ಕಾಖಂಡಕಿ ಶ್ರೀ ಮಹಿಪತಿರಾಯರು
ತಿಳಿಯೊ ಮನವೆ ನಿಜವಸ್ತು ಖೂನ ಅಳಿಯೊ ದೇಹ ನಾನೆಂಬುವಭಿಮಾನ ಹೊಳಿಯೊ ಸದ್ಗುರು ಪಾದದಲಿ ನೀ ಪೂರ್ಣ 1
ಹುಟ್ಟಿ ಬಂದೇನು ಪುಣ್ಯ ಪುರುಷಾರ್ಥ ಘಟ್ಟಿಗೊಳ್ಳದೆ ನಿಜ ಸುಹಿತಾರ್ಥ ನಿಷ್ಠೆ ಹಿಡಿಯದನ ಜನ್ಮ ವ್ಯರ್ಥ ಮುಟ್ಟಿ ತೋರುವ ಶ್ರೀ ಗುರು ಪರಮಾರ್ಥ 2
ಗುರ್ತು ತಿಳಿಯೊ ಜನುಮಕೆ ಬಂದ ಮ್ಯಾಲೆ ಮರೆತು ಮೈಮರೆವದೇನು ತಾ ಮೇಲೆ ಅರ್ತು ನಡೆವದು ನಿನಗೇನು ಸೋಲು ಕರ್ತು ಸದ್ಗುರು ಸ್ಮರಿಸೋ ಆವಾಗಲೂ 3
ಎಲ್ಲಾರಂಥ ತಾನಲ್ಲೊ ಗುರುನಾಥ ಸುಲ್ಲಭದಿಂದ ದೋರುವ ಸುಪಥ ಅಲ್ಲೆ ದೋರ್ವದು ಸಕಲ ಹಿತಾರ್ಥ ಬಲ್ಲ ಮಹಿಮರೆ ತಿಳಿವರೀ ಮಾತ 4
ಭಾಸುತದೆ ಭಾಸ್ಕರ ಕೋಟಿ ಕಿರಣ ಲೇಸಾಗಿ ಹೋಗೊ ಗುರುವಿಗೆ ಶರಣ ದಾಸಮಹಿಪತಿ ಸ್ವಾಮಿ ದೀನೋದ್ಧಾರಣ ಭಾಸಿ ಪಾಲಿಸುವ ತಾ ಸುಕರಣ 5
****