Wednesday, 1 September 2021

ಹಿತ ನೋಡೀ ಮಾಡಿ ಸುಜನರ ಪಥವನೆಕೂಡಿ ankita gurumahipati

 ಕಾಖಂಡಕಿ ಶ್ರೀ ಕೃಷ್ಣದಾಸರು

ಹಿತ ನೋಡೀ ಮಾಡಿ ಸುಜನರ | ಪಥವನೆಕೂಡಿ ಪ 


ಗುರುವಿಗೆ ಬಾಗಿ ಶರಣವ ಹೋಗಿ | ತರಳತೆ ನೀಗಿ ಅರಹುತರಾಗಿ 1 

ಭ್ರಾಂತರಕೂಡಿ ಮತಿಗಳ ಬ್ಯಾಡೀ | ಸಂತರೊಳಾಡಿ ಅನಂತನ ಪಾಡಿ 2 

ಸಂಧಿಸಿ ತಂದ ಸುಕೃತಗಳಿಂದ | ಹೊಂದುವವೆಂದೇ ನರದೇಹ ಮುಂದೆ 3 

ವಿವೇಕದಿಂದಾ ವಿಡಿರಿದೆ ಛಂದಾ | ಅವನಿಲಿ ಬಂದಾ ಜನುಮಕ ಛಂದಾ 4 

ಗುರುಮಹಿಪತಿಯಾ ಚರಣದ್ವಿತಿಯಾ | ವರಿಸಿ ಮುಕುತಿಯಾ ಪಡೆವದು ಗತಿಯಾಜ್ಞ 5

***


No comments:

Post a Comment