ಹಹಹಹಹ ಮಾನವ ಹೀಗೇಕೆ ಕೆಟ್ಟೆ
ಹರಿಭಜನೆಯ ಬಿಟ್ಟೆ || ಪ ||
ಜನ್ಮಾಂತರದಲಿ ಮಾಡಿದ ಪುಣ್ಯ ಇಂದಿಗೆ ಭೂಸುರ ಜನ್ಮವ ಕೊಟ್ಟ ದೇವವರೇಣ್ಯ |
ಸನ್ಮಾನದಿ ಮಾನ್ಯ ಮನ್ಮಥನಯ್ಯನ ಧನ್ಯ ಚರಿತ್ರನ | ಒಮ್ಮಾನರೂ ನೀ ಮನ್ನಿಸಲಿಲ್ಲ ಠೊಣ್ಯ || ೧ ||
ತನುವಿನ ಚಿಂತೆ ತನಯರ ಚಿಂತೆ ಧನಧಾನ್ಯದ ಚಿಂತೆ | ವನಿತೆಯರ ಚಿಂತೆ ಉದರದ ಚಿಂತೆ |
ಅನುದಿನದಲಿ ತನುವ ನೆನೆಸುತ ಕನಕನಂತೆ || ೨ ||
ಮಡದಿ ಮಕ್ಕಳಿಗೆ ಒಡವೆಯ ಗಳಿಸ | ಬೇಕೆಂಬ ಚಿಂತೆ ಮನೆ ಚಿಂತೆ
ಮಾನ್ಯದ ಚಿಂತೆ ಮನುಜರಿಗೆ ಅನುದಿನ ಪುರಂದರ ವಿಠಲನ ನೆನೆಯದೆ ಕನಕನಂತೆ || ೩ ||
***
hahahahaha maanava hIgEke keTTe
haribhajaneya biTTe || pa ||
janmaaMtaradali maaDida puNya iMdige bhUsura janmava koTTa dEvavarENya |
sanmaanadi maanya manmathanayyana dhanya caritrana | ommaanarU nI mannisalilla ThoNya || 1 ||
tanuvina ciMte tanayara ciMte dhanadhaanyada ciMte | vaniteyara ciMte udarada ciMte |
anudinadali tanuva nenesuta kanakanaMte || 2 ||
maDadi makkaLige oDaveya gaLisa | bEkeMba ciMte mane ciMte
maanyada ciMte manujarige anudina puraMdara viThalana neneyade kanakanaMte || 3 ||
***
ರಾಗ ದೇಸ್. ಆದಿ ತಾಳ (raga tala may differ in audio)
pallavi
hA hA hA hA mAnava hIgage keTTe
anupallavi
hari bhajaneya biTTe
caraNam 1
janmAntaradali mADida puNyadindige bHusura janmavakoTTa dEva varENya
sanmAdi mAnya manmathanayyana dhanya caritana ommAdaru nI mannisalilla DhoNya
caraNam 2
tanuvina cinte tanayara cinte dhana dhAnyada cinte vanitEra cinte
udarada cinte anudinadali tanuva nenesuta kanaganante
caraNam 3
maDadi makkaLige oDeveya gaLisa bEkembo cinte mane cinte
mAnyada cinte manujarige anudina purandara viTTalana neneyade kanaganante
***
ಹಾ ಹಾ ಹಾ ಹಾ ಮಾನವ ಹೀಗೇಕೆ ಕೆಟ್ಟೆ ||ಪ||
ಹರಿ ಭಜನೆಯ ಬಿಟ್ಟೆ ||ಅ||
ಜನ್ಮಾಂತರದಲಿ ಮಾಡಿದ ಪುಣ್ಯದಿಂದಿಗೆ ಭೂಸುರ ಜನ್ಮವಕೊಟ್ಟ ದೇವವರೇಣ್ಯ
ಸನ್ಮಾನದಿ ಮಾನ್ಯ ಮನ್ಮಥನಯ್ಯನ ಧನ್ಯಚರಿತ್ರನ ಒಮ್ಮಾದರು ನೀ ಮನ್ನಿಸಲಿಲ್ಲ ಟೊಣ್ಯ ||
ತನುವಿನ ಚಿಂತೆ ತನಯರ ಚಿಂತೆ ಧನ ಧಾನ್ಯದ ಚಿಂತೆ
ವನಿತೇರ ಚಿಂತೆ ಉದರದ ಚಿಂತೆ ಅನುದಿನದಲಿ ತನುವ ನೆನೆಸುತ ಕನಗನಂತೆ ||
ಮಡದಿಮಕ್ಕಳಿಗೆ ಒಡವೆಯ ಗಳಿಸಬೇಕೆಂಬೊ ಚಿಂತೆ ಮನೆ ಚಿಂತೆ
ಮಾನ್ಯದ ಚಿಂತೆ ಮನುಜರಿಗೆ ಅನುದಿನ ಪುರಂದರವಿಠಲನ ನೆನೆಯದೆ ಕನಗನಂತೆ ||
*********