ತಿರುಪತಿ ಶ್ರೀ ಪಾಂಡುರಂಗಿ ಹುಚ್ಚಾಚಾರ್ಯ ವಿರಚಿತ
ಶ್ರೀ ಲಕ್ಷ್ಮೀದೇವಿಯ ಸ್ತುತಿ ಪದ
ರಾಗ : ಸಾರಂಗ ಆದಿತಾಳ
ಅಂಬುಜನಾಭನ ರಂಭೆ ನಿನ್ನಯ ಪಾದಾ
ಆಲಂಬಿಸಿದೆನೆ ತಾಯೆ॥
ಕುಂಭಿಣಿ ಸುತೆ ಸದಾ ನಂಬಿದೆ ಹೃದಿ ಮಮ
ಬಿಂಬನ ತೋರಾಯೆ॥ಪ॥
ಎಷ್ಟೊ ಸುರರು ಶಿರಿಕೃಷ್ಣನಾನನ ಎನಗಿಷ್ಟು ತೋರಿಸುವದಕೆ
ಒಟ್ಟಿಗೆ ಬಂದಿರೆ ತಪ್ಪು ತಡಿರಿಯಂದಿ ಖೊಟ್ಟಿ ತನವು ಯಾಕೆ॥೧॥
ತಾಯಿಗೆ ಮಗನೊಳು ಮಾಯಾವಿರುವದೆಂದು ಉಪಾಯದಿ ಸೇವಿಸಿದೆ
ತೋಯಜಾಕ್ಷಿಯೆ ಹೀಗ!ಪಾಯ ಮಾಡಲು ಹೇತು,ಕಾಯದೊಳೇನಿಹದೆ॥೨॥
ಪಕ್ಷಿ ವಹಗೆ ಪೇಳಿ ಮೋಕ್ಷ ಕೊಡುವ ಶಕ್ತಿ ಲಕ್ಷುಮಿ ನಿನಗಿಹದೆ
ಅಕ್ಷಯಾತ್ಮನಯನ ಸಾಕ್ಷಿಗೆ ತೋರಿಸಿ ಅಪೇಕ್ಷಾ ಪೂರಿಸಳಾದೆ॥೩॥
ನಿನ್ನ ಸಮಳು ಹರಿಗಿನ್ನು ಪ್ರಿಯಳುಂಟೆ ಜನ್ಮ ಮರಣ ರಹಿತೆ
ಸನ್ನತನಾಗಿಹೆ ಎನ್ನ ಮಾನದಾಭಿಷ್ಟವನ್ನು ಪೂರಿಸು ಮಾತೆ॥೪॥
ಹಿಂದಿನ ವರುಷದೆ ಇಂದಿರೇಶನ ಮುಖ ವಂದೆ ನೋಡುತಲಿದ್ದೆ
ಒಂದು ಬ್ಯಾಡನ್ನೆ ನಾರಂದ ಮುನಿಯು ಬಿಟ್ಟಾ ನಿಂದು ಅದನೆತಿದ್ದೆ॥೫॥
****