Showing posts with label ದ್ವೈತ ಅದ್ವೈತೆಂದು ಹೊಡೆದಾಡದಿರೊ ಪ್ರಾಣಿ mahipati. Show all posts
Showing posts with label ದ್ವೈತ ಅದ್ವೈತೆಂದು ಹೊಡೆದಾಡದಿರೊ ಪ್ರಾಣಿ mahipati. Show all posts

Thursday, 12 December 2019

ದ್ವೈತ ಅದ್ವೈತೆಂದು ಹೊಡೆದಾಡದಿರೊ ಪ್ರಾಣಿ ankita mahipati

ವಸಂತ ರಾಗ ಝಪ್ ತಾಳ

ದ್ವೈತ ಅದ್ವೈತೆಂದು ಹೊಡೆದಾಡದಿರೊ ಪ್ರಾಣಿ
ಚೇತಿಸಿ ಬ್ಯಾರಿಹ ವಸ್ತು ಗಾಣಿ ||ಧ್ರುವ||

ದ್ವೈತ ಎನಲಿಕ್ಕೆ ತಾಂ ಅದದೆ ಅದ್ವೈತ
ಅದ್ವೈತ ಎನಲಿಕ್ಕೆ ಅದೆನೆ ತಾ ದ್ವೈತ ||೧||

ಹಿಂದುಮುಂದಾಗಿ ಆಡಿಸುತಿಹ ನಿಜ ಖೂನ
ಎಂದಿಗಾದರು ತಿಳಿಯಗುಡದು ಪೂರ್ಣ ||೨||

ಅತಿ ಸೂಕ್ಷ್ಮ ತಿಳುವದಾರಲ್ಲೆ ಬಿದ್ದದ ಮಲಕು
ನೇತಿ ನೇತೆಂದು ಶ್ರುತಿ ಇದಕೆ ತಿಳಕೊ ||೩||

ದ್ವೈತ ಎಂದವನೆ ತಾಂ ಪರಮ ವೈಷ್ಣವನಲ್ಲ
ಅದ್ವೈತನೆಂದವನೆ ಸ್ಮಾರ್ತನಲ್ಲ ||೪||

ಸ್ಮಾರ್ತ ವೈಷ್ಣವರ ಈ ಮತ ಗುರುಮಧ್ವ ಮುನಿ ಬಲ್ಲ
ಅರ್ತು ಸ್ಥಾಪಿಸುವದು ಮನುಜಗಲ್ಲ ||೫||

ಮೂರುವರಿ ಮೊಳದ ದೇಹದ ಶುದ್ಧಿ ನಿನಗಿಲ್ಲ
ದೋರುವರೆ ತರ್ಕಸ್ಯಾಡುವ ಸೊಲ್ಲ ||೬||

ದ್ವೈತ ಅದ್ವೈತಕ ಬ್ಯಾರಿಹ ಗುರುಗುಟ್ಟು
ಚಿತ್ತ ಶುದ್ಧಾಗಿ ಮಹಿಪತಿಗೆ ಮುಟ್ಟು ||೭|
****

 ದ್ವೈತ ಅದ್ವೈತೆಂದು ಹೊಡದಾಡದಿರೊ ಪ್ರಾಣಿ

ಚೇತಿಸಿ ಬ್ಯಾರಿಹ ವಸ್ತುಗಾಣಿ 
ದ್ವೈತ ಎನಲಿಕ್ಕೆ ತಾಂ ಆದೆವೆ ಅದ್ವೈತ ಅ-
ದ್ವೈತ ಎನಲಿಕ್ಕೆ ಅದೆನೆ ತಾಂ ದ್ವೈತ 
ಹಿಂದು ಮುಂದಾಗಿ ಆಡಿಸುತಿಹ್ಯ ನಿಜಖೂನ
ಎಂದಿಗಾದರು ತಿಳಿಯಗುಡದು ಪೂರ್ಣ 
ಅತಿಸೂಕ್ಷ್ಮ ತಿಳುವಾದರಲ್ಲೆ ಬಿದ್ದದ ಮಲಕು
ನೇತಿ ನೇತೆಂದು ಸಾರುತಿದೆ ಶ್ರುತಿ ಇದಕೆ ತಿಳಿಕೊ 
ದ್ವೈತ ಎಂದವನೆ ತಾಂ ಪರಮ ವೈಷ್ಣವನಲ್ಲ, ಅ-
ದ್ವೈತನೆಂದವನೆ ತಾಮ ಪರಮ ಸ್ಮಾರ್ತನಲ್ಲ 
ಸ್ಮಾರ್ತ ವೈಷ್ಣವ ಮತ ಗುರು ಮಧ್ವಮುನಿಬಲ್ಲ
ಅರ್ತು ಸ್ಥಾಪಿಸುವದು ಮನುಜಗಲ್ಲ 
ಮೂರುವರಿ ಮೊಳದ ದೇಹದ ಶುದ್ಧಿ ನಿನಗಿಲ್ಲ
ದೋರುವರೆ ತರ್ಕಸ್ಯಾಡುವ ಸೊಲ್ಲ 
ದ್ವೈತ ಅದ್ವೈತಕ ಬ್ಯಾರಿಹ ಗುರುಗುಟ್ಟು
ಚಿತ್ತ ಶುದ್ದಾಗಿ ಮಹಿಪತಿಯ ಮುಟ್ಟು
***