Showing posts with label ರಾಮ ಪಾದವೇ ಗತಿ ನೇಮನಿಷ್ಠೆಗಳರಿಯದ raghurama vittala. Show all posts
Showing posts with label ರಾಮ ಪಾದವೇ ಗತಿ ನೇಮನಿಷ್ಠೆಗಳರಿಯದ raghurama vittala. Show all posts

Thursday, 5 August 2021

ರಾಮ ಪಾದವೇ ಗತಿ ನೇಮನಿಷ್ಠೆಗಳರಿಯದ ankita raghurama vittala

   ..

ರಾಮ ಪಾದವೇ ಗತಿ ನೇಮನಿಷ್ಠೆಗಳರಿಯದ

ಪಾಮರ ಜನರಿಗೆಲ್ಲ ಪ


ತಾಮಸಾಹಂಕಾರ ಪಂಕದಿ |

ಕಾಮಮದ ಮತ್ಸರಗಳಿಂದಲಿ

ಹೇಮ ಕಾಮಿನಿಲಂಪಟದಿ ನಿ | ಸ್ಸೀಮರೆನಿಸುವ

ತಾಮಸೌಘಕೆ ಅ.ಪ


ಸ್ನಾನ ಮೌನ ಜಪತಪಗಳನರಿಯದೆ

ಸ್ವಾಮಿ ನಿನ್ನನು ಮುಟ್ಟಿ ಪೂಜಿಸದೆ

ಸೀಮೆಯರಿಯದ ಕಾಮಕರ್ಮದಿ

ನೇಮವಿಲ್ಲದ ಕ್ಷುದ್ರಸ್ವಾರ್ಥದಿ

ತಾಮಸರ ಸಂಸರ್ಗದಿಂದ ವಿ

ರಾಮವರಿಯದ ಜನರ ಪಾಲಿಗೆ 1

e್ಞÁನ ಭಕ್ತಿ ವೈರಾಗ್ಯಗಳರಿಯದೆ

e್ಞÁನಿಜನರ ಸಂಗವ ಬಯಸದೆ

ಹೀನದುಷ್ಕರ್ಮಗಳ ಮಾಡುತ

ನಾನು ತಾನೆಂಬ ಕೊಬ್ಬಿಲಿ

ಜಾನಕೀಪತಿ ನಿನ್ನ ಮಹಿಮೆಯ

ಕಾಣದಿಹ ದುಷ್ಕರ್ಮಿಜನರಿಗೆ 2

ಶ್ರೀನಿಧಿ ನೀ ಕರುಣಿಸಿ ರಕ್ಷಿಸದಿರೆ

ದೀನಜನರ ಪಾಲಿಪರಾರೋ

ಸಾನುರಾಗದಿ ಬೇಡಲರಿಯದ

ಜ್ಞಾನಹೀನರ ತಪ್ಪನೆಣಿಸದೆ

ನೀನೆ ಕೈಪಿಡಿದೆತ್ತಿ ರಕ್ಷಿಸು

ಮಾನನಿಧಿ ರಘುರಾಮವಿಠಲ 3

****