Showing posts with label ಭವ ಶಿತಿ ಕಂಠ ನಿನ್ನ ಪದ jagannatha vittala. Show all posts
Showing posts with label ಭವ ಶಿತಿ ಕಂಠ ನಿನ್ನ ಪದ jagannatha vittala. Show all posts

Saturday, 14 December 2019

ಭವ ಶಿತಿ ಕಂಠ ನಿನ್ನ ಪದ ankita jagannatha vittala

ಭವ ಶಿತಿ ಕಂಠ ನಿನ್ನ ಪದ
ತಾಮರಸಯುಗ್ಮಗಳಿಗಾನಮಿಸುವೆ || ಪ. ||

ಕಾಮ ಹರ ಕೈಲಾಸ ಹೇಮಗಿರಿಯಾವಾಸ
ರಾಮ ನಾಮನ ಭಜಿಪ ಉಮೆಯರಸ ಶಂಭೋ || ಅ. ಪ. ||

ಮೃತ್ಯುಂಜಯ ಮೃಗಾಂಕ ಕೃತ್ತಿವಾಸ ಕೃಪಾಳೊ
ವಿತ್ತ ಪತಿ  ಸಖ ವಿನಾಯಕರ ಜನಕ
ಭೃತ್ಯ ವರ್ಗಕೆ ಬಾಹಪಮೃತ್ಯು ಕಳೆದು ಸಂ
ಪತ್ತು ಪಾಲಿಸುವುದು ನಿವೃತ್ತಿ ಸಂಗಮಪ || 1 ||

ಗೋಪತಿ ಧ್ವಜ ಘೋರ ಪಾಪ ಸಂಹರಣ ಹರಿ
ತೋಪಲೋಪಮ ಕಂಠ ಚಾಪಪಾಣೀ
ಶ್ರೀ ಪತಿಯ ಶ್ರೀನಾಭಿ ಕೂಪ ಸಂಭವ ತನಯ
ನೀ ಪಾಲಿಸೆಮ್ಮನು ವಿರೂಪಾಕ್ಷ ಗುರುವೆ || 2 ||

ಭಸಿತ ಭೂಷಿತಡಮರು ತಿಸುಳಗೈಯನೆ ಶಂಭೋ
ಕಿಸಲಯೋಪಮ ನವಿರ ಶಶಿಭೂಷಣ
ಅಸುರಾರಿ ಶ್ರೀ ಜಗನ್ನಾಥ ವಿಠಲನ ಪದ
ಬಿಸಜ ಧ್ಯಾನವನೀಯೊ ಹಸನಾಗಿ ಕಾಯೊ || 3 ||


********