Showing posts with label ಅಪಾರ ಕೃಪಾಕರ ತಪೋವಿತ್ತಪಾವರ tandevenkatesha vittala. Show all posts
Showing posts with label ಅಪಾರ ಕೃಪಾಕರ ತಪೋವಿತ್ತಪಾವರ tandevenkatesha vittala. Show all posts

Monday 6 September 2021

ಅಪಾರ ಕೃಪಾಕರ ತಪೋವಿತ್ತಪಾವರ ankita tandevenkatesha vittala

 ankita ತಂದೆವೆಂಕಟೇಶವಿಠಲ

ರಾಗ: ಕಾಪಿ/ಜಿಂಗಲಾ ತಾಳ: ಆದಿ


ಅಪಾರಕೃಪಾಕರ ತಪೋವಿತ್ತಪಾವರ


ಭೂಪರದನಜಾ ತಾಪಗಾಲಯ ಸ-

ರ್ವಾಪರಾಧಾಪಹ ಪ್ರತಾಪ ಮಹಿಮಾಪಯೋಧೆ ಅ.ಪ


ನಳಿನಾಕ್ಷಿ ತುಳಸೀಸರ ವರ ಮಾಲಿಕೋಜ್ವಲಕಂಧರ

ಕಾಳೀಶಸಮಯ ಜಲ ಜಾಳೀಪರಾಗೋತ್ಥ 

ಧೂಳೀ ಸುಧಾಳೀ ನೀಕೇಳೀರತ ಗಾಳೀಯುತ  1

ವಂದಿತಬೃಂದಜನ ಸುರಮಂದಾರ ಬೃಂದಾವನ

ಮಂದೀರಸಾಧಿತ ಪರಂಧಾಮಸಿದ್ಧಾಂತ 

ಸಿಂಧೂರಾಕೇಂದೂ ಕರ್ಮಂದಿ ರಾಘವೇಂದ್ರವರ 2

ಶ್ರೀ ತಂದೆವೆಂಕಟೇಶವಿಠಲ ಶ್ರೀತಾನುದಾಸಾಧಿಶಾ

ಖ್ಯಾತಾ ಮಂತ್ರಾಲಯಾದ್ಭೂತನಿಕೇತನ 

ದೂತ ಹೃದ್ವ್ಯಥಾಪ ಧೂತ ನಿಶೀಥಕರ 3

***


ಭೂಪ ರದನಜಾ ತಾಪಗಾಲಯ=ಭೂಮಿಯೊಡೆಯ

 ವರಾಹ ದೇವರ ಕೋರೆದಾಡೆಗಳಿಂದ ಉದ್ಭವಿಸಿದ 

 ತುಂಗ-ಭದ್ರಾತೀರ ನಿವಾಸಿ; ಕಾಳೀಶ 

 ಸಮಯ=ವಾಯುದೇವರ ಮತ; ಜಲ ಜಾಳೀ 

 ಪರಾಗೋತ್ಥ ಧೂಳೀ ಸುಧಾಳೀ ನೀಕೇಳೀರತ=ಸುಧೆಗೆ 

 ಪರಿಮಳವನಿತ್ತವರು; ಸಾಧಿತ ಪರಂಧಾಮ 

 ಸಿದ್ಧಾಂತ=ಮುಕ್ತಿಯನ್ನು ದೊರಕಿಸುವ ವಾಯುಮತ; 

 ಸಿಂಧೂ ರಾಕೇಂದು=ಸಮುದ್ರಕ್ಕೆ ಪೂರ್ಣಚಂದ್ರನಂತೆ; 

 ಶ್ರೀತಾನುದಾಸಾಧಿಶಾ=ಸೇವಕರ ಹೃದಯದ ವ್ಯಥೆಯನ್ನು 

 ಚೆನ್ನಾಗಿ ತಂಪಾಗಿಸುವ ಚಂದ್ರ; 

 ಹೃದ್ವ್ಯಥಾಪ=ಹೃದಯದ ತಾಪ; ನಿಶೀಥಕರ=ಚಂದ್ರ;