Showing posts with label ಇಷ್ಟು ನಿರ್ದಯ vijaya vittala ankita suladi ಬುಧವಾರದ ಸುಳಾದಿ ISHTU NIRDAYA BUDHAVAARA SULADI. Show all posts
Showing posts with label ಇಷ್ಟು ನಿರ್ದಯ vijaya vittala ankita suladi ಬುಧವಾರದ ಸುಳಾದಿ ISHTU NIRDAYA BUDHAVAARA SULADI. Show all posts

Sunday 8 December 2019

ಇಷ್ಟು ನಿರ್ದಯ vijaya vittala ankita suladi ಬುಧವಾರದ ಸುಳಾದಿ ISHTU NIRDAYA BUDHAVAARA SULADI

1st Audio by Mrs. Sindhu S Kulkarni

2nd Audio by Mrs. Nandini Sripad

ಮೊದಲಕಲ್ಲು ಶ್ರೀ ಶೇಷದಾಸಾರ್ಯ ವಿರಚಿತ 
 (ಗುರುವಿಜಯವಿಠ್ಠಲ ಅಂಕಿತ) 

 ಬುಧವಾರದ ಸುಳಾದಿ 

 ರಾಗ ದರ್ಬಾರಿಕಾನಡ 

 ಧ್ರುವತಾಳ 

ಇಷ್ಟು ನಿರ್ದಯವ್ಯಾಕೊ ಎಲೆ ಎಲೆ ಆಪ್ತನಾದ
ಕೃಷ್ಣ ನಿನಗೆ ನಾನು ದೂರಾದವನೇ
ಘಟ್ಟಿ ಮನಸಿನವ ನೀನಲ್ಲ ಎಂದಿಗೂ ಎನ್ನ ಅ -
ದೃಷ್ಟ ಲಕ್ಷಣವೆಂತೊ ತಿಳಿಯದಯ್ಯಾ
ಸೃಷ್ಟಿಯೊಳಗೆ ಭಕುತ ವತ್ಸಲನೆಂಬೊ
ಶ್ರೇಷ್ಠವಾದ ಬಿರಿದು ಇಲ್ಲವೇನೋ
ಶಿಷ್ಟ ಜನರ ಸಂಗ ವರ್ಜಿತನಾಗಿ ನಿನ್ನ
ಮುಟ್ಟಿ ಭಜಿಸದಿಪ್ಪ ಹೀನನೆಂದು
ಬಿಟ್ಟು ನೋಡಿದರೆ ಮತ್ತಿಷ್ಟು ಅಧಿಕವಾದ
ದುಷ್ಟ ನಡತಿಯಿಂದ ಬದ್ಧನಾಹ
ಪ್ರೇಷ್ಟ ಯೋಗ್ಯವಾದ ಕಾಲವ ನಿರೀಕ್ಷಿಸೆ
ಎಷ್ಟು ಕಲ್ಪಗಳಿಗೆ ಭವದಾಲಿಂದ
ಸಿಷ್ಟವಾಗುವನೇನೊ ಅಭೀಷ್ಟವೈದುವನೆಂತೋ
ದೃಷ್ಟಿಲಿ ನೋಡದಿರೆ ಅಜಭವಾದ್ಯರು
ಕಷ್ಟವೈದುವರು ನಿಜಸುಖವಿಲ್ಲದಲೆ
ವಿಷ್ಣು ನಿನ್ನಯ ಮಹಿಮೆ ಇನಿತು ಇರಲು
ಎಷ್ಟರವರಯ್ಯಾ ಮಿಕ್ಕಾದ ಭಕ್ತರೆಲ್ಲ
ತುಷ್ಟನಾಗಿ ನಿನಗೆ ನೀನೇ ಒಲಿದು
ದಟ್ಟವಾದ ಕರ್ಮ ನೂಕಿ ಕಡಿಗೆ ಮಾಡಿ
ಪುಷ್ಟಿಗೈಸು ಜ್ಞಾನಾನಂದದಿಂದ
ತಟ್ಟಲೀಸದೆ ಕಲಿ ಬಾಧಿ ಎಂದೆಂದಿಗೆ
ಹೃಷ್ಟನಾಗು ಎನ್ನ ಸಾಧನಕ್ಕೆ
ಧಿಟ್ಟ ಮೂರುತಿ ಗುರುವಿಜಯವಿಠ್ಠಲರೇಯಾ 
ಪೊಟ್ಟಿಯೊಳಗೆ ಜಗವಿಟ್ಟು ಸಲಹುವ ದೇವಾ ॥ 1 ॥

 ಮಟ್ಟತಾಳ 

ಕಾಳಿ ಸರ್ಪನು ನಿನ್ನ ಕಚ್ಚಿ ಬಿಗಿಯೆ ಅವನ
ಕೀಳು ನಡತೆಯನ್ನು ನೋಡದಲೆ ಕರುಣದಲಿ
ಮೇಲಾದನುಗ್ರಹ ಮಾಡಿದಿ ಮುದದಿಂದ
ಫಾಲಲೋಚನ ಸುರಪ ಗುರು ಸತಿ ಭೃಗು ಭೀಷ್ಮ
ಶೀಲ ಭಕುತರೆಲ್ಲ ಕಲಿ ಕಲ್ಮಷದಿಂದ
ಕಾಲನಾಮಕ ನಿನ್ನ ಬಂಧಕ ಶಕುತಿಯಲಿ
ವ್ಯಾಳೆ ವ್ಯಾಳೆಗೆ ಅಪರಾಧವೆ ಮಾಡಿದರು
ಪಾಲಿಸಿದಿ ಹೊರ್ತು ಪ್ರದ್ವೇಷ ಮಾಡಿದಿಯಾ
ಜಾಲ ಅಘವ ಮಾಡಿ ದೇಹಿ ದೇಹಿ ಎನಲು
ತಾಳುವರಲ್ಲದಲೆ ಛಿದ್ರಗಳೆಣಿಸುವರೆ
ಮೂಲ ನೀನೆ ಸುಖ ದುಃಖಾನುಭವಕ್ಕೆ
ಮೂರ್ಲೋಕಾಧಿಪ ಗುರುವಿಜಯವಿಠ್ಠಲ ನಿನ್ನ
ಆಳುಗಳೊಳಗೊಬ್ಬ ಅಧಮನು ನಾನೇವೆ ॥ 2 ॥

 ತ್ರಿವಿಡಿತಾಳ 

ವಿದೇಶದವನಾಗಿ ಪಥದೊಳು ಒಂದು ಕ್ಷಣ
ಅದರ ಪರಸ್ಪರವಾದ ಭಿಡಿಯಾ
ಹೃದಯದೊಳು ಮರಿಯದೆ ಸ್ಮರಿಸುವನೊಮ್ಮಿಗನ್ನ
ಪದುಮನಾಭನೆ ನಿನ್ನ ನಿರ್ಭಿಡಿಯತನಕೆ
ಆದಿ ಅಂತ್ಯವಿಲ್ಲ ಆಶ್ಚರ್ಯ ತೋರುತಿದೆ
ಉದದಿ ಪೋಲುವ ದಯ ಪೂರ್ಣನೆಂದು
ಸದಮಲವಾಗಿ ನಿನ್ನ ಧೇನಿಸಬೇಕೆಂತೊ
ವಿದೂರನೆನಿಪ ದೋಷರಾಶಿಗಳಿಗೆ
ಪದೋಪದಿಗೆ ಗುರುದ್ರೋಹ ಮಾಡಿದಿ ಎಂದು ಅ -
ವಧಿ ಇಲ್ಲದಲೆ ಹಂಗಿಸುವದು
ಮೋದವಾಗಿ ನಿನಗೆ ತೋರುತಲಿದೆ ನಿನ್ನ
ಚದುರತನಕೆ ನಾನು ಎದುರೇ ನೋಡಾ
ಪದುಮ ಸಂಭವ ಮುಖ್ಯ ದಿವಿಜರು ಸ್ವಾತಂತ್ರ್ಯದಿ
ಪದವಾಚಲಣದಲ್ಲಿ ಸಮರ್ಥರೇ
ಹೃದಯದೊಳಗೆ ವಾಸವಾಗಿದ್ದ ಹರಿ ನಿನ್ನ
ಚೋದನದಂತೆ ನಡೆವ ಆವ ಕಾಲ
ಇದು ಎನ್ನ ಮಾತಲ್ಲ " ಯಥಾದಾರುಮಯಿಯೋಷಾ "
ಶುದ್ಧ ಭಾಗವತೋಕ್ತಿ ಪ್ರಮಾಣದಂತೆ
ಅದುಭೂತ ಬಿಂಬ ನೀನು ಪ್ರತಿಬಿಂಬ ಜೀವ ನಿನಗೆ ನೀ
ಮುದದಿ ಮಾಡಿಸದಿಪ್ಪ ಕಾರ್ಯವೆನಗೆ
ಒದಗಲು ಪೂರ್ವೋಕ್ತವಾದ ಪ್ರಮಾಣಗಳಿಗೆ
ಅಧಿಕಾರ ಸಿದ್ಧಾಂತ ಬರುವದೆಂತೋ
ಉದರಗೋಸುಗವಾಗಿ ಮಾಡಿದವನಲ್ಲ
ಉದಯಾಸ್ತಮಾನ ಎನ್ನ ಬಳಲಿಪಾದು
ಇದು ಧರ್ಮವಲ್ಲ ನಿನಗೆ ಕರವ ಮುಗಿದು ನಮಿಪೆ
ಪದಕೆ ಬಿದ್ದವನ ಕೂಡ ಛಲವ್ಯಾತಕೇ
ಬದಿಯಲ್ಲಿ ಇಪ್ಪ ಗುರುವಿಜಯವಿಠ್ಠಲರೇಯಾ 
ಸದ ಕಾಲದಲಿ ನೀನೇ ಗತಿ ಎಂದು ಇಪ್ಪೆ ನೋಡಾ ॥ 3 ॥

 ಅಟ್ಟತಾಳ 

ಬಲವಂತವಾಗಿದ್ದ ಪೂರ್ವದ ಕರ್ಮವು
ತಲೆಬಾಗಿ ಉಣಬೇಕು ಉಣದಿದ್ದರೆ ಬಿಡದು
ಜಲಜನಾಭನೆ ನಿನ್ನ ಸಂಕಲ್ಪ ಇನಿತೆಂದು
ತಿಳಿದು ಈ ದೇಹದ ಅಭಿಮಾನವಿದ್ದರು
ತಲೆದೂಗಿ ಸುಮ್ಮನೆ ಇರಲಾಗಿ ಎನ್ನಿಂದ
ಒಲ್ಲೆನೆಂದರೆ ಬಿಡದು ಎಲ್ಲಿ ಪೊಕ್ಕರನ್ನ
ನಳಿನಾಕ್ಷ ನೀನೆವೆ ಘನ ಕರುಣವ ಮಾಡಿ
ವಿಲಯಗೈಸುವ ಉಪಾಯಗಳಿಂದಲಿ
ನೆಲೆಯಾಗಿ ನಿಂತಿದ್ದ ಪಾಪರಾಶಿಗಳನ್ನು
ಸಲೆ ಇಂದಿನ ದಿನಕ್ಕೆ ಸರಿ ಹೋಯಿತು ಎಂದು
ಕುಲ ಪಾವನ ನೀನೆ ಪೇಳಿದ ಮಾತಿಗೆ
ಹಲವು ಬಗೆಯಿಂದ ಇನ್ನು ಬಳಲಿಪದ್ಯಾತಕ್ಕೆ
ಮಲತ ಮಲ್ಲರ ಗಂಡ ಗುರುವಿಜಯವಿಠ್ಠಲರೇಯ 
ಖಳದರ್ಪ ಭಂಜನ ಕೃಪೆಯಿಂದ ನೋಡೋದು ॥ 4 ॥

 ಆದಿತಾಳ 

ಅನುಭವದಿಂದ ಇದು ತೀರಿಪೆನೆಂದೆನೆ
ವನಜ ಭವ ಕಲ್ಪಕ್ಕೆ ಎನ್ನಿಂದಾಹದಲ್ಲ
ಸನಕಾದಿ ಮುನಿವಂದ್ಯ ನೀನೇವೆ ದಯದಿಂದ
ಋಣವನ್ನು ತೀರಿಪುದು ಆಲಸ್ಯ ಮಾಡದಲೆ
ತೃಣದಿಂದ ಸಾಸಿರ ಹಣವನ್ನು ತೀರಿದಂತೆ
ಶಣಿಸಲಿ ಬೇಡ ಇನ್ನು ಅಪರಾಧ ಮೊನೆ ಮಾಡಿ
ಕ್ಷಣ ಕ್ಷಣಕೆ ಇದು ಬೆಳಿಸುವದುಚಿತವೆ
ಮುನಿ ಮನಮಂದಿರ ಗುರುವಿಜಯವಿಠ್ಠಲರೇಯ 
ನಿನ್ನವನೆಂದರೆ ಎನಗಾವ ದೋಷ ಉಂಟು ॥ 5 ॥

 ಜತೆ 

ಅಹಿತ ಮಾಡುವನಲ್ಲ ಭಕತರ ಸಮೂಹಕ್ಕೆ
ಲೋಹಿತಾಕ್ಷ ಗುರುವಿಜಯವಿಠ್ಠಲರೇಯ ॥
*********

ಬುಧವಾರದ ಸುಳಾದಿ
ಧ್ರುವತಾಳ

ಇಷ್ಟು ನಿರ್ದಯವ್ಯಾಕೊ ಎಲೆ ಎಲೆ ಆಪ್ತನಾದಕೃಷ್ಣ ನಿನಗೆ ನಾನು ದೂರಾದವನೇಘಟ್ಟಿ ಮನಸಿನವ ನೀನಲ್ಲ ಎಂದಿಗೂ ಎನ್ನ ಅ-ದೃಷ್ಟ ಲಕ್ಷಣವೆಂತೊ ತಿಳಿಯದಯ್ಯಾಸೃಷ್ಟಿಯೊಳಗೆ ಭಕುತ ವತ್ಸಲನೆಂಬೊಶ್ರೇಷ್ಠವಾದ ಬಿರಿದು ಇಲ್ಲವೇನೋಶಿಷ್ಟ ಜನರ ಸಂಗ ವರ್ಜಿತನಾಗಿ ನಿನ್ನಮುಟ್ಟಿ ಭಜಿಸದಲಿಪ್ಪ ಹೀನನೆಂದೂಬಿಟ್ಟು ನೋಡಿದರೆ ಮತ್ತಿಷ್ಟು ಅಧಿಕವಾದದುಷ್ಟ ನಡತಿಯಿಂದ ಬಂಧನಾಹಾಪ್ರೇಷ್ಟ ಯೋಗ್ಯವಾದ ಕಾಲವ ನಿರೀಕ್ಷಿಸೆಎಷ್ಟು ಕಲ್ಪಗಳಿಗೆ ಭವದಲಿಂದನಿಷ್ಟವಾಗುವನೇನೊ ಅಭೀಷ್ಟವೈದುವನೆಂತುದೃಷ್ಟಿಲಿ ನೋಡಿದರೆ ಅಜ ಭವಾದ್ಯರುಕಷ್ಟವೈದುವರು ನಿಜಸುಖವಿಲ್ಲದಲೆವಿಷ್ಣು ನಿನ್ನಯ ಮಹಿಮೆ ಇನಿತು ಇರಲೂಎಷ್ಟರವರಯ್ಯಾ ಮಿಕ್ಕಾದ ಭಕುತರೆಲ್ಲತುಷ್ಟನಾಗಿ ನಿನಗೆ ನೀನೇ ಒಲಿದುದುಷ್ಟವಾದ ಕರ್ಮ ನೂಕಿ ಕಡಿಗೆ ಮಾಡಿಪುಷ್ಟಗೈಸು ಜ್ಞಾನಾನಂದದಿಂದತಟ್ಟಲೀಸದೆ ಕಲಿ ಬಾಧೆ ಎಂದೆಂದಿಗೆಹೃಷ್ಟನಾಗು ಎನ್ನ ಸಾಧನಕ್ಕೆದಿಟ್ಟ ಮೂರುತಿ ಗುರು ವಿಜಯ ವಿಠ್ಠಲ ರೇಯಾ ಪೊಟ್ಟಿಯೊಳಗೆ ಜಗವಿಟ್ಟು ಸಲಹುವ ದೇವಾ 1


ಮಟ್ಟತಾಳ

ಕಾಳಿ ಸರ್ಪನು ನಿನ್ನ ಕಚ್ಚಿ ಬಿಗಿಯೆ ಅವನಕೀಳು ನಡತೆಯನ್ನ ನೋಡದೆ ಕರುಣದಲಿಮೇಲಾನುಗ್ರಹ ಮಾಡಿದಿ ಮುದದಿಂದಫಾಲಲೋಚನ ಸುರಪ ಗುರು ಸತಿ ಭೃಗು ಭೀಷ್ಮಶೀಲ ಭಕುತರೆಲ್ಲ ಕಲಿ ಕಲ್ಮಷದಿಂದಕಾಲನಾಮಕ ನಿನ್ನ ಬಂಧಕ ಶಕುತಿಯಲಿವ್ಯಾಳೆ ವ್ಯಾಳೆಗೆ ಅಪರಾಧವೆ ಮಾಡಿದರೂಪಾಲಿಸಿದೆ ಹೊರ್ತು ಪ್ರದ್ವೇಷವ ಮಾಡಿದಿಯಾಜಾಲ ಅಘವ ಮಾಡಿ ದೇಹಿ ದೇಹಿ ಎನಲುತಾಳುವರಲ್ಲದಲೆ ಛಿದ್ರಗಳೆಣಿಸುವರೆಮೂಲ ನೀನೆ ಸುಖ ದುಃಖಾ  ನುಭವಕ್ಕೆಮೂರ್ಲೋಕಾಧಿಪ ಗುರು ವಿಜಯ ವಿಠ್ಠಲ ನಿನ್ನಆಳುಗಳಗೊಬ್ಬ ಅಧಮನು ನಾನೇವೆ 2

ತ್ರಿವಿಡಿತಾಳ

ವಿದೇಶದವನಾಗಿ ಪಥದೊಳು ಒಂದು ಕ್ಷಣಆದರ ಪರಸ್ಪರವಾಗಿ ಭಿಡಿಯಾಹೃದಯದೊಳು ಮರಿಯದೆ ಸ್ಮರಿಸುವನೊಮ್ಮಿಗನ್ನಪದುಮನಾಭನೆ ನಿನ್ನ ನಿರ್ಭಿಡೆಯತನಕೆಆದಿ ಅಂತ್ಯವಿಲ್ಲ ಆಶ್ಚರ್ಯ ತೋರುತಿದೆಉದದಿ ಪೋಲುವ ದಯ ಪೂರ್ಣನೆಂದುಸದಮಲವಾಗಿ ನಿನ್ನ ಧೇನಿಸಬೇಕೆಂತೊವಿದೂರನೆನಿಪ ದೋಷರಾಶಿಗಳಿಗೆಪದೋಪದಿಗೆ ಗುರುದ್ರೋಹ ಮಾಡಿದಿ ಎಂದು ಅ-ವಧಿ ಇಲ್ಲದಲೆ ಹಂಗಿಸುವದುಮೋದವಾಗಿ ನಿನಗೆ ತೋರುತಲಿದೆ ನಿನ್ನಚದುರತನಕೆ ನಾನು ಎದುರೇ ನೋಡಾಪದುಮ ಸಂಭವ ಮುಖ್ಯ ದಿವಿಜರು ಸ್ವತಂತ್ರದಿಪದವಾಚಲಣದಲ್ಲಿ ಸಮರ್ಥರೇಹೃದಯದೊಳಗೆ ವಾಸವಾಗಿದ್ದ ಹರಿ ನಿನ್ನಚೋದ್ಯ ನಡತೆ ನಡವದಾವ ಕಾಲಇದು ಎನ್ನ ಮಾತಲ್ಲ `ಎಥಾ ದಾರುಮಯಿ’ಶುದ್ಧ ಭಾಗವತೋಕ್ತಿ ಪ್ರಮಾಣದಂತೆಅದುಭೂತ ಬಿಂಬ ನೀನು ಪ್ರತಿಬಿಂಬ ಜೀವ ನಿನಗೆ ನೀಮುದದಿಂದ ಮಾಡಿಸದಿಪ್ಪ ಕಾರ್ಯ ಎನಗೆಒದಗಲು ಪೂರ್ವೋಕ್ತವಾದ ಪ್ರಮಾಣಗಳಿಗೆಅಧಿಕಾರ ಸಿದ್ಧಾಂತ ಬರುವದೆಂತೋಉದರಗೋಸುಗವಾಗಿ ಮಾಡಿದವನಲ್ಲಉದಯಾಸ್ತಮಾನ ಎನ್ನ ಬಳಲಿಪುದುಇದು ಧರ್ಮವಲ್ಲ ನಿನಗೆ ಕರವ ಮುಗಿದು ನಮಿಪೆಪದಕೆ ಬಿದ್ದವನ ಕೂಡ ಛಲವ್ಯಾತಕೊಬದಿಯಲ್ಲಿ ಇಪ್ಪ ಗುರು ವಿಜಯ ವಿಠ್ಠಲರೇಯಾ ಸದಾ ಕಾಲದಲಿ ನೀನೆ ಗತಿ ಎಂದು ಇಪ್ಪೆ ನೋಡಾ 3

ಅಟ್ಟತಾಳ

ಬಲವಂತವಾಗಿದ್ದ ಪೂರ್ವದ ಕರ್ಮವುತಲೆಬಾಗಿ ಉಣಬೇಕು ಉಣದಿದ್ದರೆ ಬಿಡದುಜಲಜನಾಭನೆ ನಿನ್ನ ಸಂಕಲ್ಪ ಇನಿತೆಂದುತಿಳಿದು ಈ ದೇಹದ ಅಭಿಮಾನವಿದ್ದರುತಲೆದೂಗಿ ಸುಮ್ಮನೆ ಇರಲಾಗಿ ಎನ್ನಿಂದಒಲ್ಲೆನೆಂದರೆ ಬಿಡದು ಎಲ್ಲಿ ಪೊಕ್ಕರನ್ನನಳಿನಾಕ್ಷ ನೀನೆವೆ ಘನ ಕರುಣವ ಮಾಡಿವಿಲಯಗೈಸುವ ಉಪಾಯಗಳಿಂದಲಿನೆಲೆಯಾಗಿ ನಿಂತಿದ್ದು ಪಾಪರಾಶಿಗಳನ್ನುಸಲೆ ಇಂದಿನ ದಿನಕ್ಕೆ ಸರಿ ಹೋಯಿತುಯೆಂದುಕುಲವ ಪಾವನ ನೀನೆ ಪೇಳಿದ ಮಾತಿಗೆಹಲವು ಬಗೆಯಿಂದ ಇನ್ನು ಬಳಲಿಪದಕ್ಕೆಮಲತ ಮಲ್ಲರ ಗಂಡ ಗುರು ವಿಜಯ ವಿಠ್ಠಲರೇಯ ಖಳದರ್ಪ ಭಂಜನ ಕೃಪೆಯಿಂದ ನೋಡೋದು 4

ಆದಿತಾಳ

ಅನುಭವದಿಂದ ಇದು ತೀರಿಪೆನೆಂದೆನೆವನಜ ಭವ ಕಲ್ಪಕ್ಕೆ ಎನ್ನಿಂದಾಹದಲ್ಲಸನಕಾದಿ ಮುನಿವಂದ್ಯ ನೀನೆವೆ ದಯದಿಂದಋಣವನ್ನು ತೀರಿಪುದು ಆಲಸ್ಯ ಮಾಡದಲೆತೃಣದಿಂದ ಸಾಸಿರ ಹಣವನ್ನು ತೀರಿದಂತೆಶಣಸಲಿ ಬೇಡ ಇನ್ನು ಅಪರಾಧ ಮೊನೆ ಮಾಡಿಕ್ಷಣ ಕ್ಷಣಕೆ ಇದು ಬೆಳ್ಳಿಸುವುದುಚಿತವೆಮುನಿ ಮನಮಂದಿರ ಗುರು ವಿಜಯ ವಿಠ್ಠಲರೇಯ ನಿನ್ನವನೆಂದರೆ ಎನಗಾವ ದೋಷ ಉಂಟು 5

ಜತೆ

ಅಹಿತ ಮಾಡುವನಲ್ಲ ಭಕತರ ಸಮೂಹಕ್ಕೆಲೋಹಿತಾಕ್ಷ ಗುರು ವಿಜಯ ವಿಠ್ಠಲರೇಯ || 
********



ಬುಧವಾರದ ಸುಳಾದಿ