Showing posts with label ಗಂಗಾದೇವಿ ನಮೋ ನಮೋ ಗಂಗಾದೇವಿ ತರಂಗಿಣಿ bheemesha krishna. Show all posts
Showing posts with label ಗಂಗಾದೇವಿ ನಮೋ ನಮೋ ಗಂಗಾದೇವಿ ತರಂಗಿಣಿ bheemesha krishna. Show all posts

Tuesday, 1 June 2021

ಗಂಗಾದೇವಿ ನಮೋ ನಮೋ ಗಂಗಾದೇವಿ ತರಂಗಿಣಿ ankita bheemesha krishna

 ನದಿಗಳು

ಗಂಗಾದೇವಿ ನಮೋ ನಮೋ ಗಂಗಾದೇವಿ ತರಂಗಿಣಿ

ನೀ ಮುದ್ದು ಮಂಗಳಾಂಗನ ಮುಖ ತೋರಿಸೆ ಗಂಗಾದೇವಿ ಪ

ವಾಮನನಖದಿಂದ ಒಡೆದÀು ಬ್ರಹ್ಮಾಂಡ

ಬಹಿರಾವರಣದಿಂದಿಳಿದೆಯೆ

ಬಹಿರಾವರಣದಿ ಇಳಿದು ನಿರಂಜನ

ಆಲಯದೊಳು ಬಂದೆ ಭರದಿಂದ1

ಹರಿಪಾದೋದಕವಾಗಿ ಹರಿದು ಬಂದೆಯೆ ನೀನು

ಹರನ ಜಟೆಯಲ್ವಾಸವ ಮಾಡಿ

ಹರನ ಜಟೆಯಲ್ವಾಸವ ಮಾಡಿ ನೀ

ಮೇರುಗಿರಿಯಲ್ಲಿ ನಾಲ್ಕು ಸೀಳಾದೆಯೆ 2

ಜಕ್ಷು ಭದ್ರಾ ಸೀತಾ ಎಂಬ ಮೂವರ ಬಿಟ್ಟು

ಭರತಖಂಡಕೆ ಬಂದೆ ಬಹುದೂರ

ಭರತಖಂಡಕೆ ಬಂದೆ ಬಹುದೂರ ಭಾಗಮ್ಮ

ಪ್ರತ್ಯಕ್ಷ ಅಳಕನಂದನ ತಾಯಿ 3

ಸಾಗರನರಸಿ ಪ್ರಯಾಗದಿ ಮರದ ಬಾಗಿಣವನು

ಕೊಂಬೆ ವೇಣಿಯ ದಾನ

ಕೊಂಬೆ ವೇಣಿಯ ದಾನ ಮುತ್ತೈದೇ-

ರಾಗಿರೆಂದ್ಹರಸಿ ಪೂಜೆಯಗೊಂಬೆ 4

ಸಗರನ ಮಕ್ಕಳ ಅಗಿವೆ ಕಡಿವೆನೆಂದು

ಭಗೀರಥನ್ಹಿಂದೆ ಬಂದೆಯೆ ನೀನು

ಭಗೀರಥನ್ಹಿಂದೆ ಬಂದೆಯೆ ಹಿಮಾಲಯ ದಾಟಿ

ಜಗವನುದ್ಧರಿಸುವ ಜಾಹ್ನವಿ 5

ಯಮುನಾ ಸರಸ್ವತಿ ಕೂಡಿ ಗಮನ ಮಾಡುವ ಗಂಗಾ

ಸಮನಾಗಿ ಹರಿದೆ ಸಂಗಮಳಾಗಿ

ಸಮನಾಗಿ ಹರಿದೆ ಸಂಗಮಳಾಗಿ ತ್ರಿವೇಣಿ

ಯುಗಳ ಪಾದಗಳಾರು ತೋರಿಸೆ 6

ಭೀಷ್ಮನ ಜನನಿ ಭೀಮೇಶ ಕೃಷ್ಣನ ಪುತ್ರನ(ತ್ರಿ ನೀ?)

ದೋಷವ ಕಳೆದÀು ಸಂತೋಷದಿ

ದೋಷವ ಕಳೆದÀು ಸಂತೋಷದಿ ಸಾಯುಜ್ಯ

ಬ್ಯಾಸರದಲೆ ಕೊಟ್ಟು ಸಲಹಮ್ಮ 7

****