ರಾಗ ಮಧ್ಯಮಾವತಿ. ತ್ರಿಪುಟ ತಾಳ
ಎಂತಹುದೋ ನಿನ್ನ ಭಕುತಿ
ಸಂತತ ನಿನ್ನ ದಾಸರ ಸಂಗ ಸುಖವೆನಗೆ
ವ್ರಣವನಾಶಿಪ ಕುರುಡ ನೊಣ ಮೊಸರ ಕಂಡಂತೆ
ಧನಿಕರ ಮನೆಗೆ ಕ್ಷಣ ಕ್ಷಣಕೆ ಹೋಗಿ
ತನುಬಾಗಿ ತುಟಿಯೊಣಗಿ ಅಣಕ ನುಡಿ ಕೇಳುವ ಕೃ-
ಪಣ ಮನಕ್ಕೆಂತಹುದು ನಿನ್ನಯ ಭಕುತಿ
ಇಡೆಯಾಡಿ ಮುಖ ಬಾಡಿ ನುಡಿಯಡಗಿ ಬಡವನೆಂ-
ದೊಡಲ ತೋರಿಸಿದೆನೋ ಕಡು ದೈನ್ಯದಿ
ಒಡೆಯ ನೀನಹುದೆಂದು ಮಡದಿ ಮಕ್ಕಳಿಗೆ ಹೆಸ-
ರಿಡುವೆ ಅಡಗಿರುವೆ ಅವರಡಿಗೆ ಎರಗುವನ ಮನಕೆಂತಹುತು ನಿನ್ನಯ ಭಕುತಿ
ಹೋಗಿಬಾರೈ ಎಂದಾಚೆಗೆಳೆದರು ತಲೆ-
ಬಾಗಿ ನಿಂತೂ ಅಲ್ಲಿ ಮೌನವಾಗಿ
ಓಗರಕೆ ಮನೆ ಮನೆಯ ತಪ್ಪದೆ ತಿರುಗುವ
ಜೋಗಿಯ ಕೈಯ ಕಟ್ಟೊಡೆದ ಕೋಡಗದ ಮನಕೆಂತಹುದು ನಿನ್ನಯ ಭಕುತಿ
ಅನ್ನವನೆ ತೋರೇ ಚಿಟಿಕಿರಿಯೆ ಬಾಲವ ಬೀಸಿ
ಕುನ್ನಿ ಸುಳಿದಾಡಿ ಕಾಲ್ಗೆರಗುವ ತೆರದಿ
ಹೆಣ್ಣಿನಾಸಗೆ ಬಾಯಿ ಬಿಡುವಾ ಸ್ತ್ರೈಣವಾಡಿದರೆ
ಘನ್ನನಯ್ಯ ಮನ್ನಿಸೆಲೊ ಚಿನ್ನ ಬಹು
ಕುನ್ನಿ ಮನಕೆಂತಹುದು ನಿನ್ನಯ ಭಕುತಿ
ವಟುವಾಗಿ ಬಲಿಯ ದಾನವ ಬೇಡಹೋದೆ ಆ ನಿ-
ಕಟ ಕಷ್ಟಗಳನು ನೀನೇ ಬಲ್ಲೆ
ಮುಟ್ಟಿದಡೆ ಪರಿಶುದ್ಧ ಫಣಿವರದ ಪುರಂದರ
ವಿಠಲ ನಿನ್ನ ದಾಸರ ಸಂಗ ಸುಖ ಎನಗೆ
ಎಂತಹುದೊ ನಿನ್ನಯ ಭಕುತಿ
***
ಎಂತಹುದೋ ನಿನ್ನ ಭಕುತಿ
ಸಂತತ ನಿನ್ನ ದಾಸರ ಸಂಗ ಸುಖವೆನಗೆ
ವ್ರಣವನಾಶಿಪ ಕುರುಡ ನೊಣ ಮೊಸರ ಕಂಡಂತೆ
ಧನಿಕರ ಮನೆಗೆ ಕ್ಷಣ ಕ್ಷಣಕೆ ಹೋಗಿ
ತನುಬಾಗಿ ತುಟಿಯೊಣಗಿ ಅಣಕ ನುಡಿ ಕೇಳುವ ಕೃ-
ಪಣ ಮನಕ್ಕೆಂತಹುದು ನಿನ್ನಯ ಭಕುತಿ
ಇಡೆಯಾಡಿ ಮುಖ ಬಾಡಿ ನುಡಿಯಡಗಿ ಬಡವನೆಂ-
ದೊಡಲ ತೋರಿಸಿದೆನೋ ಕಡು ದೈನ್ಯದಿ
ಒಡೆಯ ನೀನಹುದೆಂದು ಮಡದಿ ಮಕ್ಕಳಿಗೆ ಹೆಸ-
ರಿಡುವೆ ಅಡಗಿರುವೆ ಅವರಡಿಗೆ ಎರಗುವನ ಮನಕೆಂತಹುತು ನಿನ್ನಯ ಭಕುತಿ
ಹೋಗಿಬಾರೈ ಎಂದಾಚೆಗೆಳೆದರು ತಲೆ-
ಬಾಗಿ ನಿಂತೂ ಅಲ್ಲಿ ಮೌನವಾಗಿ
ಓಗರಕೆ ಮನೆ ಮನೆಯ ತಪ್ಪದೆ ತಿರುಗುವ
ಜೋಗಿಯ ಕೈಯ ಕಟ್ಟೊಡೆದ ಕೋಡಗದ ಮನಕೆಂತಹುದು ನಿನ್ನಯ ಭಕುತಿ
ಅನ್ನವನೆ ತೋರೇ ಚಿಟಿಕಿರಿಯೆ ಬಾಲವ ಬೀಸಿ
ಕುನ್ನಿ ಸುಳಿದಾಡಿ ಕಾಲ್ಗೆರಗುವ ತೆರದಿ
ಹೆಣ್ಣಿನಾಸಗೆ ಬಾಯಿ ಬಿಡುವಾ ಸ್ತ್ರೈಣವಾಡಿದರೆ
ಘನ್ನನಯ್ಯ ಮನ್ನಿಸೆಲೊ ಚಿನ್ನ ಬಹು
ಕುನ್ನಿ ಮನಕೆಂತಹುದು ನಿನ್ನಯ ಭಕುತಿ
ವಟುವಾಗಿ ಬಲಿಯ ದಾನವ ಬೇಡಹೋದೆ ಆ ನಿ-
ಕಟ ಕಷ್ಟಗಳನು ನೀನೇ ಬಲ್ಲೆ
ಮುಟ್ಟಿದಡೆ ಪರಿಶುದ್ಧ ಫಣಿವರದ ಪುರಂದರ
ವಿಠಲ ನಿನ್ನ ದಾಸರ ಸಂಗ ಸುಖ ಎನಗೆ
ಎಂತಹುದೊ ನಿನ್ನಯ ಭಕುತಿ
***
pallavi
entahudO ninna bhakuti santata ninna dAsara sanga sukhavenage
caraNam 1
vraNavanAshipa kuruDa noNa mosara kaNDante dhanikara manege kSaNa kSaNake
hOgitanu bAgi tuDiyoNagi aNaka nuDi kELuva krpaNa manakkendahudu ninnaya bhakuti
caraNam 2
iDeyADi mukha bADi nuDiyaDagi baDavanendoDala tOrisidenO kaDu dainyadi oDeya nInahudendu
maDadi makkLige hesariDuve aDagiruve avaraDige eraguvana manakentahutu ninnaya bhakuti
caraNam 3
hOgibArai endAcegeLadaru tale bAgi nintU alli maunavAgi Ogarke mane maneya
tappade tiruguva jOgiya kaiya kaTToDeda kODagada manakentahudu ninnaya bhakuti
caraNam 4
annavane tOrE citikiriye bAlava bisi kunni suLidADi kAlgeraguva teredi heNNinAsage bAyi
biDuvA straiNavADidare ghannanayya manniselo cinnna bahu kunni manakentahudu ninnaya bhakuti
caraNam 5
vaTuvAgi baliya dAnava hOde A nikaTa kaSTagaLanu nInE balle muTTidaDe parishuddha
phaNivarada purandara viTTala ninna dAsara sanga sukha enage entahudo ninnaya bhakuti
***