RAO COLLECTIONS SONGS refer remember refresh render DEVARANAMA
ankita ಪಂಡರೀನಾಥವಿಠಲ
ರಾಗ: [ದರ್ಬಾರಿ ಕಾನಡ] ತಾಳ: [ಆದಿ]
ದಾರಿ ತೋರದಯ್ಯ ಧೀರ ರಾಘವೇಂದ್ರ ಪ
ಪಾರುಗಾಣಿಸಯ್ಯ ಘೋರ ಕಷ್ಟವಯ್ಯ
ಮಾರನಯ್ಯದಾಸ ವಾರಿಜಾಕ್ಷಪ್ರೀಯ 1
ಜ್ಞಾನವಿಲ್ಲವಯ್ಯ ದಾನಿ ನೀನೆ ಅಯ್ಯ
ಜ್ಞಾನÀಗಮ್ಯ ಶ್ರೀಯಪತಿ ದಾಸನಯ್ಯ 2
ಕಂಡೆ ನಿನ್ನನಯ್ಯ ಕಂಡು ಪಾಲಿಸಯ್ಯ
ಪಂಢರೀನಾಥವಿಠಲ ದಾಸನಯ್ಯ 3
***