..
ಜೀವ ಕರ್ತೃತ್ವದ ಭ್ರಮೆಯ ಬಿಡಿಸೊ ಪ
ಜೀವೇಶನೊಡೆಯ ಶ್ರೀ ವೇಣುಗೋಪಾಲ ಹರಿ ಅ.ಪ
ಮಿಥ್ಯೆವೆಂಬುದು ಬಲ್ಲೆ ಕರ್ತೃತ್ವ ನಮಗಿಲ್ಲ
ಪ್ರತ್ಯಕ್ಷಕಪವಾದದಲ್ಲಿ ಬಾಳ್ವೆ
ವ್ಯರ್ಥಧಾವತಿಪಡುವೆ ಸರ್ವಕರ್ತನ ಮರೆದು
ಯತ್ನಕೆ ವಶವಲ್ಲ ಮಿಥ್ಯೆ ಭಾವವು ಬಿಡಲು 1
ವಿಷಯ ವಿಷವದು ಬಲ್ಲೆ ತಲ್ಲೋಭ ಬಿಡಲರಿಯೆ
ವಿಷಮಗತಿ ಪ್ರವಹದಲಿ ವಿವಶನಾಗಿ
ಹುಸಿನಂಬಿ ತೆರಳುತಿಹೆ ಹರುಷ ಕಾಣದೆ ನಿಜದೆ
ಕೃಶನಾದೆ ಹರಿಯೆನ್ನ ಕೈಪಿಡಿದು ಉದ್ಧರಿಸೊ 2
ಗುಣವಿಲ್ಲ ದೋಷಿಲ್ಲದೆಡೆಯಿಲ್ಲ ಎನ್ನಲ್ಲಿ
ದನುಜಾರಿ ನಿನ್ನವರ ಕರುಣ ಉಂಟೊ
ಪ್ರಣತಾರ್ಥಿ ಹರ ಶ್ರೀ ಜಯೇಶವಿಠಲನಲ್ಲಿ
ಮನವಿತ್ತು ನೋಡಿ ನೀನೆನಗೊಲಿಯೊ ಶ್ರುತಿ ವಿನುತ 3
***