..
ಎಷ್ಟು ಸುಖವ ಕೃಷ್ಣನ ನೋಡಿನೋಡಿಸುಖಿಸುವ ಜನರು ಎಷ್ಷು ಎಷ್ಟು ಭಾಗ್ಯದಿಂದ ತುಷ್ಟರು ಉತ್ಕøಷ್ಟರಿವರು ಪ.
ಬಾಜಾರದೊಳಗೆಲ್ಲ ತೇಜಿ ಆನೆಯ ಸಾಲುಕಾಜಿನ ಕಂಬ ಕಿಡಕಿ ಕಮಲಾಕ್ಷಿಕಾಜಿನ ಕಂಬ ಕಿಡಕಿ ಮಹಲೊಳು ಜೂಜಾಡುವರು ಕಡೆಯಿಲ್ಲ 1
ನೀಟಾದ ಬೀದೀಲಿ ಥಾಟಾದ ಮನೆಗಳುಮಾಟಾದ ಪಗಡಿ ಚದುರಂಗ ಕಮಲಾಕ್ಷಿಮಾಟಾದ ಪಗಡಿ ಚದುರಂಗ ಜೂಜಿನ ಆಟ ಆಡೋರು ಕಡೆಯಿಲ್ಲ2
ಸಾಲು ಮನೆಗÀಳ ಬರೆದು ಮ್ಯಾಲೆ ವಡ್ಡಿಲೆಮೇಲು ಪಾಶಗಳ ಗೀಚುತಲಿ ಕಮಲಾಕ್ಷಿಮೇಲು ಪಾಶಗಳ ಗೀಚುತಲಿ ಆಡೋಬಾಲಿಕೆಯರ ಹಿಂಡು ಕಡೆಯಿಲ್ಲ 3
ಲಿಂಬೆ ಪೊಪ್ಪುಳಿ ಸೀರೆಯನ್ನುಟ್ಟು ತುಂಬ ವಸ್ತ್ರಗಳಿಟ್ಟುಕಂಬು ಕಂದರನ ಪುರದೊಳು ಕಮಲಾಕ್ಷಿಕಂಬುಕಂದರನ ಪುರದ ಬೀದಿಯೊಳಗೆಗೊಂಬೆ ಯಾಡುವರು ಕಡೆಯಿಲ್ಲ 4
ಮ್ಯಾಲಿನ ಬೀದೀಲಿ ಬಾಲಕಿಯರಿಂದೆಷ್ಟುಶ್ರೀಲೋಲ ರಾಮೇಶನ ಪುರದೊಳಗೆ ಕಮಲಾಕ್ಷಿಶ್ರೀಲೋಲ ರಾಮೇಶನ ಪುರದ ಬೀದಿಯೊಳಗೆ ಗೋಲಿಯಾಡುವರು ಕಡೆಯಿಲ್ಲ 5
****