ಕಾಖಂಡಕಿ ಶ್ರೀ ಕೃಷ್ಣದಾಸರು
ಹಿತ ನೋಡೀ ಮಾಡಿ ಸುಜನರ | ಪಥವನೆಕೂಡಿ ಪ
ಗುರುವಿಗೆ ಬಾಗಿ ಶರಣವ ಹೋಗಿ | ತರಳತೆ ನೀಗಿ ಅರಹುತರಾಗಿ 1
ಭ್ರಾಂತರಕೂಡಿ ಮತಿಗಳ ಬ್ಯಾಡೀ | ಸಂತರೊಳಾಡಿ ಅನಂತನ ಪಾಡಿ 2
ಸಂಧಿಸಿ ತಂದ ಸುಕೃತಗಳಿಂದ | ಹೊಂದುವವೆಂದೇ ನರದೇಹ ಮುಂದೆ 3
ವಿವೇಕದಿಂದಾ ವಿಡಿರಿದೆ ಛಂದಾ | ಅವನಿಲಿ ಬಂದಾ ಜನುಮಕ ಛಂದಾ 4
ಗುರುಮಹಿಪತಿಯಾ ಚರಣದ್ವಿತಿಯಾ | ವರಿಸಿ ಮುಕುತಿಯಾ ಪಡೆವದು ಗತಿಯಾಜ್ಞ 5
***