Showing posts with label ಕಣ್ಣ ಮುಂದಿರೊ ರಂಗ purandara vittala. Show all posts
Showing posts with label ಕಣ್ಣ ಮುಂದಿರೊ ರಂಗ purandara vittala. Show all posts

Wednesday, 4 December 2019

ಕಣ್ಣ ಮುಂದಿರೊ ರಂಗ purandara vittala

ಪುರಂದರದಾಸರು
ರಾಗ ಶಂಕರಾಭರಣ ಆದಿತಾಳ

ಕಣ್ಣ ಮುಂದಿರೋ, ರಂಗ, ಕಣ್ಣ ಮುಂದಿರೋ ||ಪ||

ಪೂತನಿಯ ಮೊಲೆಯನುಂಡು
ವಾತಶಕಟಾದಿ ದೈತ್ಯರ
ಘಾತಿಸಿದ ರಂಗ ನಿನ್ನ
ಪೋಕತನಕಂಜುವೆನು ||

ಕಡಹದ ಮರವನೇರಿ
ಮಡುವ ಧುಮುಕಿ ಕಾಳಿಂಗನ
ಪೆಡೆಯ ತುಳಿದು ಅವನ ಸ್ಥಳವ
ಬಿಡಿಸಿ ಬಂದೆ ಕರುಣನಿಧಿಯೆ ||

ಬಾಲೆಯರ ಮನೆಗೆ ಪೋಗಿ
ಹಾಲು ಮೊಸರು ಕದ್ದು ಇಂಥ
ಲೀಲೆ ಮಾಡದಿರು ನಮ್ಮ
ಲೋಲ ಪುರಂದರವಿಠಲ ||
********

ಕಣ್ಣ ಮುಂದಿರೊ ರಂಗ ಕಣ್ಣ ಮುಂದಿರೊ ಪ

ಪೂತನಿಯ ಮೊಲೆಯನುಂಡು |ವಾತಶಕಟಾದಿ ದೈತ್ಯರ ||ಫಾತಿಸಿದ ರಂಗ ನಿನ್ನ |ಪೋತತನಕಂಜುವೆನು 1

ಕಡಹದ ಮರವನೇರಿ |ಮಡುವ ಧುಮುಕಿ ನೋಡಿ ||ಹೆಡೆಯ ತುಳಿದ ನಿನ್ನ |ದುಡುಕಿಗಂಜುವೆನು 2

ಬಾಲೆಯರ ಮನೆಗೆ ಪೋಗಿ |ಹಾಲು-ಮೊಸರು ಕದ್ದು |||ಲೀಲೆ ಮಾಡದಿರಯ್ಯ |ಲೋಲಪುರಂದರವಿಠಲ3
******