ರಾಗ ಧನಶ್ರೀ ಆದಿ ತಾಳ
ಹರಿ ಹರಿ ಹರಿಯೆಂಬೊ ನರಗಿನ್ನೇತರ ಭಯವಿಲ್ಲಿಲ್ಲಲ್ಲಾ ||ಪ||
ಧ್ರುವಗೊಲಿದವ ಶ್ರೀಶಾ ಹುಸ್ಸೆನ್
ಧ್ರುವಪದವಿತ್ತನೆ ಹುಸ್ಸೆನ್
ಭಾವಶುದ್ದಿ ಇರುವಲ್ಲಲ್ಲಿ
ಭವಭಯವೆಂಬೊದಿಲ್ಲಲ್ಲಾ ||
ಕರಿಮೊರೆ ಕೇಳಿದ ಶ್ರೀಶಾ ಹುಸ್ಸೆನ್
ಹರಿ ಓಡಿ ಬಂದದ್ಯಾ ಹುಸ್ಸೆನ್
ಹರಿಯ ಭಕ್ತಿಗಳಿಂದಲಿ
ದುರಿತಭಯ ನಮಗಿಲ್ಲಲ್ಲಾ ||
ಕರುಣಾಕರ ಶ್ರೀಶ ಹುಸ್ಸೆನ್
ಗರುಡವಾಹನನೆಂಬ ಹುಸ್ಸೆನ್
ಅರಿತು ಬಂದೆನಲ್ಲಲ್ಲಿ
ಪುರಂದರವಿಠಲನ್ನಲ್ಲದಿಲ್ಲಲ್ಲಾ ||
***
ಹರಿ ಹರಿ ಹರಿಯೆಂಬೊ ನರಗಿನ್ನೇತರ ಭಯವಿಲ್ಲಿಲ್ಲಲ್ಲಾ ||ಪ||
ಧ್ರುವಗೊಲಿದವ ಶ್ರೀಶಾ ಹುಸ್ಸೆನ್
ಧ್ರುವಪದವಿತ್ತನೆ ಹುಸ್ಸೆನ್
ಭಾವಶುದ್ದಿ ಇರುವಲ್ಲಲ್ಲಿ
ಭವಭಯವೆಂಬೊದಿಲ್ಲಲ್ಲಾ ||
ಕರಿಮೊರೆ ಕೇಳಿದ ಶ್ರೀಶಾ ಹುಸ್ಸೆನ್
ಹರಿ ಓಡಿ ಬಂದದ್ಯಾ ಹುಸ್ಸೆನ್
ಹರಿಯ ಭಕ್ತಿಗಳಿಂದಲಿ
ದುರಿತಭಯ ನಮಗಿಲ್ಲಲ್ಲಾ ||
ಕರುಣಾಕರ ಶ್ರೀಶ ಹುಸ್ಸೆನ್
ಗರುಡವಾಹನನೆಂಬ ಹುಸ್ಸೆನ್
ಅರಿತು ಬಂದೆನಲ್ಲಲ್ಲಿ
ಪುರಂದರವಿಠಲನ್ನಲ್ಲದಿಲ್ಲಲ್ಲಾ ||
***
pallavi
hari hari hariyembo naraginnEtara bhayavillillallA
caraNam 1
dhruvagolidava shrIshA hussen dhruvapadavittena hussen
bhAva shuddi iruvallallibhava bhayavembodillallA
caraNam 2
kari more kELida shrIsha hussen hari Odi bandadyA hussen
hariya bhaktagaLindali durita bhaya namagillallA
caraNam 3
karuNAkara shrIsha hussen garuDa vAhananemba hussen
aritu bandenallalli purandara viTTalannalladillillA
***