Showing posts with label ಶಿರಿದೇವಿಯೆ ಪೊರಿಯುವದೆನ್ನನು ತಾಯೆ karpara narahari. Show all posts
Showing posts with label ಶಿರಿದೇವಿಯೆ ಪೊರಿಯುವದೆನ್ನನು ತಾಯೆ karpara narahari. Show all posts

Monday 2 August 2021

ಶಿರಿದೇವಿಯೆ ಪೊರಿಯುವದೆನ್ನನು ತಾಯೆ ankita karpara narahari

ಶಿರಿದೇವಿಯೆ ಪೊರಿಯುವದೆನ್ನನು ತಾಯೆ ಭಾ

ಸ್ಕರ ಪುರ ನಿಲಯೆ ಪ


ಧರಣಿಸುರವರÀನಿಗೊಲಿದು ಶ್ರೀಗಂಧದ

ವರ ಶಿಲೆಯೊಳು ನೆಲಿಸಿರುವ ಶುಭಾಂಗಿಯೆ ಅ.ಪ


ವರಕೊಲ್ಲಾಪುರ ಕ್ಷೇತ್ರದೊಳಿರುವಂಥ

ಲಕುಮಿಯೆ ತವ ದರುಶನ

ವರುಷಂಪ್ರತಿ ಮಾಡುವ ನೇಮಾಸಕ್ತ ಶ್ರೀ ಲಕ್ಷ್ಮೀಕಾಂತ

ವರನಾಮಕ ದ್ವಿಜ ವರಗೊಲಿದು ಬಂದಂಥ

ತತ್ಕರಸಂಪೂಜಿತ

ವರಗೋಪುರದಿಂ ಪರಿಶೋಭಿತ ಮಂದಿರದೊಳು

ವೆಂಕಟಗಿರಿ ರಮಣನ ಸತಿ 1


ಪದ್ಮೇ ಪ್ರಣಮಾಮಿ ಭವತ್ಪದ ಪದ್ಮೆ ವಾರಿಜದಳ ಸದ್ಮೆ

ಪದ್ಮಾನನೆ ಸ್ಮರಿಸುವೆ ಕರಧೃತ ಪದ್ಮೆ ವಾಸಯಿ ಮಮಸದ್ಮನಿ

ಪದ್ಮಾವತಿ ಪದ್ಮಜನುತ ಪದಪದ್ಮೇ ಉದ್ಭವಿಸಿದ ಪದ್ಮದಿ

ಪದ್ಮಲೋಚನೆ ಸಮುದ್ರಕುಮಾರಿಯೇ

ಪದ್ಮನಾಭ ಹೃತ್ಪದ್ಮನಿವಾಸಿನಿ 2


ಕ್ಷೋಣಿಸುರ ಪೂಜಿತೆ ಪಾವನ ಚರಿತೆ

ಸಿಂಹಧ್ವಜ ಶೋಭಿತೆ

ಸಾನುರಾಗದಿ ಭಜಿಸುವರಿಗೆ ಪ್ರೀತೆ ಕಾಮಿತ ಫಲದಾತೆ

e್ಞÁನಾ ಸದ್ಭಕುತಿಯು ಕರುಣಿಸು ಮಾತೆ ವರದಾಭಯಹಸ್ತೆ

ಕ್ಷೋಣಿಯೊಳಗೆ ಸುಸ್ಥಾನ ಕಾರ್ಪರದ ಶ್ರೀನರಸಿಂಹನ

ರಾಣೆಯೆ ನಮಿಸುವೆ 3


ವಂದಾರುಜನ ಮಂದಾರಾಮಿಂದಿರಾ ಸುಂದರಾನನಾಂ

ವಂದೇಹಂ ಭಾಸ್ಕರ ಕ್ಷೇತ್ರ ನಂದಸೂನು ಪದಾಶ್ರಯಂ

****