Showing posts with label ತೃಣಗುಲ್ಮಲತೆ ತೃಣರಾಜ vijaya vittala suladi ತಾರತಮ್ಯ ಸುಳಾದಿ TRUNAGULMALATE TRUNARAAJA TAARATAMYA SULADI. Show all posts
Showing posts with label ತೃಣಗುಲ್ಮಲತೆ ತೃಣರಾಜ vijaya vittala suladi ತಾರತಮ್ಯ ಸುಳಾದಿ TRUNAGULMALATE TRUNARAAJA TAARATAMYA SULADI. Show all posts

Sunday, 8 December 2019

ತೃಣಗುಲ್ಮಲತೆ ತೃಣರಾಜ vijaya vittala suladi ತಾರತಮ್ಯ ಸುಳಾದಿ TRUNAGULMALATE TRUNARAAJA TAARATAMYA SULADI



Audio by Mrs. Nandini Sripad

ಶ್ರೀ ವಿಜಯದಾಸಾರ್ಯ ವಿರಚಿತ   ತಾರತಮ್ಯ ಸುಳಾದಿ 

 ರಾಗ ಹಂಸಧ್ವನಿ 

 ಧ್ರುವತಾಳ 

ತೃಣಗುಲ್ಮಲತೆ ತೃಣರಾಜ ಮಿಕ್ಕಾದ ತರು | 
ವನಚರ ಖಗ ಮೃಗ ನಾನಾ ಪರಿಯ |
ಮನುಜ ಕ್ಷಿತಿಪ ಮನುಜ ಗಂಧರ್ವ ಪರಿಯಂತ |
ಎಣಿಕೆ ಮಾಡಿದರಾಗೆ ಅವಿ ಭೋಕ್ತರು |
ಗುಣಿಸಿ ನೋಡಲು ಇದರ ಗಣಿತ ಅಪರಿಮಿತ |
ಕೊನೆ ತಿಳಿದವನಿಲ್ಲ ಎಂದೆಂದಿಗೆ |
ಇನಿತು ಚೇತನಗಳು ಲಕ್ಷಯೆಂಭತ್ತು ನಾಲ್ಕು |
ಯೋನಿ ಜನನ ಪ್ರಭೇದದಿಂದ ಪ್ರಾಚುರ್ಯರು |
ಗುಣದಿಂದ ಓರ್ವರೋರ್ವರಧಿಕವಾಗಿಪ್ಪರು |
ಜನುಮ ಜನುಮದಲ್ಲಿ ವೃತ್ತಿ ಜ್ಞಾನಾ |
ತನು ಭಿನ್ನರಾಗಿ ಪುಟ್ಟುವರು ಧರಣಿ ಮೇಲೆ |
ದಿನ ಪ್ರತಿದಿನ ಕರ್ಮವಶದಿಂದಲಿ |
ತನು ಸಮೇತವಲ್ಲದೆ ಏಕಾಂಶದಲ್ಲಿ ಸಲ್ಲಾ |
ಅನುಮಾನ ಇದಕಿಲ್ಲ ಇವರಿಗೆ ಪೆಸರು ಕಾಣೋ |
ಮನದೊಳು ತಿಳಿ ಇವರ ತರುವಾಯದಿ |
ಅನಿಮಿಷ ಗಂಧರ್ವ ಬೊಮ್ಮಾದಿ ಪಿಡಿದು ಯೋ |
ಚನೆ ಮಾಡು ಮೂವತ್ತು ಮೂರು ಕೋಟಿ
ಮಿನಗುತಿಪ್ಪರು ಎಲ್ಲ ಸಾಂಶರು |
ನೆನೆದು ಧನ್ಯನಾಗೊ ನಾನಾ ಪರಿಯಿಂದ |
ಅನುನಯದಲಿ ನಾಲ್ಕು ಬಗೆಯಲಿಪ್ಪಾ |
ಜನರುಂಟು ಮುಖ್ಯಾಮುಖ್ಯ ತಾತ್ವಿಕ ಯೋ |
ಚನೆ ಮಾಡು ಅತಾತ್ವಿಕರಾಜಾನಜರ |
ಗಣಣೆಯಾದುದಕೆ ಒಕ್ಕಣಿಸು ವರ್ತಮಾನ |
ವನಜ ಸಂಭವ ನಿಡಿದು ಋಭುಗಣಾಂತ |
ತನುವು ಧರಿಪ ಸಂಖ್ಯೆ ಮೂವತ್ತು ಮೂರು ನೂರು |
ಇನಿತರೊಳು ಎರಡು ವಿಧ ಪ್ರಾಮುಖ್ಯರು |
ಘನವಂತ ಜನ ವಿಂಶತಿ ಶತ ಉಳಿದಾದವರು |
ಸನುಮತ ಋಭುಗಣ ತ್ರಿಸಹಸ್ರದ ಮೇಲೆ |
ಎಣಿಸು ನೂರೆಂಭತ್ತು ಜನರು ಒಂದೇ |
ವಿನಯದಿಂದಲಿ ಮುಂದೆ ಅಮುಖ್ಯ ತಾತ್ವಿಕ |
ಜನಕಿಂತ ವೆಗ್ಗಳರು ದೇವತ್ವ ಆದಿಯಲ್ಲಿ |
ಮುನಿಜನ ಮಿಕ್ಕಾದವರ ವಿಭಾಗ ಮಾಡಿ ತೆಗೆದು |
ಮಣಿದು ನಮೋಯೆನ್ನು ಶತಸ್ಥರ್ಗೆ |
ಕನಸೀಲಿ ಮನಸೀಲಿ ಇಲ್ಲಿ ತನಕ ಮುಂ - |
ದಣ ವಿಚಾರವ ಕೇಳು ಕಾರ್ಮಿಕ ಲೋಕಾಗ್ನಿ |
ತನುಜ ಪಾವಕ ಪವಮಾನ ವಿಡಿದು |
ಶನಿ ಪರಿಯಂತ ಅಮುಖ್ಯ ತಾತ್ವಿಕ |
ಗಣವೆನ್ನಿ ಇವರು ಕರ್ಮಜ ಸುರರು |
ಎಣಿಕೆ ಮಾಡು ಇಂತು ಮುನ್ನೂರು ಕಡಿಮೆಯಾಗಿ |
ಗುಣ ಸಹಸ್ರರೆನ್ನು ಮಧ್ಯಮರ |
ಗುಣಪೂರ್ಣ ವಿಜಯವಿಠಲರೇಯನ ಪಾದ |
ವನಜ ಧ್ಯಾನವ ಮಾಡು ಇವರಿವರ ಮಧ್ಯದಲ್ಲಿ ॥ 1 ॥

 ಮಟ್ಟತಾಳ 

ಮೊದಲಿಗೆ ಪೇಳಿದ ಶತಸ್ಥರೊಳಗಿದ್ದ
ಪದುಮ ಬಾಂಧವನೊಬ್ಬ ಪರ್ಜನ್ಯ ನಾಮಕನು |
ಇದರೊಳಗೆ ಗಣನೆ ಸಿದ್ದವಾಗಿದೆ ಸತ್ಯ |
ಮುದದಿಂದಲಿ ತತ್ವಾಭಿಮಾನಿಗಳ - |
ಲ್ಲದ ದೇವತೆಗಳ ಪೆಸರು ಕೊಂಡಾಡುವುದು |
ಉದಕ ಪೂರಿತವಾದ ತೀರ್ಥಾಭಿಮಾನಿಗಳು |
ಅದರ ತರುವಾಯ ಪುಷ್ಕರ ಕರ್ಮಾಭಿಮಾನಿಗಳು |
ಒದಗಿ ಎಣಿಸಬೇಕು ನವ ಕೋಟಿಗೆ ತ್ರಿಶತ |
ತ್ರಿದಶ ಸಾವಿರ ಕಡಿಮೆ |
ಬುಧರು ಭಕುತಿಯಿಂದ ವಿವರಗಳಿಲ್ಲಿಗೆ ತ್ರಿ-
ವಿಧವಾಯಿತು ಕೇಳಿ ನವ ಕೋಟಿ ಸಂಖ್ಯಾ |
ಭವಸಾಗರ ಹಾರಿ ವಿಜಯವಿಠಲರೇಯ |
ಪವಣೆಯಿಂದಲಿ ಇವರ ಈ ಪರಿ ನಿರ್ಣೈಪ ॥ 2 ॥

 ತ್ರಿವಿಡಿತಾಳ 

ಅಮರರ ಕುಲದಿಂದ ಪುಟ್ಟಿದನಾಖ್ಯರು |
ಕ್ರಮದಿಂದ ತಿಳಿವುದು ಚತುರ ವಿಂಶತಿ ಕೋಟಿ |
ದ್ರುಮ ಲತೆ ಫಲ ಪುಷ್ಪ ಮಿಕ್ಕಾದವಕೇ ಉ - |
ತ್ತಮರಾಗಿ ಇಪ್ಪರು ಅಂಶದಿಂದ |
ಅಮರ ಮೊಗ ಪುತ್ರರು ಹದಿನಾರು ಸಾವಿರ |
ರಮಣೀಯರಾದ ಅಪ್ಸರ ಸ್ತ್ರೀಯರು ನೂರು |
ವಿಮಲ ತುಂಬುರಾದಿ ಶತ ಗಂಧರ್ವ ಸಹ |
ಸಮವಾಗಿ ಇಪ್ಪರು ಇವರೆ ಅಜಾನಜರಯ್ಯಾ |
ನಮಿಸಿ ಕೊಂಡಾಡುವರು ಶತ ಕವ್ಯ ಭೋಕ್ತರ |
ಶಮ ದಮೆ ಗುಣವುಳ್ಳ ಸಿದ್ದ ಸಾಧ್ಯರು ಸರ್ವ |
ಸಮುದಾಯ ಭೃತ್ಯಾದಿ ಕರ್ಮಕಾರರು ಮತ್ತೆ |
ಅಮಿತ ಪಿತೃ ಗಂಧರ್ವ ಅಪ್ಸರ ಜನರೊಡನೆ |
ಕಮಲ ಕರ್ಣಿಕೆ ವಿಜಯವಿಠ್ಠಲ ಸರ್ವೋ- |
ತ್ತಮ ಚತುರವಿಂಶತಿ ಕೋಟಿ ಜನರ ಪಡೆದ ॥ 3 ॥

 ಅಟ್ಟತಾಳ 

ಇಪ್ಪತ್ತು ನಾಲ್ಕು ಕೋಟಿ ದೇವ ಕುಲೋದ್ಭವ |
ಒಪ್ಪದಿಂದಲೆ ಉಂಟು ಪ್ರಸಿದ್ಧಾಪ್ರಸಿದ್ದಾ |
ತಪ್ಪದೆ ತಮ ತಮ ಕಾರ್ಯವ ಮಾಡುತ್ತ |
ಮುಪ್ಪು ಇಲ್ಲದೆ ಚರಮ ಭವಿಗಳಯ್ಯಾ |
ಇಪ್ಪರು ಇವರಿಗಿಂದಧಿಕ ನವಕೋಟಿ |
ಸುಪ್ಪವರ್ಣರು ತ್ರಿವಿಧ ಅಧಿಕಾರರು |
ಒಪ್ಪುತಾ ಪ್ರತಿದಿನ ಹರಿಗೆ ಸರ್ವಸ್ವ ಸ -|
ಮರ್ಪಣೆ ಮಾಡೋರು ಸಕಲ ವಿಷಯದಲ್ಲಿ |
ಸರ್ಪಶಯನ ನಮ್ಮ ವಿಜಯವಿಠ್ಠಲ ಜಗ -
ದಪ್ಪನಾಗಿ ಅವರವರ ಪಾಲಿಸುವ ॥ 4 ॥

 ಆದಿತಾಳ 

ಋಷಿಗಳ ಸಹಿತವಾಗಿ ಗಣನೆ ಮಾಡಿ ಎ -|
ಣಿಸು ನೂರಾಮೂವತ್ತು ಮೂರು ಕೋಟಿಗಳನ್ನು |
ಹಸನಾಗಿ ಇವರಿವರ ಭಕ್ತಿ ಜ್ಞಾನ ಕರ್ಮ |
ಬೆಸನೆ ತಿಳಿದು ಪ್ರಸನ್ನೀಕರಿಸಿಕೊಂಡು ಬಾಳು |
ಎಸೆವ ಸಪ್ತ ಭುವನ ಮೇರು ಧ್ರುವ ಲೋಕ ರಂ-|
ಜಿಸುವ ಸ್ವರ್ಗಾದಿ ಸರ್ವ ಬೊಮ್ಮಂಡಾವರಣತನಕ |
ಎಸಳು ಮತಿಯಿಂದ ತಮ ತಮ್ಮ ಯೋಗ್ಯ ಸ್ಥಾನ |
ವಸತಿಯಾಗಿಪ್ಪರು ಅನೇಕ ಬಗೆಯಿಂದ |
ಮಿಸುಕದೆ ನೋಡುವದು ಪ್ರಧಾನ ಸ್ಥಳವೆರಡು |
ಬಿಸಜಾಪ್ತ ಮಂಡಲ ಶರೀರಸ್ಥರೆಂದು |
ಕುಶಲಮತಿಯಿಂದ ಭಜನೆ ಮಾಡೆಲೋ ಮನುಜಾ |
ಪುಸಿಯಲ್ಲ ಇದೆ ಇದೆ ಸಾಧನ ಸಾಧ್ಯ ಸಿದ್ದ |
ವಶವಾಗುವದು ಸುಲಭ ವಿದ್ಯಪ್ರಾಪ್ತಿಯೆನ್ನು |
ಪಶುಪಾಲಕ ನಮ್ಮ ವಿಜಯವಿಠಲರೇಯ |
ಶಿಶುಗಳಂತೆ ಇಂತು ನೆನೆದವರ ಸಲಹುವಾ ॥ 5 ॥

 ಜತೆ 

ತೃಣಾಂತವಿಡಿದು ಬೊಮ್ಮಾದಿ ಪರಿಯಂತ ।
ನೆನೆದು ಧನ್ಯನಾಗೋ ವಿಜಯವಿಠ್ಠಲ ನಿಂದ ॥
*******


ಶ್ರೀ ವಿಜಯದಾಸಾರ್ಯ ವಿರಚಿತ 

ತಾರತಮ್ಯ ಸುಳಾದಿ

ರಾಗ ಹಂಸಧ್ವನಿ

ಧ್ರುವತಾಳ

ತೃಣಗುಲ್ಮಲತೆ ತೃಣರಾಜ ಮಿಕ್ಕಾದ ತರು | 
ವನಚರ ಖಗ ಮೃಗ ನಾನಾ ಪರಿಯ |
ಮನುಜ ಕ್ಷಿತಿಪ ಮನುಜ ಗಂಧರ್ವ ಪರಿಯಂತ |
ಎಣಿಕೆ ಮಾಡಿದರಾಗೆ ಅವಿ ಭೋಕ್ತರು |
ಗುಣಿಸಿ ನೋಡಲು ಇದರ ಗಣಿತ ಅಪರಿಮಿತ |
ಕೊನೆ ತಿಳಿದವನಿಲ್ಲ ಎಂದೆಂದಿಗೆ |
ಇನಿತು ಚೇತನಗಳು ಲಕ್ಷಯೆಂಭತ್ತು ನಾಲ್ಕು |
ಯೋನಿ ಜನನ ಪ್ರಭೇದದಿಂದ ಪ್ರಾಚುರ್ಯರು |
ಗುಣದಿಂದ ಓರ್ವರೋರ್ವರಧಿಕವಾಗಿಪ್ಪರು |
ಜನುಮ ಜನುಮದಲ್ಲಿ ವೃತ್ತಿ ಜ್ಞಾನಾ |
ತನು ಭಿನ್ನರಾಗಿ ಪುಟ್ಟುವರು ಧರಣಿ ಮೇಲೆ |
ದಿನ ಪ್ರತಿದಿನ ಕರ್ಮವಶದಿಂದಲಿ |
ತನು ಸಮೇತವಲ್ಲದೆ ಏಕಾಂಶದಲ್ಲಿ ಸಲ್ಲಾ |
ಅನುಮಾನ ಇದಕಿಲ್ಲ ಇವರಿಗೆ ಪೆಸರು ಕಾಣೋ |
ಮನದೊಳು ತಿಳಿ ಇವರ ತರುವಾಯದಿ |
ಅನಿಮಿಷ ಗಂಧರ್ವ ಬೊಮ್ಮಾದಿ ಪಿಡಿದು ಯೋ |
ಚನೆ ಮಾಡು ಮೂವತ್ತು ಮೂರು ಕೋಟಿ
ಮಿನಗುತಿಪ್ಪರು ಎಲ್ಲ ಸಾಂಶರು |
ನೆನೆದು ಧನ್ಯನಾಗೊ ನಾನಾ ಪರಿಯಿಂದ |
ಅನುನಯದಲಿ ನಾಲ್ಕು ಬಗೆಯಲಿಪ್ಪಾ |
ಜನರುಂಟು ಮುಖ್ಯಾಮುಖ್ಯ ತಾತ್ವಿಕ ಯೋ |
ಚನೆ ಮಾಡು ಅತಾತ್ವಿಕರಾಜಾನಜರ |
ಗಣಣೆಯಾದುದಕೆ ಒಕ್ಕಣಿಸು ವರ್ತಮಾನ |
ವನಜ ಸಂಭವ ನಿಡಿದು ಋಭುಗಣಾಂತ |
ತನುವು ಧರಿಪ ಸಂಖ್ಯೆ ಮೂವತ್ತು ಮೂರು ನೂರು |
ಇನಿತರೊಳು ಎರಡು ವಿಧ ಪ್ರಾಮುಖ್ಯರು |
ಘನವಂತ ಜನ ವಿಂಶತಿ ಶತ ಉಳಿದಾದವರು |
ಸನುಮತ ಋಭುಗಣ ತ್ರಿಸಹಸ್ರದ ಮೇಲೆ |
ಎಣಿಸು ನೂರೆಂಭತ್ತು ಜನರು ಒಂದೇ |
ವಿನಯದಿಂದಲಿ ಮುಂದೆ ಅಮುಖ್ಯ ತಾತ್ವಿಕ |
ಜನಕಿಂತ ವೆಗ್ಗಳರು ದೇವತ್ವ ಆದಿಯಲ್ಲಿ |
ಮುನಿಜನ ಮಿಕ್ಕಾದವರ ವಿಭಾಗ ಮಾಡಿ ತೆಗೆದು |
ಮಣಿದು ನಮೋಯೆನ್ನು ಶತಸ್ಥರ್ಗೆ |
ಕನಸೀಲಿ ಮನಸೀಲಿ ಇಲ್ಲಿ ತನಕ ಮುಂ - |
ದಣ ವಿಚಾರವ ಕೇಳು ಕಾರ್ಮಿಕ ಲೋಕಾಗ್ನಿ |
ತನುಜ ಪಾವಕ ಪವಮಾನ ವಿಡಿದು |
ಶನಿ ಪರಿಯಂತ ಅಮುಖ್ಯ ತಾತ್ವಿಕ |
ಗಣವೆನ್ನಿ ಇವರು ಕರ್ಮಜ ಸುರರು |
ಎಣಿಕೆ ಮಾಡು ಇಂತು ಮುನ್ನೂರು ಕಡಿಮೆಯಾಗಿ |
ಗುಣ ಸಹಸ್ರರೆನ್ನು ಮಧ್ಯಮರ |
ಗುಣಪೂರ್ಣ ವಿಜಯವಿಠಲರೇಯನ ಪಾದ |
ವನಜ ಧ್ಯಾನವ ಮಾಡು ಇವರಿವರ ಮಧ್ಯದಲ್ಲಿ ॥ 1 ॥

ಮಟ್ಟತಾಳ

ಮೊದಲಿಗೆ ಪೇಳಿದ  ಶತಸ್ಥರೊಳಗಿದ್ದ
ಪದುಮ ಬಾಂಧವನೊಬ್ಬ ಪರ್ಜನ್ಯ ನಾಮಕನು |
ಇದರೊಳಗೆ ಗಣನೆ ಸಿದ್ದವಾಗಿದೆ ಸತ್ಯ |
ಮುದದಿಂದಲಿ ತತ್ವಾಭಿಮಾನಿಗಳ - |
ಲ್ಲದ ದೇವತೆಗಳ ಪೆಸರು ಕೊಂಡಾಡುವುದು |
ಉದಕ ಪೂರಿತವಾದ ತೀರ್ಥಾಭಿಮಾನಿಗಳು |
ಅದರ ತರುವಾಯ ಪುಷ್ಕರ ಕರ್ಮಾಭಿಮಾನಿಗಳು |
ಒದಗಿ ಎಣಿಸಬೇಕು ನವ ಕೋಟಿಗೆ ತ್ರಿಶತ |
ತ್ರಿದಶ ಸಾವಿರ ಕಡಿಮೆ |
ಬುಧರು ಭಕುತಿಯಿಂದ ವಿವರಗಳಿಲ್ಲಿಗೆ ತ್ರಿ-
ವಿಧವಾಯಿತು ಕೇಳಿ ನವ ಕೋಟಿ ಸಂಖ್ಯಾ |
ಭವಸಾಗರ ಹಾರಿ ವಿಜಯವಿಠಲರೇಯ |
ಪವಣೆಯಿಂದಲಿ ಇವರ ಈ ಪರಿ ನಿರ್ಣೈಪ ॥ 2 ॥

ತ್ರಿವಿಡಿತಾಳ

ಅಮರರ ಕುಲದಿಂದ ಪುಟ್ಟಿದನಾಖ್ಯರು |
ಕ್ರಮದಿಂದ ತಿಳಿವುದು ಚತುರ ವಿಂಶತಿ ಕೋಟಿ |
ದ್ರುಮ ಲತೆ ಫಲ ಪುಷ್ಪ ಮಿಕ್ಕಾದವಕೇ ಉ - |
ತ್ತಮರಾಗಿ ಇಪ್ಪರು ಅಂಶದಿಂದ |
ಅಮರ ಮೊಗ ಪುತ್ರರು ಹದಿನಾರು ಸಾವಿರ |
ರಮಣೀಯರಾದ ಅಪ್ಸರ ಸ್ತ್ರೀಯರು ನೂರು |
ವಿಮಲ ತುಂಬುರಾದಿ ಶತ ಗಂಧರ್ವ ಸಹ |
ಸಮವಾಗಿ ಇಪ್ಪರು ಇವರೆ ಅಜಾನಜರಯ್ಯಾ |
ನಮಿಸಿ ಕೊಂಡಾಡುವರು ಶತ ಕವ್ಯ ಭೋಕ್ತರ |
ಶಮ ದಮೆ ಗುಣವುಳ್ಳ ಸಿದ್ದ ಸಾಧ್ಯರು ಸರ್ವ |
ಸಮುದಾಯ ಭೃತ್ಯಾದಿ ಕರ್ಮಕಾರರು ಮತ್ತೆ |
ಅಮಿತ ಪಿತೃ ಗಂಧರ್ವ ಅಪ್ಸರ ಜನರೊಡನೆ |
ಕಮಲ ಕರ್ಣಿಕೆ ವಿಜಯವಿಠ್ಠಲ ಸರ್ವೋ- |
ತ್ತಮ ಚತುರವಿಂಶತಿ ಕೋಟಿ ಜನರ ಪಡೆದ ॥ 3 ॥

ಅಟ್ಟತಾಳ

ಇಪ್ಪತ್ತು ನಾಲ್ಕು ಕೋಟಿ ದೇವ ಕುಲೋದ್ಭವ |
ಒಪ್ಪದಿಂದಲೆ ಉಂಟು ಪ್ರಸಿದ್ಧಾಪ್ರಸಿದ್ದಾ |
ತಪ್ಪದೆ ತಮ ತಮ ಕಾರ್ಯವ ಮಾಡುತ್ತ |
ಮುಪ್ಪು ಇಲ್ಲದೆ ಚರಮ ಭವಿಗಳಯ್ಯಾ |
ಇಪ್ಪರು ಇವರಿಗಿಂದಧಿಕ ನವಕೋಟಿ |
ಸುಪ್ಪವರ್ಣರು ತ್ರಿವಿಧ ಅಧಿಕಾರರು |
ಒಪ್ಪುತಾ ಪ್ರತಿದಿನ ಹರಿಗೆ ಸರ್ವಸ್ವ ಸ -|
ಮರ್ಪಣೆ ಮಾಡೋರು ಸಕಲ ವಿಷಯದಲ್ಲಿ |
ಸರ್ಪಶಯನ ನಮ್ಮ ವಿಜಯವಿಠ್ಠಲ ಜಗ -
ದಪ್ಪನಾಗಿ ಅವರವರ ಪಾಲಿಸುವ ॥ 4 ॥

ಆದಿತಾಳ

ಋಷಿಗಳ ಸಹಿತವಾಗಿ ಗಣನೆ ಮಾಡಿ ಎ -|
ಣಿಸು ನೂರಾಮೂವತ್ತು ಮೂರು ಕೋಟಿಗಳನ್ನು |
ಹಸನಾಗಿ ಇವರಿವರ ಭಕ್ತಿ ಜ್ಞಾನ ಕರ್ಮ |
ಬೆಸನೆ ತಿಳಿದು ಪ್ರಸನ್ನೀಕರಿಸಿಕೊಂಡು ಬಾಳು |
ಎಸೆವ ಸಪ್ತ ಭುವನ ಮೇರು ಧ್ರುವ ಲೋಕ ರಂ-|
ಜಿಸುವ ಸ್ವರ್ಗಾದಿ ಸರ್ವ ಬೊಮ್ಮಂಡಾವರಣತನಕ |
ಎಸಳು ಮತಿಯಿಂದ ತಮ ತಮ್ಮ ಯೋಗ್ಯ ಸ್ಥಾನ |
ವಸತಿಯಾಗಿಪ್ಪರು ಅನೇಕ ಬಗೆಯಿಂದ |
ಮಿಸುಕದೆ ನೋಡುವದು ಪ್ರಧಾನ ಸ್ಥಳವೆರಡು |
ಬಿಸಜಾಪ್ತ ಮಂಡಲ ಶರೀರಸ್ಥರೆಂದು |
ಕುಶಲಮತಿಯಿಂದ ಭಜನೆ ಮಾಡೆಲೋ ಮನುಜಾ |
ಪುಸಿಯಲ್ಲ ಇದೆ ಇದೆ ಸಾಧನ ಸಾಧ್ಯ ಸಿದ್ದ |
ವಶವಾಗುವದು ಸುಲಭ ವಿದ್ಯಪ್ರಾಪ್ತಿಯೆನ್ನು |
ಪಶುಪಾಲಕ ನಮ್ಮ ವಿಜಯವಿಠಲರೇಯ |
ಶಿಶುಗಳಂತೆ ಇಂತು ನೆನೆದವರ ಸಲಹುವಾ ॥ 5 ॥

ಜತೆ

ತೃಣಾಂತವಿಡಿದು ಬೊಮ್ಮಾದಿ ಪರಿಯಂತ ।
ನೆನೆದು ಧನ್ಯನಾಗೋ ವಿಜಯವಿಠ್ಠಲನಿಂದ ॥
******