Showing posts with label ಯಾಕೆಮ್ಮನಗಲಿ ಪರಲೋಕ ಸೇರಿದೆ ಗುರು ಐಕೂರು ನರಸಿಂಹಾರ್ಯ shyamasundara ikoor narasimharya stutih. Show all posts
Showing posts with label ಯಾಕೆಮ್ಮನಗಲಿ ಪರಲೋಕ ಸೇರಿದೆ ಗುರು ಐಕೂರು ನರಸಿಂಹಾರ್ಯ shyamasundara ikoor narasimharya stutih. Show all posts

Wednesday, 1 September 2021

ಯಾಕೆಮ್ಮನಗಲಿ ಪರಲೋಕ ಸೇರಿದೆ ಗುರು ಐಕೂರು ನರಸಿಂಹಾರ್ಯ ankita shyamasundara ikoor narasimharya stutih

 ..

ಯಾಕೆಮ್ಮನಗಲಿ ಪರಲೋಕ ಸೇರಿದೆ ಗುರು

ಐಕೂರು ನರಸಿಂಹಾರ್ಯ ಪ


ಲೌಕಿಕವ ಬಿಟ್ಟು ಸುವಿವೇಕ ನಡೆವ

ವಾಕು ಪೇಳ್ವರ ಕಾಣೆ ಲೋಕದೊಳು ನಿನ್ಹೊರತು ಅ.ಪ


ಅತಿಮಂದರಾದೆಮಗೆ | ಶ್ರುತಿ ಶಾಸ್ತ್ರ ಪುರಾಣ

ಕಥೆ ದಾಸ ಕವಿತೆ ಸತತ ಪೇಳಿ

ಮತಿವಂತರೆನಿಸಿ ಸ್ಪÀತ್ವಥ ಪಡಿಸಿ ಮುಂದೆ ಸ

ದ್ಗತಿ ಕಾಣಿಸದೆ ಜಗದಿ ಹತಭಾಗ್ಯರನು ಮಾಡಿ 1


ಸಾಧುವರ್ಯನೆ ನಿಮ್ಮ ಪಾದವೇ ಗತಿ ಎಂದು

ಸಾದರದಿ ನಿರುತ ನೆರೆನಂಬಿದಂಥ

ಸೋದರಿಯರು ಪಂಚ ಭೇದ | ತರತಮಜ್ಞಾನ

ಬೋಧಿಸುವರಿಲ್ಲೆಂದು ಖೇದದಿಂದಿರುತಿಹರು 2


ಸೂರಿವರ ನಿನ್ನಗಲಿದಾರಭ್ಯ ಧರೆಯೊಳಗೆ

ನೀರಿಂದ ದೂರಾದ ಮೀನಿನಂತೆ

ಘೋರ ದುಃಖದಿ ಮುಳುಗಿ ಪಾರುಗಾಣದೆ ದಿಕ್ಕು

ತೋರದಾಗಿಹುದೀಗ ಬಾರೋ ಮನಮಂದಿರದಿ 3


ತನುವು ತ್ಯಜಿಸಿದರೇನು | ಅನಿಮಿಷಾಂಶನೆ ನಮ್ಮ

ಕನಸು ಮನನಿನೊಳಗೆ ಸುಳಿದಾಡುತ

ಕೊನೆಯಲ್ಲಿ ಹರಿನಾಮ | ಅನುಗ್ರಹಿಸುವೆವು ಎಂಬ

ಘನ ಅಭಯ ನೀಡೆಂದು ಮಣಿದು ಪ್ರಾರ್ಥಿಪೆನಯ್ಯ 4


ಪುಣ್ಯಪುರುಷನೆ ನಮಗೆ ಇನ್ನಾವ ಬಯಕಿಲ್ಲ

ಜನ್ಮ ಜನ್ಮಕೆ ನಿನ್ನ ಚರಣಾಬ್ಜವ

ಚನ್ನಾಗಿ ಸೇವಿಸುವ ಘನ್ನ ಸುಖಗರಿಯೆಂದು

ಸನ್ನುತಿಸಿ ವಿನಯದಲಿ ಬಿನ್ನೈಸುವೆವು ನಿತ್ಯ 5


ನಿನ್ನಿಂದ ಸತ್‍ಶ್ರವಣ | ನಿನ್ನಿಂದ ಅಘಹರಣ

ನಿನ್ನಿಂದ ಶ್ರೀವಾಯು ಹರಿಯಕರುಣ

ನಿನ್ನಿಂದ ಉಪದೇಶ \ ನಿನ್ನಿಂದ ಭವನಾಶ

ನಿನ್ನಿಂದ ಬಿಂಬ ದರ್ಶನವು ನಮಗಿನ್ನು 6


ಪಾಮರರ ಅಪರಾಧ ನೀ ಮನಕೆ ತಾರದಲೆ

ಹೇಮ ಕಾಮಿನಿ ಭೂಮಿ ಈಮೂರರ

ವ್ಯಾಮೋಹವನೆ ಬಿಡಿಸಿ | ಶಾಮಸುಂದರ ಭಕ್ತ

ಸ್ತೋಮ ಸಂಗದೊಳಿಟ್ಟು ಪ್ರೇಮದಲಿ ಪಿಡಿಕೈಯ್ಯ 7

***