Showing posts with label ನಿನಗೆ ನೀನೆ ಕೃಷ್ಣ ದಯಮಾಡಿ ಸಲಹಯ್ಯಎನಗೊಂದು hayavadana NINAGE NEENE KRISHNA DAYAMAADI SALAHAYYA ENAGONDU. Show all posts
Showing posts with label ನಿನಗೆ ನೀನೆ ಕೃಷ್ಣ ದಯಮಾಡಿ ಸಲಹಯ್ಯಎನಗೊಂದು hayavadana NINAGE NEENE KRISHNA DAYAMAADI SALAHAYYA ENAGONDU. Show all posts

Saturday, 11 December 2021

ನಿನಗೆ ನೀನೆ ಕೃಷ್ಣ ದಯಮಾಡಿ ಸಲಹಯ್ಯಎನಗೊಂದು ankita hayavadana NINAGE NEENE KRISHNA DAYAMAADI SALAHAYYA ENAGONDU



ನಿನಗೆ ನೀನೆ ಕೃಷ್ಣ ದಯಮಾಡಿ ಸಲಹಯ್ಯಎನಗೊಂದು ಸಾಧನ ಲೇಸುಕಾಣಬಾರದು ಪ.


ಸ್ನಾನಮಾಡಿಯೆ ನಿನ್ನ ಸಂಪಾದಿಸೇನೆಂದರೆಸ್ನಾನಮಾಡದೇ ಕಪ್ಪೆ ಸರ್ವಕಾಲದಲಿಧ್ಯಾನ ಮಾಡಿಯೇ ನಿನ್ನ ಸಂಪಾದಿಸೇನೆಂದರೆಧ್ಯಾನ ಮಾಡದೇ ಬಕಪಕ್ಷಿಯು ಸರ್ವದಾ 1


ಜಪವ ಮಾಡಿಯೆ ನಿನ್ನ ಕೃಪೆಗೊಳಗಾಗುವೆನೆನೆಜಪದಲ್ಲಿ ಮನಸ್ಸೆನ್ನಾಧೀನವಿಲ್ಲಉಪವಾಸವೇ ಉಚಿತ ಸಾಧನವೆಂಬೆನೆಉಪವಾಸವೇ ಇರದೆ ಉರಗನು ತಾ ಸರ್ವದಾ 2


ಸನ್ನ್ಯಾಸ ಸುಖಸಾಧನವು ಎಂತೆಂಬೆನೆಸನ್ನ್ಯಾಸಿಯಾಗಿರನೆ ರಾವಣನುಕನ್ಯಾದಾನವೆ ಮುಖ್ಯ ಸಾಧನವೆಂಬೆನೆಕನ್ಯಾದಾನವ ಕೊಡನೆ ಕಂಸಗೆ ಜರಾಸಂಧ 3


ಜಾತಿಲಿ ನಿಮ್ಮ ದಯ ಸಂಪಾದಿಸೇನೆಂದರೆಜಾತಿಲಿ ಕಶ್ಯಪಸುತರು ದೈತ್ಯರಾಗಿರರೆಭೂತಿಲಿ ನಿಮ್ಮ ದಯ ಸಂಪಾದಿಸೇನೆಂದರೆಭೂತಿಯಾಗಿರನೆ ಈ ದುರುಳ ದುರ್ಯೋಧನ 4


ಬಂಧುತ್ವವೇ ಗತಿ ಸಾಧವವೆಂಬೆನೆಬಂಧುತ್ವವಿರದೆ ಶಿಶುಪಾಲನಿಗೆಒಂದರಿಂದುಚಿತ ಕಾಣೆ ಹಯವದನರಾಯನೆಎಂದೆಂದಿಗೂ ದಾಸನೆಂದೆನಿಸೊ5

***