Showing posts with label ಬೆದರದಿರೊ ಬೋವು ಬರಲಿಲ್ಲ prasannavenkata. Show all posts
Showing posts with label ಬೆದರದಿರೊ ಬೋವು ಬರಲಿಲ್ಲ prasannavenkata. Show all posts

Thursday, 14 November 2019

ಬೆದರದಿರೊ ಬೋವು ಬರಲಿಲ್ಲ ankita prasannavenkata

by ಪ್ರಸನ್ನವೆಂಕಟದಾಸರು
ಬೆದರದಿರೊ ಬೋವು ಬರಲಿಲ್ಲ ನಿನ್ನಮೃದುಲ ಸವಿ ತೊದಲು ಮಾತಾಡೊ ಬಾಲ ಪ.

ಕಣ್ಣೆವೆಯಿಕ್ಕದೆ ನೋಡಬ್ಯಾಡನಿನ್ನ ಮೈಮರವಿಟ್ಟಾಡ ಬ್ಯಾಡಗುನ್ನಗನ್ಯೆಳೆದಂಬೆಗಾಲಿಕ್ಕಬ್ಯಾಡಹೊನ್ನೋಲೆ ಕೆಂಪೇರೆ ಹುಯಿಲಿಡಬ್ಯಾಡ 1

ನೆಲವಿದು ದೈನ್ಯವ ಬಿಡಬ್ಯಾಡಕೊಲ್ಲುವರ್ಯಾರಿಲ್ಲ ಕೊಲೆಗಂಜಬ್ಯಾಡನಲವ ಬಿಟ್ಟಡವಿಯನೈದ ಬ್ಯಾಡಕಳವಲಿ ಹುದುಗಿಕೊಂಡಿರಬ್ಯಾಡ 2

ಹುಸಿಗೆ ಬೇಸರಬ್ಯಾಡ ಕೃಷ್ಣಮ್ಮಹೊಸ ಕಲ್ಕ್ಯಾಟಬ್ಯಾಡ ನಮ್ಮಮ್ಮಪ್ರಸನ್ನವೆಂಕಟಪತಿ ಪರಬೊಮ್ಮ ನಿನ್ನಕುಶಲಕ್ಕೇನೇನುಪಾಯವಿಲ್ಲಮ್ಮಾ 3
*******