ಈರೇಳು ಲೋಕದೊಳಗೆ ಇವಗೆಣೆಗಾಣೆ
ಗೋವಿಂದರಾಯನಿಗೆಮಾರನ್ನ ಪೆತ್ತ
ಮನೋಹರ ಮೂರುತಿ ಗೋವಿಂದರಾಯನಿಗೆ ಪ.
ನೀಲನೀರದನಿಭ ನಿರ್ಮಲಕಾಯ ಗೋವಿಂದರಾಯನಿಗೆಪಾಲಸಾಗರದಲ್ಲಿ ಪಡಿಸಿ ಪಾಲಿಪ ಗೋವಿಂದರಾಯನಿಗೆ1
ಮತ್ಸ್ಯ ಕೂರ್ಮ ವರಾಹ ನಾರಸಿಂಹ ವಾಮನ ಗೋವಿಂದರಾಯನಿಗೆಕುತ್ಸಿತರಾಯರ ಕೊಂದÀ ಕೊಡಲಿಯ ಗೋವಿಂದರಾಯನಿಗೆ2
ರÀಘುಕುಲ ಯದುಕುಲ ಬುದ್ದ ಕಲ್ಕಿಯಾದ ಗೋವಿಂದರಾಯನಿಗೆ ಸೊಗಸುನುಡಿಗೆ ಮೆಚ್ಚ್ಚಿ ಶೋಕವ
ಕಳೆವ ಶ್ರೀ ಗೋವಿಂದರಾಯನಿಗೆ 3ಕಡೆಗೋಲ ಪಿಡಿದು ನಮ್ಮುಡುಪಿಲಿ ನೆಲೆಸಿದ ಗೋವಿಂದರಾಯನಿಗೆಬಡನಡುವಿನ ಭಾವಕಿಯರೊಡನಾಡುವ ಗೋವಿಂದರಾಯನಿಗೆ 4
ವರ್ಣಿಸಿ ಪೊಗಳುವ ವಾದಿರಾಜಗೊಲಿದÀ ಗೋವಿಂದರಾಯನಿಗೆಚಿನ್ನದ ಚೆಲುವನೆ ಜಯ ಹಯವದನ ಶ್ರೀ ಗೋವಿಂದರಾಯನಿಗೆ 5
***
ಈರೇಳು ಲೋಕದೊಳಗೆ ಇವಗೆಣೆಗಾಣೆ ಗೋವಿಂದರಾಯನಿಗೆ
ಮಾರನ್ನ ಪೆತ್ತ ಮನೋಹರ ಮೂರುತಿ ಗೋವಿಂದರಾಯನಿಗೆ || PA ||
ನೀಲನೀರದನಿಭ ನಿರ್ಮಲಕಾಯ ಗೋವಿಂದರಾಯನಿಗೆ
ಪಾಲಸಾಗರದಲ್ಲಿ ಪವಡಿಸಿ ಪಾಲಿಪ ಗೋವಿಂದರಾಯನಿಗೆ || 1 ||
ಮತ್ಸ್ಯ ಕೂರ್ಮ ವರಾಹ ನಾರಸಿಂಹ ವಾಮನ ಗೋವಿಂದರಾಯನಿಗೆ
ಕುತ್ಸಿತರಾಯರ ಕೊಂದ ಕೊಡಲಿಯ ಗೋವಿಂದರಾಯನಿಗೆ || 2 ||
ರಘುಕುಲ ಯದುಕುಲ ಬುದ್ದ ಕಲ್ಕಿಯಾದ ಗೋವಿಂದರಾಯನಿಗೆ
ಸೊಗಸುನುಡಿಗೆ ಮೆಚ್ಚ್ಚಿ ಶೋಕವ ಕಳೆವ ಶ್ರೀ ಗೋವಿಂದರಾಯನಿಗೆ || 3 ||
ಕಡೆಗೋಲ ಪಿಡಿದು ನಮ್ಮುಡುಪಿಲಿ ನೆಲೆಸಿದ ಗೋವಿಂದರಾಯನಿಗೆ
ಬಡನಡುವಿನ ಭಾವಕಿಯರೊಡನಾಡುವ ಗೋವಿಂದರಾಯನಿಗೆ || 4 ||
ವರ್ಣಿಸಿ ಪೊಗಳುವ ವಾದಿರಾಜಗೊಲಿದ ಗೋವಿಂದರಾಯನಿಗೆ
ಚಿನ್ನದ ಚೆಲುವನೆ ಜಯ ಹಯವದನ ಶ್ರೀ ಗೋವಿಂದರಾಯನಿಗೆ || 5 ||
***
Īrēḷu lōkadoḷage ivageṇegāṇe gōvindarāyanige māranna petta manōhara mūruti gōvindarāyanige || PA ||
nīlanīradanibha nirmalakāya gōvindarāyanige pālasāgaradalli pavaḍisi pālipa gōvindarāyanige || 1 ||
matsya kūrma varāha nārasinha vāmana gōvindarāyanige kutsitarāyara konda koḍaliya gōvindarāyanige || 2 ||
raghukula yadukula budda kalkiyāda gōvindarāyanige sogasunuḍige meccci śōkava kaḷeva śrī gōvindarāyanige || 3 ||
kaḍegōla piḍidu nam’muḍupili nelesida gōvindarāyanige baḍanaḍuvina bhāvakiyaroḍanāḍuva gōvindarāyanige || 4 ||
varṇisi pogaḷuva vādirājagolida gōvindarāyanige cinnada celuvane jaya hayavadana śrī gōvindarāyanige || 5 ||
Plain English
Irelu Lokadolage Ivagenegane Govindarayanige Maranna Petta Manohara Muruti Govindarayanige || Pa ||
Nilaniradanibha Nirmalakaya Govindarayanige Palasagaradalli Pavadisi Palipa Govindarayanige || 1 ||
Matsya Kurma Varaha Narasinha Vamana Govindarayanige Kutsitarayara Konda Kodaliya Govindarayanige || 2 ||
Raghukula Yadukula Budda Kalkiyada Govindarayanige Sogasunudige Meccci Sokava Kaleva Sri Govindarayanige || 3 ||
Kadegola Pididu Nam’mudupili Nelesida Govindarayanige Badanaduvina Bhavakiyarodanaduva Govindarayanige || 4 ||
Varnisi Pogaluva Vadirajagolida Govindarayanige Cinnada Celuvane Jaya Hayavadana Sri Govindarayanige || 5 ||
***