ರಾಗ ಆನಂದಭೈರವಿ ಆದಿತಾಳ
ಸಾಕು ಸಂಸಾರ ನಮಗಿನ್ನೇತರ ಒಗತನ ||ಪ||
ಲೋಕದೊಳಗೆ ಎನ್ನ ಬೇಕೆಂಬುವರಿಲ್ಲ
ವಿವೇಕಿ ಪುರುಷ ಪರವಶನಾದರೆ ಏತರ ಸಂಸಾರ ||ಅ||
ಕಾಮವೆಂಬೊ ನೆಗೆಹೆಣ್ಣು ಎನ್ನ ಕಟ್ಟಿ ಆಳುತಾಳೆ
ಕ್ರೋಧವೆಂಬೊ ಸವತಿ ಕೊಲ್ಲುತಾಳೆ , ಏತರ ಒಗತನ ||
ಮದವೆಂಬ ಮೈದುನ ಎನ್ನ ಒಡನೆ ನಗುತಾನೆ
ಮತ್ಸರವೆಂಬ ಭಾವ ಎನ್ನ ತುಚ್ಚವು ಮಾಡುತಾನೆ, ಏತರ ಒಗತನ ||
ಮೋಹವೆಂಬ ಅತ್ತಿಗೆಯೆನ್ನ ಕೊಂಡು ಮುಣುಗುತಾಳೆ
ಲೋಭವೆಂಬೊ ನಾದಿನಿ ಒರಸುತಾಳೆ, ಏತರ ಒಗತನ ||
ಅಜ್ಞಾನವೆಂಬೊ ಅತ್ತೆ ಎನ್ನ ಅಟ್ಟಿ ಬಡಿತಾಳೆ
ಸುಜ್ಞಾನಿ ಮಾವ ಕುರುಡನಾದರೆ , ಏತರ ಒಗತನ ||
ತಾಪತ್ರಯದಲ್ಲಿ ನಾನು ತೇಲಿ ಮುಳುಗುತೇನೆ
ಆಪತ್ತು ಪರಿಹರಿಸುವೆ ಪುರಂದರವಿಠಲ, ಏತರ ಒಗತನ ||
***
ಸಾಕು ಸಂಸಾರ ನಮಗಿನ್ನೇತರ ಒಗತನ ||ಪ||
ಲೋಕದೊಳಗೆ ಎನ್ನ ಬೇಕೆಂಬುವರಿಲ್ಲ
ವಿವೇಕಿ ಪುರುಷ ಪರವಶನಾದರೆ ಏತರ ಸಂಸಾರ ||ಅ||
ಕಾಮವೆಂಬೊ ನೆಗೆಹೆಣ್ಣು ಎನ್ನ ಕಟ್ಟಿ ಆಳುತಾಳೆ
ಕ್ರೋಧವೆಂಬೊ ಸವತಿ ಕೊಲ್ಲುತಾಳೆ , ಏತರ ಒಗತನ ||
ಮದವೆಂಬ ಮೈದುನ ಎನ್ನ ಒಡನೆ ನಗುತಾನೆ
ಮತ್ಸರವೆಂಬ ಭಾವ ಎನ್ನ ತುಚ್ಚವು ಮಾಡುತಾನೆ, ಏತರ ಒಗತನ ||
ಮೋಹವೆಂಬ ಅತ್ತಿಗೆಯೆನ್ನ ಕೊಂಡು ಮುಣುಗುತಾಳೆ
ಲೋಭವೆಂಬೊ ನಾದಿನಿ ಒರಸುತಾಳೆ, ಏತರ ಒಗತನ ||
ಅಜ್ಞಾನವೆಂಬೊ ಅತ್ತೆ ಎನ್ನ ಅಟ್ಟಿ ಬಡಿತಾಳೆ
ಸುಜ್ಞಾನಿ ಮಾವ ಕುರುಡನಾದರೆ , ಏತರ ಒಗತನ ||
ತಾಪತ್ರಯದಲ್ಲಿ ನಾನು ತೇಲಿ ಮುಳುಗುತೇನೆ
ಆಪತ್ತು ಪರಿಹರಿಸುವೆ ಪುರಂದರವಿಠಲ, ಏತರ ಒಗತನ ||
***
pallavi
sAku samsAra namaginnEtara ogdane
anupallavi
lOkadoLage enna bEkembuvarilla vivEki puruSa paravashanAdare Edara samsAra
caraNam 1
kAmavembo negeheNNu enna kaTTi AlutAne krOdavembo savati kollutAne Etara ogatana
caraNam 2
madavemba maiduna enna oDane nagutAne matsaravemba bhAva enna tuccaphu mADutAne Etara ogatana
caraNam 3
mOhavemba attigeyenna koNDu muNugutALe lObhavembo nAdini orasutALe Edara ogatana
caraNam 4
ajnAnavembo atte enna aTTi baDidALe sujnAni mAva kuruDanAdare Edara ogatana
caraNam 5
tApatrayadalli nAnu tEli muLugudEne Apattu pariharisuve purandara viTTala Edara ogatana
***