Showing posts with label ಬಾರೋ ಮಗನೆ ಬಳಲಿದೆಯಾಡಿಬಾರೊ prasannavenkata. Show all posts
Showing posts with label ಬಾರೋ ಮಗನೆ ಬಳಲಿದೆಯಾಡಿಬಾರೊ prasannavenkata. Show all posts

Thursday, 14 November 2019

ಬಾರೋ ಮಗನೆ ಬಳಲಿದೆಯಾಡಿಬಾರೊ ankita prasannavenkata

by ಪ್ರಸನ್ನವೆಂಕಟದಾಸರು
ಬಾರೋ ಮಗನೆ ಬಳಲಿದೆಯಾಡಿಬಾರೊ ಮಗನೆ ಪ.

ಎಲ್ಲಿಗೆ ಹೋಗಿದ್ಯೊ ಎನ್ನೆದೆಝಲ್ಲು ಝಲ್ಲು ಎನುತಲಿದೆಮೆಲ್ಲೆದೆಗಾರ್ತಿ ಗೊಲ್ಲತೀರು ನಿನ್ನಗಲ್ಲ ಕಚ್ಚಿಹರಲ್ಲೊ ಹಸುಳೆ 1

ಬಾಡಿತೊವದನಇಂದಾರೊಳುಮಾಡಿದ್ಯೊಕದನಕಾಡುವ ಬಾಲ ಪ್ರೌಢಿಯರ ತೋರಿಸುನಾಡ ಬಿಟ್ಟವರನೋಡಿಸುವೆ ನಡೆ 2

ಕೂಸಿನಾಟವಲ್ಲೊ ಜಟ್ಟಿಗನವಿೂಸಲಂಜಿಕಿಲ್ಲೊಹೇಸದೆ ಬೆಣ್ಣೆಯ ಸವಿದು ನಿರ್ದೋಷ ಕೃಷ್ಣ ನೀ ಘಾಸಿಯಾದೆ 3

ಕೋಮಲಾಂಗವಿದು ಕಲ್ಲೆದೆಕಾಮಿನಿಯರೊಯಿದುಕಾಮುಕಿಯರತಿ ಪ್ರೇಮದಲಪ್ಪಪ್ಪಿದಾಮಸಡಿಲ್ಯದೆ ಶ್ರೀಮುರಾರಿ4

ಮುದ್ದಿನಾಮೃತೆ ಬಾ ಪೊಂದೊಟ್ಟಿಲೊಳ್ನಿದ್ರೆಗೈಯಲಿಲ್ಲ ಎದೆಗದ್ದಿಗೆಲಿದ್ದು ನಲಿದಾಡೊ ಪೂರ್ಣಶುದ್ಧ ಪ್ರಸನ್ವೆಂಕಟ ಶ್ರೀಕೃಷ್ಣ 5
*******