Showing posts with label ಭಕ್ತಿ ಭಿಕ್ಷೆ ನೀಡೋ ಹರಿಯೇ ಮುಕ್ತಿಗೊಡೆಯನೇ hanumesha vittala. Show all posts
Showing posts with label ಭಕ್ತಿ ಭಿಕ್ಷೆ ನೀಡೋ ಹರಿಯೇ ಮುಕ್ತಿಗೊಡೆಯನೇ hanumesha vittala. Show all posts

Tuesday, 1 June 2021

ಭಕ್ತಿ ಭಿಕ್ಷೆ ನೀಡೋ ಹರಿಯೇ ಮುಕ್ತಿಗೊಡೆಯನೇ ankita hanumesha vittala

ಭಕ್ತಿ ಭಿಕ್ಷೆ ನೀಡೋ ಹರಿಯೇ ಮುಕ್ತಿಗೊಡೆಯನೇ ಪ


ಹಗಲು ಇರಳು ಎಡೆಬಿಡದಲೆ

ಪೊಗಳುತ ತವ ನಾಮ ಮಹಿಮೆಯ

ಜಗದೀಶನೆ ನಿನ್ನ ಚರಣ

ಯುಗಳಲಿ ಬಹು ಭಕ್ತಿ ಮನ

ಬಗಿ ಬಗಿಯಲಿ ನಲಿದಾಡುವ 1


ನಿತ್ಯನೆ ಸರ್ವೋತ್ತಮನೇ

ಮುಕ್ತಿಪ್ರದನೇ ಪರಮಾತ್ಮನೇ

ಉತ್ತಮ ವೃತ್ತಿಯಾನಿತ್ತು

ನೇತ್ರದಿ ತವ ನೋಡುತ ವರ

ಸ್ತೋತ್ರ ದಿನಾ ಪಾಡುತಿರುವೆ 2


ಎನ್ನಪರಾಧಗಳನ್ನು

ಮನ್ನಿಸಿ ಸಲಹಯ್ಯಾ ಜೀಯಾ

ಹನುಮೇಶವಿಠಲರಾಯಾ

ನಿನ್ನ ಸ್ಮರಣೆಯಲ್ಲಿ ಕಾಲ

ವನ್ನು ಕಳೆಯುತಿರುವ ದಿವ್ಯ 3

****