ಜಯಜಯವೆಂದು ಶರಣೆನ್ನಿ ಹನುಮಯ್ಯಗ |
ಜಯ ಭೀಮಶೇನಾನಂದ ತೀರ್ಥರೇಯಗ ಪ
ಆದಿಲಿ ಅಂಜನಿ ಉದರದಲಿ ಬಂದಾ |
ಸಾದರ ರಘುಪತಿ ಸೇವೆಯಲಿ ನಿಂದಾ |
ಶ್ರೀದೇವಿ ಸುದ್ದಿ ಶರಧಿಯ ದಾಟಿ ತಂದಾ |
ಭೇದಿಸಿ ರಾವಣನಾ ದಳವೆಲ್ಲಾ ಕೊಂದಾ 1
ತರಿ ತರಿದೊಟ್ಟದಾ ಕುರುಕುಲಾನ್ವಯ ವೃಂದಾ
ಅರಸ ಯುಧೀಷ್ಠಿರನಾ ವಾಸಿಯ ತಂದಾ2
ಮೂರನೇ ರೂಪದಿ ಮಧ್ಯಗೇಹದಿ ಬಂದಾ
ನೆರೆ ಬಾದರಾಯಣನಾಜ್ಞೆಲಿ ನಿಂದಾ
ವರವರದ್ಹೇಳಿದ ತತ್ಪಾರ್ಥ ಛಂದಾ
ಗುರುವರ ಮಹಿಪತಿ ನಂದನ ಮನಕಾನಂದಾ3
***
ಕಾಖಂಡಕಿ ಶ್ರೀ ಕೃಷ್ಣದಾಸರು
ಜಯಜಯವೆಂದು ಶರಣೆನ್ನಿ ಹನುಮಯ್ಯಗ | ಜಯ ಭೀಮಶೇನಾನಂದ ತೀರ್ಥರೇಯಗ ಪ
ಆದಿಲಿ ಅಂಜನಿ ಉದರದಲಿ ಬಂದಾ | ಸಾದರ ರಘುಪತಿ ಸೇವೆಯಲಿ ನಿಂದಾ | ಶ್ರೀದೇವಿ ಸುದ್ದಿ ಶರಧಿಯ ದಾಟಿ ತಂದಾ | ಭೇದಿಸಿ ರಾವಣನಾ ದಳವೆಲ್ಲಾ ಕೊಂದಾ 1
ತರಿ ತರಿದೊಟ್ಟದಾ ಕುರುಕುಲಾನ್ವಯ ವೃಂದಾ ಅರಸ ಯುಧೀಷ್ಠಿರನಾ ವಾಸಿಯ ತಂದಾ2
ಮೂರನೇ ರೂಪದಿ ಮಧ್ಯಗೇಹದಿ ಬಂದಾ ನೆರೆ ಬಾದರಾಯಣನಾಜ್ಞೆಲಿ ನಿಂದಾ ವರವರದ್ಹೇಳಿದ ತತ್ಪಾರ್ಥ ಛಂದಾ ಗುರುವರ ಮಹಿಪತಿ ನಂದನ ಮನಕಾನಂದಾ3
***