Showing posts with label ಕಡಲ ಒಡಲೊಳಗಿದ್ದು ಬಡಬಾಗ್ನಿ jagannatha vittala. Show all posts
Showing posts with label ಕಡಲ ಒಡಲೊಳಗಿದ್ದು ಬಡಬಾಗ್ನಿ jagannatha vittala. Show all posts

Saturday, 14 December 2019

ಕಡಲ ಒಡಲೊಳಗಿದ್ದು ಬಡಬಾಗ್ನಿ ankita jagannatha vittala

ಜಗನ್ನಾಥದಾಸರು
ಕಡಲ ಒಡಲೊಳಗಿದ್ದು ಬಡಬಾಗ್ನಿ ಎನಿಸುವೆ
ಅಡವಿಯೊಳಗಿದ್ದು ದಾವಾಗ್ನಿ | ದಾವಾಗ್ನಿ ಎನಿಸುವಿ
ಪೊಡವಿಯೊಳು ಭೌಮ ಎನಿಸುವಿ 1


ಕೃಷ್ಣ ವತ್ರ್ಮನೆ ಎನ್ನ ದುಷ್ಟ ಕರ್ಮವ ನೋಡಿ
ಸಂತೈಸಿ ಭಾರ್ಗವಗ
ಧಿಷ್ಠಾನನೆಂದು ಮೊರೆಹೊಕ್ಕೆ 2


ದೇವಮುಖ ಎನ್ನಯ ಕರಾವಲಂಬನವಿತ್ತು
ಪಾಮರಗೊಲಿದು ಭವತಾಪ | ಭವತಾಪ ಪರಿಹರಿಸು
ಪಾವಕನ ಜನಕ ಪ್ರತಿದಿನ 3


ರುದ್ರಾಕ್ಷಗನೆ ಮಹೋಪದ್ರಗಳ ಪರಿಹರಿಸು
ಭದ್ರಪ್ರಕಾಶ ಮಹ ಭದ್ರ | ಮಹಭದ್ರ ವಿಖ್ಯಾತ ಕರುಣಾಸ
ಮುದ್ರ ನೀನೆಂದು ಶರಣೆಂಬೆ 4


ವೀತಿಹೋತ್ರನೆ ಜಗನ್ನಾಥ ವಿಠ್ಠಲನ ಸಂ
ಪ್ರೀತಿ ಪೂರ್ವಕದಿ ಸುತಿಸುವ | ತುತಿಸಿ ಹಿಗ್ಗುವ ಭಾಗ್ಯ
ಜಿತವಾಗಿ ಇರಲಿ ಎಂದೆಂದು 5

 ಶುಚಿನಾಮಕನೆ ಮನೋವಚನಾದಿಗಳ ದೋಷ
ನಿಭಯಗಳನೆಣಿಸಿ ದಣಿಸದೆ | ದಣಿಸದೆ ಮಚ್ಚಿತ್ತ
ಖಚಿತವನು ಮಾಡೊ ಹರಿಯಲ್ಲಿ 6

ಹುತವಹನೆ ಎನ್ನ ದುರ್ಮತಿಯ ಪರಿಹರಿಸಿ ಸ
ಪಥ ನಿತ್ಯ ನಾ
ನುತಿಸುವೆ ನಿನ್ನಾ ಕರುಣಾಳು 7
*********