Showing posts with label ಸಪ್ತಕೋಟಿ ಮಹಾಮಂತ್ರಾರ್ಥ ಹೃದಯಾಬ್ಜ uragadrivasa vittala. Show all posts
Showing posts with label ಸಪ್ತಕೋಟಿ ಮಹಾಮಂತ್ರಾರ್ಥ ಹೃದಯಾಬ್ಜ uragadrivasa vittala. Show all posts

Monday 2 August 2021

ಸಪ್ತಕೋಟಿ ಮಹಾಮಂತ್ರಾರ್ಥ ಹೃದಯಾಬ್ಜ ankita uragadrivasa vittala

ಸಪ್ತಕೋಟಿ ಮಹಾಮಂತ್ರಾರ್ಥ ಹೃದಯಾಬ್ಜ

ಚಕ್ರಮಂಡಲದೊಳು ಪ್ರತಿಪಾದ್ಯ ಪ


ಹೃದಯಾಬ್ಜ ಮಿತ್ರ ಘೃಣೀ ಎಂದು ಸ್ತ್ರೋತ್ರ

ತ್ರಿಕೋಣದೊಳು ಹ್ರೀಂ ಶ್ರೀಂ ಕ್ಲೀಂ ಮಾತ್ರ

ಮುದದಿಂದ e್ಞÁನೇಛ್ಛಾ ಕ್ರಿಯಾ ಶಕ್ತಿ ತ್ರಯಗಳು

ತದಭಿಮಾನಿಗಳ ನೆನೆದುದಳದಿ ಸೂರ್ಯ

ಸೋಮಾಗ್ನಿಗಳ್ಮೇಲೆ ಕರಿ ಅಜ ರಥ ವೀಥಿಗಳಧಕರಿಸಿ

ಅದರ ಮೇಲೊಂದು ಮಂಡಲ ನಿರ್ಮಿಸಿ ಷÀಟ್ಸರೋ-

ಜದಳಗಳನೆ ರಚಿಸಿ ಇದರೋಳು ಪೂರ್ಣ e್ಞÁನ್ವೆಶ್ವರ್ಯ

ಪ್ರಭಾನಂದ ತೇಜ ಸತ್ಯಮೂರ್ತಿಗಳ್ಚಿಂತಿಸೀ

ವತ್ಸರ ಋತು ಮಾಸ ತಾರಾರಾಶಿಗಳ ಗುಣಿಸಿ

ಬದಿಯಲಿ ಏಕಾ ಪಂಚಾಶದ್ವರ್ಣ ತಿಳಿಯೋದಿದು ವ್ಯಾಪ್ತಿ 1


ಮೇಲೊಂದು ಮಂಡಲದ ಅಷ್ಟದಳಗಳಲಿ

ಅಷ್ಟ ಬೀಜಾಕ್ಷರಗಳನೆ ರಚಿಸೀ ಶನಿ ರಾಹು ಗುರು

ಬುಧ ಶುಕ್ರ ಸೋಮ ಮಂಗಳ ಕೇತುಗಳ ನಿರ್ಮಿಸಿ

ವಲಯದಿ ಪ್ರಣವದಷ್ಟಕ್ಷರಗಳ ನಿರ್ಮಿಸಿ

ವಿಶ್ವಾದ್ಯಷ್ಟರೂಪನನೆ ಚಿಂತಿಸಿ ಅದರಿಂದಭಿವ್ಯಕ್ತ

ವರ್ಣಗಳ್‍ಭಜಿಸೀ ವರ್ಗಕೆ ತತ್ವತನ್ಮಾನಿಗಳನೆ ಚಿಂತಿಸಿ

ಅಷ್ಟಾಕ್ಷರಾತ್ಮಕನ ದೃಢಮನಸಿನಿಂದ ಸ್ತುತಿಸಿ

ಕಾಲ ಅಧಿಕಾರಭೇದದಿಂದುಪಾಸನ ಯೋಗ್ಯತೆಯಂತೆ

ಇದು ವ್ಯಾಪ್ತಿ2


ಮೇಲೊಂದು ಮಂಡಲ ದ್ವಾದಶದಳದೊಳ್

ದ್ವಾದಶ ಬೀಜಾಕ್ಷರ ಕೇಶವಾದಿ ದ್ವಾದಶನಾಮ

ವರ್ಣವಿಭಾಗವು ರಾಶಿಗಳ ವಿವರ ವಲಯದಿ

ತಾರಾಯೋಗಗಳ್ವಿಸ್ತಾರ ಮೇಲ್ಮಂಡಲದೊಳು

ಚತುರ್ವಿಂಶತಿ ಬೀಜಾಕ್ಷರ ಕೇಶವಾದಿನಾಮ

ತಾರೆರಾಶಿಗಳೆಣಿಸೀ ಮೇಲೆ ಐವತ್ತೊಂದು

ಅಜಾದಿಗಳ ಚಿಂತಿಸಿ ಅಲ್ಲಿಹ ಶ್ರೀ ವೇಂಕಟೇಶಾತ್ಮಕ ಶ್ರೀ ಉರಗಾದ್ರಿವಾಸವಿಠಲ 3

****