ಕಾಖಂಡಕಿ ಶ್ರೀ ಮಹಿಪತಿರಾಯರು
ಕೇಳು ಕಿವಿಗೊಟ್ಟು ನಿನ್ನ ನಿಜಗುಹ್ಯದ ಸುಮಾತ | ಹೇಳುತಿಹ್ಯಾ ನಂದಬೋಧ ತಿಳಿಯಾ ವಿಶ್ವನಾಥ ಪ
ನೋಡಿ ನಿನ್ನ ಗೂಡಿನೊಳು ಮಾಡಿಕೊ ಸ್ವಹಿತ ಚಾಡುವಿಡಿದು ನಡೆದು ಹೋಗಿ ಕೂಡಿರೊ ಸುಪಥ ಹಿಡಿಯದೆ ಆಲೇಶದ ಮನೆಯ ನೀ ಪಡಕೊ ಘನ ಅಮೃತ ಬೇಡಿ ಬಯಸಿದರಾಗದು ವಸ್ತು ಹಿಡಕೊಡುವ ಗುರುನಾಥ 1
ಖೂನ ಕಂಡು ಗುರುಪಾದದಲಿ ತನುಮನದಲಿ ನೀಜಡಿಯೊ | ಮೌನಮುಗ್ದದಲಿ ನೀನೆಂದು ಅನುಭವದ ನೀಹಿಡಿಯೊ ನಾನು ನೀನೆಂಬುದು ತಾ ಬಿಟ್ಟರೆ ಸನ್ಮತ ಸುಖನಿಲುಕಡಿಯೊ ಜ್ಞಾನ ದೈವತೆಯಂಬು ಮಾರ್ಗದಲಿ ಅನುಸರಿಸಿ ನೀ ನಡಿಯೋ 2
ಒಂದೆ ಮನದಲಿ ಹೊಂದಿ ನಿಜವುಸಂದಿಸಿಕೊಸ್ವಾನಂದ ಬಂದ ಜನ್ಮವು ಸಾರ್ಥಕ ಮಾಡುದು ಇದು ನಿನಗೆ ಬಲುಚಂದ ಹಿಂದೆ ಮುಂದೆ ತಾ ತುಂಬ್ಯಾನೆ ಮಹಿಪತಿಸ್ವಾಮಿ ಸಚ್ಚಿದಾನಂದ ಹೊಂದಿದವರನುಮಾನವ ಬಿಡಿಸಿ ಛೇದಿಸುವ ಭವಬಂಧ 3
***