Showing posts with label ತೋರುತಲೈದಾನೆ ಮುಕ್ತಿಯ ತೋರು prasannavenkata. Show all posts
Showing posts with label ತೋರುತಲೈದಾನೆ ಮುಕ್ತಿಯ ತೋರು prasannavenkata. Show all posts

Tuesday, 12 November 2019

ತೋರುತಲೈದಾನೆ ಮುಕ್ತಿಯ ತೋರು ankita prasannavenkata

by ಪ್ರಸನ್ನವೆಂಕಟದಾಸರು
ತೋರುತಲೈದಾನೆ ಮುಕ್ತಿಯ ತೋರುತಲೈದಾನೆಸಾರಿ ಶರಣರೆಂದು ಶ್ರೀನಿವಾಸದೇವ ಪ.

ಹುಲ್ಲು ಕಲ್ಲಿನ ಪೂಜೆಯ ಮಾಡಿ ಕೆಡದೆಬೆಲ್ಲದಾಸೆಗೆಂಜಲು ತಿನ್ನದೆಸೊಲ್ಲುಸೊಲ್ಲಿಗೆ ಹರಿಸರ್ವೋತ್ತಮನೆಂದುಬಲ್ಲವರು ಭಕ್ತಿಲಿ ಭಜಿಸಿರೆಂದು 1

ಭುವಿಯ ವೈಕುಂಠವು ನೋಡಿರಾನತರೆಂದುನವನವ ಉತ್ಸಾಹದೊಳಿಹನುಯುವತಿ ಲಕುಮಿ ಕೂಡ ಸ್ವಾಮಿ ಪುಷ್ಕರಕೂಲಭವನದೊಳಗಿಪ್ಪ ಭಕ್ತ ಚಿಂತಾಮಣಿ 2

ನೆಲೆಯೆ ಸಿಕ್ಕದ ಧರ್ಮಕರ್ಮದ ತೊಡರ ಬಿಟ್ಟಲಸದೆ ತನ್ನಂಘ್ರಿಯಾತ್ರೆ ಮಾಡಿಸುಲಭದಿ ಮೋಕ್ಷವ ಗಳಿಸಿಕೊಳ್ಳೆನುತಲಿಕಲಿಯುಗದೊಳಗೆ ಪ್ರಸನ್ನವೆಂಕಟಪತಿ 3
********