Showing posts with label ಕೊಟ್ಟ ಭಾಗ್ಯವೆ ಸಾಕೋ ಶ್ರೀ ಕೃಷ್ಣನ ದಯಬೇಕೋ ದೇವ prasanna KOTTA BHAAGYA SAAKO SRI KRISNANA DAYE BEKO DEVA. Show all posts
Showing posts with label ಕೊಟ್ಟ ಭಾಗ್ಯವೆ ಸಾಕೋ ಶ್ರೀ ಕೃಷ್ಣನ ದಯಬೇಕೋ ದೇವ prasanna KOTTA BHAAGYA SAAKO SRI KRISNANA DAYE BEKO DEVA. Show all posts

Friday, 27 December 2019

ಕೊಟ್ಟ ಭಾಗ್ಯವೆ ಸಾಕೋ ಶ್ರೀ ಕೃಷ್ಣನ ದಯಬೇಕೋ ದೇವ ankita prasanna KOTTA BHAAGYA SAAKO SRI KRISNANA DAYE BEKO DEVA

Audio by Vidwan Sumukh Moudgalya

ಶ್ರೀ ವಿದ್ಯಾಪ್ರಸನ್ನತೀರ್ಥರ ರಚನೆ 

 ರಾಗ ಸಿಂಧುಭೈರವಿ   ತಾಳ ಆದಿ 

ಕೊಟ್ಟ ಭಾಗ್ಯವೆ ಸಾಕೋ ಶ್ರೀ ॥ಪ॥
ಕೃಷ್ಣನ ದಯಬೇಕೋ ದೇವ ॥ಅ.ಪ॥

ಸಾಸಿರ ಬಂದರೆ ಶಾಂತಿಯೆಂದರಿತೆನೊ
ಸಾಸಿರ ಬಂದಿತು ಶಾಂತಿ ಕಾಣಲಿಲ್ಲ
ಸಾಸಿರ ಸಾಸಿರವೇಸು ಬಂದವೋ
ಕ್ಲೇಶವು ಏರಿತು ಮೋಸಹೋದೆನೊ ॥೧॥

ಗಾಳಿಯ ಗುದ್ದಿ ಕೈ ಕೀಲು ಮರಿಯಿತೊ
ಕೇಳುವುದಿಲ್ಲವೊ ನಾಳಿನ ಕೂಳನು
ಕಾಲಕಾಲಕೆ ಹುಲಿ ಹಾಲನು ತರುತಿಹ
ಬಾಲಗೋಪಾಲನ ಕೇಳಿ ಮೋಸಹೋದೆ ॥೨॥

ಬೇಡವೆನ್ನುವರಿಗೆ ನೀಡುವ ದೊರೆ ನೀ
ರೂಢಿಯ ಬಲ್ಲೆನೋ ಕಾಡುವುದಿಲ್ಲವೊ
ನೀಡಿದ ಭಾಗ್ಯವು ಕೇಡುತರದೆ ಕಾ
ಪಾಡಬೇಕೆಲೊ ಪ್ರೌಢ ಪ್ರಸನ್ನನೆ ॥೩॥
*********