Showing posts with label ನೀ ಕೊಟ್ಟಿದುಣುವಲ್ಲಿ ಭಕ್ತಿ ಹರುಷ ಶ್ರೀಕಾಂತ jayesha vittala NEE KOTTIDUNUVALLI BHAKTI HARUSHA SRIKAANTA. Show all posts
Showing posts with label ನೀ ಕೊಟ್ಟಿದುಣುವಲ್ಲಿ ಭಕ್ತಿ ಹರುಷ ಶ್ರೀಕಾಂತ jayesha vittala NEE KOTTIDUNUVALLI BHAKTI HARUSHA SRIKAANTA. Show all posts

Sunday, 5 December 2021

ನೀ ಕೊಟ್ಟಿದುಣುವಲ್ಲಿ ಭಕ್ತಿ ಹರುಷ ಶ್ರೀಕಾಂತ ankita jayesha vittala NEE KOTTIDUNUVALLI BHAKTI HARUSHA SRIKAANTA



ನೀ ಕೊಟ್ಟಿದುಣುವಲ್ಲಿ ಭಕ್ತಿ ಹರುಷ ಪ


ಶ್ರೀಕಾಂತ ನೀಡೆನಗೆ ಸಾಕು ಬೇಕೆನ್ನಿಸದೆ ಅ.ಪ.


ನಾ ಬಲ್ಲೆನೆ ಎನ್ನ ಹಿತಾಹಿತಗಳ ಬಗೆಯ

ನೀ ಬಲ್ಲ ಸರ್ವಜ್ಞ ನಮ್ಮ ಕ್ಷೇಮ

ನೀ ಬಂಧು ಅನಿಮಿತ್ತ ಅನಂತ ಕಾಲಕ್ಕೂ

ಆ ಬ್ರಹ್ಮಸ್ತಂಭಾಂತ ಸಂಸಾರಿ ಸರ್ವೇಶ 1


ಕಂಸಮರ್ದನ ಎನ್ನ ಸಂಶಯಗಳಿಯಯ್ಯ

ಹಂಸ ಸದ್ಗುಣ ಪೂರ್ಣ ಪುರುಷ ಶ್ರೀಶ

ಹಿಂಸೆಗಳ ಪರಿ ಹರಿಸಿ ನಿನ್ನ e್ಞÁನವ ನೀಡೊ

ಸ್ವಾಂಶಿಗಳ ಗುಣರೂಪ ಕ್ರಿಯದಿಂದ ದೇವ 2


ನಿನಗಿಂತ ಹಿತರ್ಯಾರೊ ನಿತ್ಯ ಮಿತ್ರನೆ ನಮಗೆ

ಅನುಗಾಲ ಸಲಹುವಿ ತಾಯಿಯಂತೆ

ಬಿನಗು ದೈವಗಳಳಿವ ಜಯೇಶವಿಠಲ

ಮನತೊಳೆದು ಪ್ರತಿಫಲಿಸು ನಿತ್ಯ ಮಂಗಳ ಮೂರ್ತಿ 3


ನೀನಿತ್ತ ಭೋಗಗಳು ನಿನಗೊಪ್ಪಿಸುವೆನೆನಲು

ದೀನ ಜನ ಮಂದಾರ ನಿನ್ನ ಮನಕೆ

ಏನು ಕಾರಣ ಬರದು ಆನಿವರದನೆ ಕೇಳೋ

ಪ್ರಾಣಪತಿ ಜಯೇಶವಿಠಲನೆ ಕರುಣಾಬ್ಧಿ 4

***