ಬಾಗಿಲಲಿ ಬಿದ್ದಿಹ ಭಜಕನು ನಾನು
ಶ್ರೀ ಗೋಪಾಲ ಭೂಪಾಲ ಕಾಯಯ್ಯ ನೀನು ||ಪ||
ಯೋಗದ ಪಥಗಳನ್ನು ಏನೊಂದು ಅರಿಯೆನು
ನೀ ಗತಿಯೆಂದು ಬಂದು ಕೂಗುವೆನು ಹರಿಯೆ||೧||
ಭೋಗವ ಬಯಸುವೆ ಬಗೆಬಗೆಯಲಿ ರತಿಯ
ರೋಗ ಬಲವಾಯಿತು ತಿದ್ದೆನ್ನ ಮತಿಯ ||೨||
ಆಗಮಸಿದ್ಧ ಸುಗುಣಪೂರ್ಣ ಶ್ರೀಲೋಲ
ಬೇಗ ಸಲಹೋ ಮಮಸ್ವಾಮಿ ಹಯವದನ ||೩||
***
Bagilali biddiha bhajakanu nanu
sri gopala bhupala kayayya ninu ||pa||
Yogada pathagalannu enondu ariyenu
ni gatiyendu bandu kuguvenu hariye ||1||
Bhogava bayasuve bagebageyali ratiya
roga balavayitu tiddenna matiya ||2||
Agamasiddha sugunapurna srilola
bega salaho mamasvami hayavadana ||3||
***
ಬಾಗಿಲಲಿ ಬಿದ್ದಿಹ ಭಜಕನು ನಾನುಶ್ರೀ ಗೋಪಾಲ ಭೂಪಾಲ ಕಾಯಯ್ಯ ನೀನು ಪ .
ಯೋಗದ ಪಥಗಳನ್ನು ಏನೊಂದು ಅರಿಯೆನುನೀ ಗತಿಯೆಂದು ಬಂದು ಕೂಗುವೆನು ಹರಿಯೆ 1
ಭೋಗವ ಬಯಸುವೆ ಬಗೆಬಗೆಯಲಿ ರತಿಯರೋಗ ಬಲವಾಯಿತು ತಿದ್ದೆನ್ನ ಮತಿಯ 2
ಆಗÀಮಸಿದ್ಧ ಸುಗುಣಪೂರ್ಣ ಶ್ರೀಲೋಲಬೇಗ ಸಲಹೋ ಮಮಸ್ವಾಮಿ ಹಯವದನ3
***