ್ನು ಬೀರಿ
ಪುತ್ರ ಭಾಗ್ಯವನಿತ್ತು ಆ ವ್ಯಾಸ ಮುನಿಯನು
ಸುಪ್ರಖ್ಯಾತರ ಮಾಡಿದಂಥ ಪ್ರಸಿದ್ಧರೀ -
ಸುಪ್ರಬುದ್ಧರ ಮಹಿಮೆಯು ಜ್ವಲಿಪುದು ಎಲ್ಲೂ ॥೨॥
ಪರಮ ದಯದಿ ಎನ್ನ ಕಷ್ಟದುರಿತ ಕೀಳ್ತು
ಪರಮ ಸದ್ಗುರುವರ್ಯರೆ ಪೊರೆಯಿರಿ ಎನ್ನ
ಸರಸಿಜೋದ್ಭವ ತಾತ ' ಪ್ರಸನ್ನ ಶ್ರೀನಿವಾಸ ’ವರ
ಕಾಂತಿಯಿಂ ಪ್ರಜ್ವಲಿಸುತಿಹ ನಿಮ್ಮೊಳು ॥೩॥
****
..
kruti by ಪ್ರಸನ್ನ ಶ್ರೀನಿವಾಸದಾಸರು prasanna shreenivasaru
ಬ್ರಹ್ಮಣ್ಯ ತೀರ್ಥ ಗುರುಗಳ ಸ್ತೋತ್ರ
ವರ ಗುರುವರ್ಯ ಶ್ರೀ ಬ್ರಹ್ಮಣ್ಯತೀರ್ಥರ |
ಚರಣ ಕಮಲಕೆ ನಾ ಅನುದಿನ ನಮಿಪೆ ಪ
ಪರಿಪರಿ ದುರಿತವ ತ್ವರಿತದಿ ತರಿದು ಶ್ರೀ |
ಹರಿಮಧ್ವ ಚರಣಂಗಳಲಿ ಭಕ್ತಿ ಕೊಡುವಂತೆ ಅ ಪ
ವರ ಮಧ್ವಮುನಿ ಹೃಸ್ಥ ನರಹರಿ ಶ್ರೀಕೃಷ್ಣ |
ಕರಗಳ ಕಟಿಯಲಿಟ್ಟಿರುವ ವಿಠಲರಾಯ ||
ವರ ವೇದವ್ಯಾಸ ವರಾಹನರ್ಚಕರಾದ |
ವರ ಪುರುಷೋತ್ತಮ ಮುನಿಕರ ಕಮಲಜ 1
ವಿಪ್ರ ವೃದ್ಧರಿಗೆ ಇವರು ದಯವನ್ನು ಬೀರಿ |
ಪುತ್ರ ಭಾಗ್ಯವನಿತ್ತು ಆ ವ್ಯಾಸ ಮುನಿಯನು ||
ಸುಪ್ರಖ್ಯಾತರ ಮಾಡಿದಂಥ ಪ್ರಸಿದ್ಧರೀ - |
ಸುಪ್ರಬುದ್ಧರ ಮಹಿಮೆಯು ಜ್ವಲಿಪುದು ಎಲ್ಲೂ 2
ಪರಮ ದಯದಿ ಎನ್ನ ಕಷ್ಟದುರಿತ ಕೀಳ್ತು |
ಪರಮ ಸದ್ಗುರುವರ್ಯರೆ ಪೊರೆಯಿರಿ ಎನ್ನ ||
ಸರಸಿಜೋದ್ಭವ ತಾತ ' ಪ್ರಸನ್ನ ಶ್ರೀನಿವಾಸ ’
ವರ ಕಾಂತಿಯಿಂ ಪ್ರಜ್ವಲಿಸುತಿಹ ನಿಮ್ಮೊಳು 3
***