Showing posts with label ಒಂದೇ ನಾಮದಿ ಅಡಗಿದವೊ ಅಖಿಳ ವೇದಗಳು vijaya vittala ONDE NAAMADI ADAGIDAVO AKHILA VEDAGALU. Show all posts
Showing posts with label ಒಂದೇ ನಾಮದಿ ಅಡಗಿದವೊ ಅಖಿಳ ವೇದಗಳು vijaya vittala ONDE NAAMADI ADAGIDAVO AKHILA VEDAGALU. Show all posts

Thursday, 11 November 2021

ಒಂದೇ ನಾಮದಿ ಅಡಗಿದವೊ ಅಖಿಳ ವೇದಗಳು ankita vijaya vittala ONDE NAAMADI ADAGIDAVO AKHILA VEDAGALU

SUNGA AS  PURANDARA VITTALA ANKITA 

 TO CHECK PURANDARA  OR VIJAYA VITTALA   

ಒಂದೇ ನಾಮದಲಡಗಿದವೊ ಅಡಗಿದವೋ  ಪ
OR (ಒಂದೇ ನಾಮದಿ ಅಡಗಿದವೊ ಅಡಗಿದವೋ)

ಅಖಿಳ ವೇದಗಳು ಅ ಪ

ಒಂದೇ ನಾಮವೆ ಪ್ರಹಲ್ಲಾದನ್ನ ರಕ್ಷಿಸಿತು
ಒಂದೇ ನಾಮವೆ ಅಜಾಮಿಳಗೆ ವೊಲಿದಿತು
ತಂದೆ ತಾಯ ಬಿಟ್ಟ ಕಂದ ಧ್ರುವರಾಯಗೆ ಆ
ನಂದ ಪದವಿಯಿತ್ತ ಅದ್ಭುತ ಮಹಿಮೆಯು 1

ಮಚ್ಛಾದ್ಯನಂತಾವತಾರಾ
ಸ್ವಚ್ಛ ಅಷ್ಟಾದಶ ಪುರಾಣ ಅಮೃತದ ಸಾರಾ
ಕಚ್ಛಪ ತ್ರಿಜಗಕೆ ಆಧಾರ ತನ್ನ
ಸ್ವೇಚ್ಛೆಯಿಂದಲಿ ತಾ ಮಾಡೋ ವ್ಯಾಪಾರಾ 2

ಒಬ್ಬರಿಂದಲಿ ತನಗಿಲ್ಲ ತಾ
ನೊಬ್ಬನೆ ಜೀವರ ರಕ್ಷಿಪನೆಲ್ಲಾ
ಕಬ್ಬುಬಿಲ್ಲಿನ ಪಿತ ವಿಜಯವಿಠ್ಠಲರೇಯ- ವೈ
ದರ್ಭೆಯ ರಮಣನ ಸುಗುಣಗಳೆಲ್ಲಾ 3
***

pallavi

ondE nAmadalaDagidavO

anupallavi

aDagidavO Anandadindudisiruva akhila vEdagaLu

caraNam 1

ondE nAmavu prahlAdanna kAyidu mattontu nAmavu ajAmiLana salahidu
tande tAyiyu biTTa kanda dharuvarAyagAnandada padavanittAnanda guNavella

caraNam 2

matsyAnantAvatAra avatAra svacchAdaSTAdasha purANa sAra
kaccapanAgi mUjagake AdhAra svEcchayindali hari mADO vyApAra

caraNam 3

opparItake samarilla migililla abbaradali salahuva jagavella
kabbubillana pita purandara viTTala (?) vaidarbiya ramaNana vara suguNagaLella
***