..
ಧ್ಯಾನಿಸೋ ಮಾನವಾ ದೀನೋದ್ಧಾರಿ ವಿಜಯದಾಸರನಾ |
ದೇವಮಾನಿತರು ಧೇನು ಸಮ ಪ.
ಭೃಗುಮುನಿಯೆ ಈ ಜಗದಿ | ಸಂಜನಿಸಿ ಮದಪಾಲಿಸಿ
ಘೋರ ಭವಕ್ಲೇಶ ಪರಿಹರಿಸಿ ಸುಖವಾ ಬೀರಿದಾ1
ಗುರುಪವನ ಶಾಸ್ತ್ರವ ಕನ್ನಡದಿ ವಿರಚಿಸಿ |
ಜ್ಞಾನಪಥ ತೋರಿ ಶಿರಿವದನ ಮಹಿಮೆ ಸಾರಿದಾ2
ಶ್ರೀವರ ಶಾಮಸುಂದರನ ಸ್ತವಿಸಿ ಸಂಸೇವಿಸಿ |
ಭಾವದಲಿ ನೋಡಿ ನಲಿದವರು ಕರುಣಾಶಾಲಿ 3
***