ಮನಸ್ಸು ತ್ರಪ್ತಿಯಾಗ್ವದು ಪ್ರೇಮ ||ಏನ್ ಸವಿ||
ಜನರಿಗೆ ತಿಳಿಯದು ಇದರ್ ಮಹಿಮ||2||
ಘನ್ನ ಮಹಿಮ ವಿಷ್ಣು ಸಾಸಿರ್ ನಾಮ ||ಏನ್ ಸವಿ||
ಪ್ರಹ್ಲಾದಗೊಲಿದ ಹರಿನಾಮದಿಂದ
ಅಲಲಲಲಲ ಧ್ರುವ ರಾಜೇಂದ್ರ
||ಪ್ರಹ್ಲಾದಗೊಲಿದ||
ಫಲ್ಗುಣಗೆ ಫಲಿಸಿತು ಹೆಚ್ಚೆಂದು||2||
ರಾಮ್ ರಾಮ್ ರಾಮ್ ರಾಮ್
ಸರ್ವ ಜಗಕೂ... ||ಏನ್ ಸವಿ||
ಹರಿ ಹರಿ ಹರಿಸ್ಮರಣೆ ಮಾಡಬೇಕು
ಹರ ಹರ ಹರ ಹರ ಎಂದು ಅನ್ನಬೇಕು
||ಹರಿ ಹರಿ||
ವೇದಗಳು ಸಾರುತಿವೆ ಇವು ನಾಲ್ಕು||2||
ಪುರಂದರವಿಠ್ಠಲನೆ ಸರ್ವ ಜಗಕೂ ||ಏನ್ ಸವಿ||
***
ಲೇಖನ. ಮಧುಸೂದನ. ಕಲಿಭಟ್. ಧಾರವಾಡ.
ಏನ್ಸವಿ ಏನ್ಸವಿ ಹರಿನಾಮ.
ಹೃದಯ ಹದವಾದ ಭೂಮಿಯ ಹಾಗೇ. ಇದರೊಳಗೆ ಯಾವದೇ ಬೀಜವನ್ನು ಬಿತ್ತನೆ ಮಾಡಬಹುದು.
ಹರಿನಾಮ ಎಂಬ ಕಲ್ಪವೃಕ್ಷದ ಬೀಜ ಬಿತ್ತನೆ ಮಾಡುವವರಿಗೆ, ಶ್ರೀಹರಿಯ ಶ್ರೀರಕ್ಷೆ ಕೊನೆ ವರೆಗೆ ಇರುವದು.
ಮೇಲಿನ ವಾಕ್ಯದಿಂದ ದಾಸರು, ಮತ್ತು ಜ್ಞಾನಿಗಳು ನಮ್ಮ ಹೃದಯದಲ್ಲಿ ಶ್ರೀ ಹರಿನಾಮ ಬಿತ್ತಿದರೆ, ಬಿಟ್ಟಿದವರಿಗೆ ಪರಮಾತ್ಮನ ರಕ್ಷಣೆ ಕೊನೆಯ ವರೆಗೆ ಇರುವದೆಂದು ಹೇಳಿದ್ದಾರೆ.
ದಾಸರು ಮಾನವನ ದೇಹವು ಮುಕ್ತಿಗೆ ದೊರೆತ ಮಧ್ಯಮ. ಇದರ ಸದುಪಯೋಗ ಪಡೆಯಲು ಈ. ದೇಹವನ್ನೇ ಹೊಲವನ್ನಾಗಿ ಮಾಡಿಕೊಂಡು ಮನಸ್ಸಿನಲ್ಲಿ ಹರಿನಾಮ ಬಿತ್ತಿರಿ ಎಂದು ಉಪದೇಶ ಮಾಡಿದ್ದಾರೆ.
ಮಾನವನ ಹೃದಯವನ್ನೇ ಕೇಂದ್ರವಾಗಿ ತಿಳಿದಾಗ ಪರಮಾತ್ಮ ಸಕಲ ಜೀವರಲ್ಲಿ ಬಿಂಬ ರೂಪಿಯಾಗಿ ಇರುವನು. ಹೃದಯ ಬಹು ಕೋಮಲ. ಅದಕ್ಕೆ ಅದನ್ನು ಹದವಾದ ಭೂಮಿ ಅಥವಾ ಮಣ್ಣು ಎಂದು ವರ್ಣಿಸಿದ್ದಾರೆ.
ಮೇಲಿನ ವಾಕ್ಯದಲ್ಲಿ ನಾವು ಹೃದಯದಲ್ಲಿ ಯಾವದೇ ಬೀಜ ಬಿತ್ತಬಹುದು ಎಂದು ಹೇಳಿದ್ದಾರೆ. ಇದೇನು ಯಾವದೇ ಬೀಜ ಎಂದಾಗ. ಪ್ರಶ್ನೆ ಬರುವದು. ಏನಿದು. ನೋಡೋಣ. ನಮ್ಮ ಬಾಲ್ಯದಲ್ಲಿ ನಮಗೆ ಕ್ರೋಧ ಮೋಹ, ದ್ವೇಷಗಳ ಬಗ್ಗೆ ಏನೂ ಜ್ಞಾನ ಇರುವದಿಲ್ಲ. ನಮ್ಮ ತಂದೆ ತಾಯಿಯರಿಂದ ಹೊಂದಿದ ಸಂಸ್ಕಾರ, ನಮ್ಮ ಸುತ್ತಲಿನ ವಾತಾವರಣ ನಮ್ಮ ಸ್ವಭಾವ ಬೆಳೆಯಲು ಮೂಲ ಕಾರಣ. ಈ ಸಂಸ್ಕಾರವೇ ಸ್ವಭಾವಕ್ಕೆ ಬೀಜ ಎನಿಸುವದು. ಒಬ್ಬರ ಬಗ್ಗೆ ದ್ವೇಷ, ಕೋಪ ಇವು ಸಹಪಾಠಿ ಗಳಿಂದ ಹುಟ್ಟುತ್ತದೆ. ಅದೇ ನಮ್ಮ ಹೃದಯದಲ್ಲಿ ಬೀಜ ಬಿತ್ತಿದಂತೆ ಆಗುವದು. ಆದರಿಂದ ಬಾಲ್ಯದಲ್ಲಿ ಒಳ್ಳೆಯ ವಾತಾವರಣ ಇದ್ದರೆ ಸಾತ್ವಿಕ ಸ್ವಭಾವ ಬೆಳೆಯುವದು. ಹೀಗಾಗಿ ಮೇಲಿನ ವಾಕ್ಯದಲ್ಲಿ ಯಾವದೇ ಬೀಜವು ನಿಷ್ಕಲ್ಮಶವಾದ ಹೃದಯದಲ್ಲಿ ಬೆಳೆಯುತ್ತದೆ ಎಂದು ಹೇಳಿದ್ದಾರೆ.
ಮಾನವರು ಈ ಲೋಕಕ್ಕೆ ಮುಕ್ತಿಯ ಸಾಧನೆಗೆ ಬಂದಿರುತ್ತಾರೆ. ಅದ್ದರಿಂದ ಮುಕ್ತಿಗೆ ಬೇಕಾದ ಹರಿನಾಮದ ಬೀಜದ ಬಿತ್ತನೆ ಮಾಡಿಕೊಳ್ಳಬೇಕು. ಅದನ್ನೇ ದಾಸರು ಏನ್ಸವಿ ಏನ್ಸವಿ ಹರಿನಾಮ ಎಂದು ಹಾಡಿದ್ದಾರೆ. ಹರಿನಾಮದ ಮಹಿಮೆಯಿಂದ ಮಾನವನ ರಕ್ಷಣೆ ಆಗುವದರಲ್ಲಿ ಸಂಶಯವೇನಿಲ್ಲ. ಅದನ್ನೇ ಶ್ರೀ ರಕ್ಷೆ ಎಂದು ವರ್ಣಿಸಿದ್ದಾರೆ.
***
just scroll down for other devaranama