Showing posts with label ಕಾಮಿತಾರ್ಥದಾಯಿನೇ ತುಳಸಿ ಕಲ್ಯಾಣಿ ಶ್ಯಾಮಾ ವಿಶಾಲನಯನೇ narasimhavittala. Show all posts
Showing posts with label ಕಾಮಿತಾರ್ಥದಾಯಿನೇ ತುಳಸಿ ಕಲ್ಯಾಣಿ ಶ್ಯಾಮಾ ವಿಶಾಲನಯನೇ narasimhavittala. Show all posts

Tuesday 3 August 2021

ಕಾಮಿತಾರ್ಥದಾಯಿನೇ ತುಳಸಿ ಕಲ್ಯಾಣಿ ಶ್ಯಾಮಾ ವಿಶಾಲನಯನೇ ankita narasimhavittala

 'ನರಸಿಂಹವಿಠಲ' ಅಂಕಿತ by ಓರಬಾಯಿ ಲಕ್ಷ್ಮೀದೇವಮ್ಮ ಸೊಂಡೂರು 1865+ 


ಕಾಮಿತಾರ್ಥದಾಯಿನೇ | ತುಳಸಿ ಕಲ್ಯಾಣಿ

ಶ್ಯಾಮಾ ವಿಶಾಲನಯನೇ ಪ


ಹಸುರು ಕಂಚುಕಧರೆ ಆನಂದ ರಸಿಕೇ

ಶಶಿ ಬಿಂಬಸಮ ಸುಂದರಮುಖೇ

ಉಸಿರುಬಿಡದೆ ನಿನ್ನ ಕೊಸರುವೆ ವರಗಳ

ಹಸನಾಗಿ ಕೊಡುವೆನೀ ಅತಿಶಯದಿಂದಲಿ 1


ಬಣ್ಣಾದ ಸರಪಳಿ ಹಾಕಿದ ಕೊರಳೇ

ಬಟ್ಟ ಮುತ್ತಿನ ಹರಳೇ

ಹುಣ್ಣಿಮೆ ಚಂದ್ರನಂತೆ ಸುಂದರಮುಖದವಳೇ

ಪನ್ನಂಗ ಶಯನಗೆ ಮಾಡಿದೆ ಮರುಳೇ 2


ಬಡನಡುವಿಗೆ ಒಡ್ಯಾಣಾ | ರುಳಿ ಪೈಜಣ

ಕಡಗಾ ಕಂಕಣ ಹೊಳಿಯುವ ಜಾಣೆ |

ನಡೆದು ಬಾರೆ ಶ್ರೀ ನರಸಿಂಹವಿಠಲನ

ಹಿಡಿದು ನಿನ್ನ ಪಾದ ಬಿಡದೆ ಭಜಿಪೆನಮ್ಮ 3

***