sung as purandara vittala ankita
check similar under purandara vittala ankita
ಹನುಮಂತ ನೀ ಬಲು ಜಯವಂತನಯ್ಯ ಪ.
ಅನುಮಾನವಿಲ್ಲವೊ ಆನಂದತೀರ್ಥಾರ್ಯ ಅ.ಪ.
ರಾಮಸೇವಕನಾಗಿ ರಾವಣನ ಪುರವ ನಿ-ರ್ಧೂಮಮಾಡಿದ್ಯೊ ನಿಮಿಷದೊಳಗೆಭೂಮಿಪುತ್ರಿಗೆ ಮುದ್ರೆಯುಂಗುರವನಿತ್ತು ನೀಪ್ರೇಮಕುಶಲವ ರಾಮಪಾದÀಕÀರ್ಪಿಸಿದೆ 1
ಕೃಷ್ಣಾವತಾರದಲ್ಲಿ ಭೀಮನಾಗ್ಯವತರಿಸಿದುಷ್ಟ ದೈತ್ಯರನ್ನೆಲ್ಲ ಸಂಹರಿಸಿದೆದೃಷ್ಟಿಹೀನನಾದ ಧೃತರಾಷ್ಟ್ರವಂಶವನ್ನುಕಷ್ಟವಿಲ್ಲದೆ ಕೊಂದು ಶ್ರೀಕೃಷ್ಣಗರ್ಪಿಸಿದೆ 2
ಪತಿತ ಸಂಕರ ಪುಟ್ಟಿ ಮತವೆಲ್ಲ ಕೆಡಿಸಲುಮತಿಹೀನರಾಗೆ ಸಜ್ಜನರೆಲ್ಲಅತಿ ವೇಗದಲಿ ಮಧ್ವಯತಿಯಾಗಿ ಅವತರಿಸಿಗತಿಯ ತೋರಿಸಿದೆ ಹಯವದನ ನಿಜದಾಸ 3
***
pallavi
hanumanta nI balu jayavantanayya
anupallavi
anumAnavillavo Ananda tIrthArya
caraNam 1
rAmasEvakanAgi rAvaNana purava nirdhAma mADidyo nimiSadoLage
bhUmi putrige mudreyunguravanittu nI prEmakushalava rAmapAdakarpiside
caraNam 2
kruSNAvatAradalli bhImanAgavatarisi duSTa daityarannella samhariside
druSTi hInanAda dhrutarASTra vamshavannu kaSTavillade kondu shrI kruSNagarpiside
caraNam 3
patita sankara puTTi matavella keDisalu matihInarAge sajjanarella
ativEgadali madhvayatiyAgi avatarisi gatiya tOriside hayavadanana nijadAsa
***