Showing posts with label ಪಂಚರೂಪಾತ್ಮಕ ಪ್ರಪಂಚ ಕಾರ್ಯಕನುವಾದ uragadrivasa vittala. Show all posts
Showing posts with label ಪಂಚರೂಪಾತ್ಮಕ ಪ್ರಪಂಚ ಕಾರ್ಯಕನುವಾದ uragadrivasa vittala. Show all posts

Monday, 2 August 2021

ಪಂಚರೂಪಾತ್ಮಕ ಪ್ರಪಂಚ ಕಾರ್ಯಕನುವಾದ ankita uragadrivasa vittala

ಪಂಚರೂಪಾತ್ಮಕ ಪ್ರಪಂಚ ಕಾರ್ಯಕನುವಾದ

ಪಂಚೀಕರಣಮಾಡಿ ತಾ ಸಂಚರಿಸುವ ಪ


ಪಂಚೀಕರಣತಿಳಿಯದೆ ಪ್ರಪಂಚದೊಳು ಮುಳುಗಿ ನಾ

ವಂಚಿತನಾದೆ ವಿರಿಂಚಿಭಕ್ತಿಗೆ ಅ.ಪ


ಸಚ್ಚಿದಾನಂದ ರೂಪ ವ್ಯಾಪ್ತರೂಪಿ ನಾರಾಯಣ ಅಪ-

ರಿಚ್ಛಿನ್ನ ಮೂಲಪ್ರಕೃತಿ ತ್ರಿಗುಣಗೈಸಿದ

ಅಚ್ಯುತ ತನ್ನಿಚ್ಛೆಯಿಂದ ವೈಕೃತಾಕಾಶಕ್ಕೆ

ಅಂಭ್ರಣಿದೇವಿಯರನೆ ಮುಖ್ಯ ಮಾಡಿದಾ 1

ಗುಣರಾಶಿಯೊಳು ಸತ್ವಕ್ಕೆ ಶ್ರೀದೇವಿಯರು ಮುಖ್ಯ

ರಜಕೆ ಭೂದೇವಿ ತಮಕೆ ದುರ್ಗಾದೇವೇರು

ಸತ್ಯe್ಞÁನಾನಂದದಯೆ ಮೌನಪಂಚೇಂದ್ರಿಯ ಜಯ

ಅಕ್ರೌರ್ಯಗುರು ಸೇವೆಯೇ ಸತ್ವಕಾರ್ಯವು2

ತಮಕ್ರೋಧ ಅಹಂಕಾರ ಮದೋನ್ಮಾದ ಚಪಲೋದ್ಯೋಗ

ಡಂಭ ಸ್ವಚ್ಛಂದರಜದ ಕಾರ್ಯವು

ತಮದ ಕಾರ್ಯ ಅe್ಞÁನ ಮೋಹ ನಿದ್ರಾಲಸ್ಯ

ಬುದ್ಧಿಶೂನ್ಯ ತಾಪವಾದಿ ಹಿಂಸಾಕಾರ್ಯವು 3

ಸತ್ವಪ್ರಾಚುರ್ಯದಿ ಮದ ಗುಣತ್ರಯವೈಷಮ್ಯಹೊಂದಿ

ಶ್ರೇಷ್ಠಕಾರ್ಯಕೆ ಮಹತ್ತತ್ವವಾಯಿತು

ಸಾತ್ವತಾಂಪತಿಯ ಇಚ್ಛೆಯಿಂದ ಮಹತ್ತತ್ವದಿ

ಅಹಂಕಾರ ತತ್ವವೆಂಬುದೇರ್ಪಟ್ಟಿತು 4

ಮೂರಾಯಿತು ಅಹಂಕಾರ ವೈಕಾರಿಕ ತೈಜಸ

ತಾಮಸ ಅಹಂಕಾರ ವೆನುತಲಿ ಮೂರಹಂ-

ಕಾರದಿ ಮೂರು ರುದ್ರರೂಪಗಳು ಬ್ರಹ್ಮವಾಯು

ಶೇಷರಿಂದುದಯಿಸಿದರು5

ವೈಕಾರಿಕ ಅಹಂಕಾರದಿ ದೇವತಾ ದೇಹ ಮನಸು

ತೈಜಸದಿಂದ ದಶೇಂದ್ರಿಯ ಹುಟ್ಟಿತು

ಸಕಲಭೂತಪಂಚಕವು ಪಂಚತನ್ಮಾತ್ರಗಳು

ತಾಮಸಾಹಂಕಾರದಿಂದುತ್ಪನ್ನವಾದುವು6

ಸರ್ವ ಮಿಳಿತಮಾಡಿ ಬ್ರಹ್ಮಾಂಡವನೆ ಸೇರಿ

ಹರಿಯು ಪದ್ಮನಾಭರೂಪದಿಂದ ಶಯನಗೈದನು

ಸರ್ವಲೋಕೋದ್ಧಾರ ಹರಿಯು ನಾಭಿಯೊಳು ಪದ್ಮ

ತೋರಿ ಪದುಮದಲ್ಲಿ ಪದ್ಮಸಂಭವನಾಸೃಜಿಸಿದ 7

ಸರ್ವರಂತರ್ಯಾಮಿ ಸಕಲಜೀವರನ್ನು ಸೃಷ್ಟಿಗೈಸಿ

ಜೀವಯೋಗ್ಯತಾ ಕಾರ್ಯ ನಡೆಸುತಿರುವನು

ಸರ್ವಜೀವಕಾರ್ಯವು ಪಂಚವಿಂಶತಿತತ್ವ ಈ-

ಶರಿಂದಲೆ ಕಾರ್ಯನಡೆಯತಿರುವುದು8

ಶಬ್ದತನ್ಮಾತ್ರದಿಂದ ಆಕಾಶ ಹುಟ್ಟಿತು ವಾಯುಹುಟ್ಟಿತು

ಸ್ಪರ್ಶತನ್ಮಾತ್ರದಿ ರೂಪತನ್ಮಾತ್ರದಿ ಅಗ್ನಿಭೂತ ಹುಟ್ಟಿತು

ಆಗ ರಸತನ್ಮಾತ್ರದಿ ಅಷ್ಟು ಹುಟ್ಟಿತು 9

ಪ್ರಥ್ವಿ ಹುಟ್ಟಿತು ಗಂಧÀತನ್ಮಾತ್ರದಿಂದಲಿ

ಈ ಪರಿವಿರಾಟದಿಂದುಯಿಸಿದವು ಆಕಾಶ

ಕೊಂದೆ ಶಬ್ದಗುಣವು ಮಾತ್ರ ಇರುವುದು

ಅಹುದು ವಾಯವಿಗೆ ಶಬ್ದ ಸ್ಪರ್ಶವೆರಡುಗುಣಗಳು10

ತೋರುತಿರ್ಪುದಗ್ನಿ ಶಬ್ದಸ್ಪರ್ಶರೂಪ ಗುಣಗಳು

ಅಪ್ಪುಗಿಹುದು ಶಬ್ದಸ್ಪರ್ಶರೂಪರಸ

ಗುಣ ಶಬ್ದ ಸ್ಪರ್ಶ ರೂಪ ರಸ ಗಂಧವೈದು

ಪೃಥ್ವಿಗುಣವು ಈ ಪರಿ ಭೂತಪಂಚಕಗಳ ಅರಿವುದು 11

ಪಂಚಭೂತಗಳು ತಮ್ಮ ಸ್ವಾಂಶಗಳ ಭಾಗಗೈಸಿ ಪ್ರ-

ಪಂಚ ಕಾರ್ಯಕಿತ್ತ ಪರಿಯದೆಂತೆನೆ ಆಕಾಶ

ದರ್ಧಭಾಗ ಭೂತ ಪ್ರೇತ ಪಿಶಾಚಿಗಳಿಗೂ ಉಳಿ

ದರ್ಧದೊಳ್ ಪಾದ ಪಾದವೆನ್ನೆ ಜೀವಕೋಟಿಗೂ12

ವಾಯು ತನ್ನರ್ಧಭಾಗ ಪಕ್ಷಿ ಪನ್ನಗಾದಿಳಿಗೂ

ಮಿಕ್ಕರ್ಧದೊಳು ಪಾದ ಭಾಗ ಜೀವಕೋಟಿಗೂ

ಅಗ್ನಿತನ್ನರ್ಧಭಾಗ ದೇವ ಋಷಿಗಳಿಗೂ

ಮಿಕ್ಕಧರ್Àದೊಳ್ ಪಾದಭಾಗ ಜೀವಕೋಟಿಗೂ13

ಅಪ್ಪುತನ್ನರ್ಧಂಶ ಜಲಚರಪ್ರಾಣಿಗಳಿಗು

ಮಿಕ್ಕರ್ಧದೊಳು ಪಾದಭಾಗ ಜೀವಕೋಟಿಗೂ

ಪೃಥ್ವಿ ತನ್ನರ್ಧಂಶ ಜಡಜೀವಕೋಟಿಗೂ ಮಿಕ್ಕ

ರ್ಧದೊಳ್ ಪಾದಭಾಗ ಜೀವಕೋಟಿಗೂ14

ಪೃಥ್ವಿ ಅಪ್ಪು ತೇಜೋ ವಾಯು ಆಕಾಶಗಳು

ಸೂಕ್ಷ್ಮರೂಪದಿಂದೆರಡೆರಡಾದವು

ಆಕಾಶತನ್ನರ್ಧಾಂಶದಲ್ಲಿ ವಾಯ್ವಗ್ನಿ ಅಪ್ಪು ಪೃಥ್ವಿಗಳಿ

ಗೆ ಕೊಟ್ಟು ಸ್ವಾಂಶ ಅಂತಃಕರಣವೆನಿಸಿತು 15

ವಾಯು ಸ್ವಾಂಶದಿಂದುದಾನವೆಂದೆನಿಸಿ ಮಿಕ್ಕ

ಪೃಥ್ವೈ ಪ್ತೇಜಾಕಾಶಗಳಿಗೆ ತನ್ನ ಚಲನ ಕೊಟ್ಟಿತು

ಅಗ್ನಿ ತನ್ನಸ್ವಾಂಶದಿಂದ ಚಕ್ಷುಸೇಂದ್ರಿಯ

ವೆನಿಸಿ ವಾಯ್ವಾಕಾಶಅಪ್ಪು ಪೃಥ್ವಿಗುಷ್ಣ ಕೊಟ್ಟಿತು 16

ಅಪ್ಪು ತನ್ನ ಸ್ವಾಂಶದಿಂ ರಸವೆಂದೆನಿಸಿ ಮಿಕ್ಕ

ವಾಯ್ವಾಕಾಶಾಗ್ನಿ ಪೃಥ್ವಿಗೆ ದ್ರವವ ಕೊಟ್ಟಿತು

ಪೃಥ್ವಿತನ್ನ ಸ್ವಾಂಶದಿಂ ಗಂಧವೆಂದೆನಿಸಿ ಮಿಕ್ಕ

ಅಪ್ತೇಜವಾಯ್ವಾಕಾಶಕೆ ಕಠಿಣ ಕೊಟ್ಟಿತು 17

ಭೂತಪಂಚಕಗಳಿಗೆ ಸದ್ಯೋಜಾತ ವಾಮದೇವ

ಅಘೋರ ತತ್ಪುರುಷ ಈಶಾನ ರೂಪವು

ಅಧಿಷ್ಠಾನರಾಗಿ ಅವರಂತರ್ಯಾಮಿಯಾಗಿ

ಅನಿರುದ್ಧಾದಿ ಐದು ಭಗವನ್ಮೂರ್ತಿ ಇರುವುದು 18

ನಾಮರೂಪ ವರ್ಣಗುಣ ಸ್ವಭಾವ ತೇಜ

ಸುಮುಖ ದೇವರಶಕ್ತಿ ಅಕ್ಷರ ಕ್ರಿಯಾ

ಎಂಬೀ ಹತ್ತು ಗುಣಗಳು ಭೂತ ಒಂದಕ್ಕೆ ತಿಳಿದು

ಉಪಾಸನ ಮಾಳ್ಪಾದೂ ಬುಧರು ಎಲ್ಲರು 19

ನಾಮವೇ ಆಕಾಶ ರೂಪ ಒಟ್ಟು ಭಾವ ಬಯಲು

ವರ್ಣ ಕಪ್ಪು ಗುಣಶಬ್ದ ಕ್ರಿಯ ಅನುಗ್ರಹ

ಮುಖವೇ ಈಶಾನ ದೇವತೆ ಪರಶಿವಶಕ್ತಿ

ಪರಾಶಕ್ತಿ ಅಕ್ಷರವೇ ನಾದವು20

ನಾಮ ವಾಯುರೂಪ ಷಟ್ಕೋಣ ವರ್ಣನೀಲ

ಸ್ವಭಾವಚಲನ ಗುಣವು ಸ್ಪರ್ಶ ಕ್ರಿಯಾಸಂಚಾರ

ಮುಖ ತತ್ಪುರುಷ ದೇವತೆ ಸದಾಶಿವ ಶಕ್ತಿ

ಅಕ್ಷರ ಬಿಂದುವೆನಿಪುದು 21

ನಾಮ ಅಗ್ನಿರೂಪ ಮುಕ್ಕೋಣವರ್ಣ ರಕ್ತವರ್ಣ

ಭಾವ ಉಷ್ಣಗುಣತೇಜ ಕ್ರಿಯಾಸಂಹಾರ

ಮುಖ ಅಘೋರ ದೇವತೆ ರುದ್ರಶಕ್ತಿ ಪಾರ್ವತಿ

ಅಕ್ಷರ ಮಕಾರ 22

ನಾಮ ಅಪ್ಪುರೂಪ ಅಧರ್Éೀಂದು ಶ್ವೇತವರ್ಣ

ಸ್ವಭಾವದ್ರವ ಗುಣ ಮಾಧುರ್ಯ

ಕ್ರಿಯ ರಸಮುಖ ವಾಮದೇವ ದೇವತೆ

ವಿಷ್ಣುಶಕ್ತಿ ಅಕ್ಷರಉಕಾರ ಎಂದು ಪೇಳ್ವರು 23

ನಾಮವೇ ಪೃಥ್ವಿರೂಪ ಚತುಷ್ಕೋಣ ವರ್ಣ

ಹೇಮ ಸ್ವಭಾವವೇಕಠಿಣ ಕ್ರಿಯ ಸೃಷ್ಟಿ

ಗುಣವೆ ಗಂಧವು ಮುಖಸದ್ಯೋಜಾತ ದೇವತೆ

ಬ್ರಹ್ಮಶಕ್ತಿ ಸರಸ್ವತಿ ಅಕ್ಷರ ಅಕಾರವು 24

ಉಕ್ತರೀತಿ ಹತ್ತು ಗುಣಗಳೊಳ್ ಭೂತ ಒಂದ-

ಕ್ಕೆತಿಳಿದು ಈ e್ಞÁನೇಂದ್ರಿಯಗಳೆಂತಾದವು

ಎಂದರಿವುದು ಆಕಾಶಸಮಾನಾಂಶ ಅಗ್ನಿಯು

ಮುಖ್ಯಾಂಶದಿರೆ ಶ್ರೋತ್ರೇಂದ್ರಿಯ ಹುಟ್ಟಿ ತೋರುತಿರುವುದು25

ವಾಯುಸಮಾನಾಂಶ ಬಂದು ಅಗ್ನಿ ಮುಖ್ಯಾಂಶದಿರೆ

ತ್ವಗೇಂದ್ರಿಯವು ತಾನೆ ತೋರುತಿರುವುದು

ಅಪ್ಪು ಸಮಾನಾಂಶ ಬಂದು ಅಗ್ನಿ ಮುಖ್ಯಾಂಶದಿರೆ

ಜಿಹ್ವೇಂದ್ರಿಯವು ತೋರುತಿರುವುದು26

ಪೃಥ್ವಿಸಮಾನಾಂಶ ಬಂದು ಅಗ್ನಿ ಮುಖ್ಯಾಂಶದಿರೆ

ಘ್ರಾಣೇಂದ್ರಿಯವು ತಾನೆ ತೋರುತಿರುವುದು

ಅಗ್ನಿ ಸ್ವಾಂಶದಿಂದ ಚಕ್ಷುಷೇಂದ್ರಿಯವೆಂದು

ಹಿಂದೆಯೇ ಈ ವಿವರ ಪೇಳಿರುವುದು27

ಪೃಥ್ವಿಸಮಾನಾಂಶದೊಡನೆ ಆಕಾಶ ಸಮಾಂಶಸೇರೆ

ವಾಗೇಂದ್ರಿಯವೆ ತಾನೆ ತೋರುತಿರುವುದು ಪೃಥ್ವಿ

ಮುಖ್ಯಾಂಶದೊಡನೆ ವಾಯು ಸಮಾಂಶಸೇರೆ

ಘ್ರಾಣೇಂದ್ರಿಯವು ತಾನೆ ತೋರುವುದು 28

ಪೃಥ್ವಿಮುಖ್ಯಾಂಶದೊಡನೆ ಅಗ್ನಿ ಸಮಾಂಶಸೇರೆ

ಪಾದೇಂದ್ರಿಯವು ತಾನೆತೋರುತಿರ್ಪದು

ಪೃಥ್ವಿ ಮುಖ್ಯಾಂಶರೊಡನೆ ಅಪ್ಪು ಸಮಾವಾಂಶ ಸೇರೆ

ಪಾಯೇಂದ್ರಿಯವೆಂದು ತೋರುತಿರ್ಪುದು29

ಪೃಥ್ವಿಸ್ವಾಂಶವೇ ಗುಹ್ಯೇಂದ್ರಿಯವೆಂದು ಪೂ

ರ್ವೋಕ್ತ ರೀತಿಗಣನೆ ತರುವುದು ಈ ರೀತಿ

ಕರ್ಮೇಂದ್ರಿಯಗಳೆಲ್ಲ ಪೃಥ್ವಿ ತತ್ವದಿಂದಲೇ-

ರ್ಪಟ್ಟು ಬೆಳಗುತಿರುವುದು30

ಆಕಾಶ ಸಮಾನಾಂಶ ಅಪ್ಪು ಮುಖ್ಯಾಂಶದಿರೆ ಶಬ್ದ

ವಾಯು ಸ್ವಯಾಂಶದಿ ಅಪ್ಪು ಮುಖ್ಯಾಂಶದಿ

ಸ್ಪರ್ಶತೋರ್ಪುದು ಅಗ್ನಿ ಸಮಾನಾಂಶ ಅಪ್ಪು ಮು

ಖ್ಯಾಂಶದಿರೂಪ ಗಂಧ ವಹುದು ಪೃಥ್ವಿ ಸಮಾಂಶ

ಅಪ್ಪು ಮುಖ್ಯಾಂಶದಿಂದಲೆ31

ಅಪ್ಪುಸ್ವಯಾಂಶವೇ ರಸವು ಎಂದೆನಿಸಿತು

ತನ್ಮಾತ್ರಪಂಚಕಕ್ಕೆ ಮೂಲ ಅಪ್ಪುತತ್ವವು

ಪ್ರಾಣಾದಿಪಂಚಗಳ ಮುಂದೆ ವಿವರಿಸಿಹುದು

ವಾಯುತತ್ವವೇ ಅದಕೆ ಮುಖ್ಯಕಾರಣ32

ವಾಯು ಮುಖ್ಯಾಂಶದೊಳು ಆಕಾಶ ಸಮಾನಾಂಶ

ಸೇರೆ ಸಮಾನ ವಾಯುವೆಂತೆಂದೇರ್ಪಟ್ಟಿತು

ವಾಯು ಮುಖ್ಯಾಂಶದೊಡನೆ ಅಗ್ನಿಸಮಾನಾಂಶ ಸೇರೆ

ವ್ಯಾನ ವಾಯು ಎಂತೆಂದೇರ್ಪಟ್ಟಿತು 33

ವಾಯು ಮುಖ್ಯಾಂಶದೊಳು ಅಪ್ಪು ಸಮಾನಾಂಶ ಸೇರೆ

ಅಪಾನವಾಯುವೆಂತೆಂದೇರ್ಪಟ್ಟಿತು ವಾಯು

ಮುಖ್ಯಾಂಶದೊಡನೆ ಪೃಥ್ವಿಸಮಾನಾಂಶ ಸೇರಲು

ಪ್ರಾಣ ವಾಯು ಉತ್ಪನ್ನವಾಯಿತು34

ವಾಯುವಿನ ಸ್ವಯಾಂಶವೇ ಉದಾನವಾಯುವೆನಿಸಿತು

ಮುಂದೆ ವಿವರಿಸುವುದು e್ಞÁನ ಪಂಚಕ ಈ e್ಞÁನ

ಪಂಚಕಕ್ಕೆ ಆಕಾಶ ತತ್ವವೇ ಮುಖ್ಯಕಾರಣವೆಂದು

ಬುಧರು ಪೇಳ್ವರು35

ಆಕಾಶ ಮುಖ್ಯಾಂಶದಿ ವಾಯು ಸಮಾನಾಂಶ ಸೇರಿ

ದಾಗಲೆ ಮನಸು ಎಂಬುವುದು ಹುಟ್ಟಿತು

ಆಕಾಶ ಮುಖ್ಯಾಂಶದಿ ಅಗ್ನಿ ಸಮಾನಾಂಶ ಸೇರಿ

ದಾಗಲೆ ಬುದ್ಧಿ ಎಂಬುದು ಗೋಚರವಾಯಿತು 36

ಆಕಾಶ ಮುಖ್ಯಾಂಶದೊಳು ಅಪ್ಪು ಸಮಾನಾಂಶ

ಸೇರೆ ಚಿತ್ತವೆಂಬುದು ವ್ಯಕ್ತವಾಯಿತು

ಆಕಾಶ ಮುಖ್ಯಾಂಶದೊಳು ಪೃಥ್ವಿಸಮಾನಾಂಶ

ಸೇರಿ ಅಹಂಕಾರವೆಂಬುದೇರ್ಪಟ್ಟಿತು 37

ಆಕಾಶ ಸ್ವಾಂಶವೇ ಕತೃತ್ವವೆಂದೆನಿಸಿತು

ಈಪರಿಯ ತಿಳಿವುದು e್ಞÁನಪಂಚಕ

e್ಞÁನೇಂದ್ರಿಯ ಕರ್ಮೇಂದ್ರಿಯ ಪಂಚತನ್ಮಾ

ತ್ರಗಳಿಗೆ ಆಧ್ಯಾತ್ಮಿಕಾದಿಭೌತಿಕದೇವತೆಗಳ ತಿಳಿವುದು 38

****