RSS song
ಕಳೆದಿಹುದು ಕಾರಿರುಳು ಕರಗಿಹುದು ಕಾರ್ಮುಗಿಲು
ಇಂದು ಹಿಂದು ಭಾಸ್ಕರನ ಉದಯಕಾಲ
ನಾಡ ಪರಿವರ್ತನೆಯ ಪರ್ವಕಾಲ ||ಪ||
ಉಷೆಯುದಿಸಿ ಬಂದಿಹುಳು ನಿಶೆಯುಸಿರ ನೀಗಿಹಳು
ಅರುಣ ಕಿರಣದ ಪ್ರಭೆಗೆ ಸ್ವಾಗತವ ಕೋರಿಹಳ್ಯು
ಮೈಮರೆತು ಮಲಗಿದ್ದ ನಾಡು ಮೇಲೆದ್ದಿಹುದು
ದಾಸ್ಯದವಶೇಷವದು ಧರೆಗುರುಳಿ ಬಿದ್ದಿಹುದು ||೧||
ಪುಟಪುಟದ ಇತಿಹಾಸ ಸಟೆಯ ಧಿಕ್ಕರಿಸಿಹುದು
ದಿಟದ ಧೀಮಂತಿಕೆಯ ದಿಟ್ಟತನ ಧರಿಸಿಹುದು
ದ್ರೋಹಿಗಳು ಒಡ್ಡಿರುವ ಭೀಕರ ಸವಾಲುಗಳ
ಕಟಿಬದ್ಧ ಯುವಜನತೆ ಛಲದಿ ಸ್ವೀಕರಿಸಿಹುದು ||೨||
ಎಚ್ಚೆತ್ತ ಕೇಸರಿಗೆ ವನದೊಳೆದುರಾರಿಹರು?
ತುಂಬಿ ಮೊರೆವಂಬುಧಿಯ ತಡೆವ ಜನರಾರಿಹರು?
ಬೆಂಬಲಕೆ ಇಹರೆಮಗೆ ಭಾರತದ ಜನಕೋಟಿ
ಮುನ್ನುಗ್ಗಿ ಸಾಗುವೆವು ವಿಘ್ನವೆಲ್ಲವ ದಾಟಿ ||೩||
ಮುರಿದಿರಲು ಸಂಧಾನ ಕರೆದಿರಲು ಸಂಗ್ರಾಮ
ಎದ್ದು ನಿಂತಿಹವಿಂದು ಗಿರಿನಗರ ವನ ಗ್ರಾಮ
ರಾಮರಾಜ್ಯದ ರಚನೆ ಗೈದ ಶುಭ ಹಾರೈಕೆ
ಖೂಳ ರಾವಣಪಡೆಗೆ ಕೊಟ್ಟ ಕೊನೆಯೆಚ್ಚರಿಕೆ ||೪||
***
kaLedihudu kAriruLu karagihudu kArmugilu
iMdu hiMdu BAskarana udayakAla
nADa parivartaneya parvakAla ||pa||
uSheyudisi baMdihuLu niSeyusira nIgihaLu
aruNa kiraNada praBege svAgatava kOrihaLyu
maimaretu malagidda nADu mEleddihudu
dAsyadavaSEShavadu dhareguruLi biddihudu ||1||
puTapuTada itihaasa saTeya dhikkarisihudu
diTada dhImaMtikeya diTTatana dharisihudu
drOhigaLu oDDiruva BIkara savAlugaLa
kaTibaddha yuvajanate Caladi svIkarisihudu ||2||
eccetta kEsarige vanadoLedurAriharu?
tuMbi morevaMbudhiya taDeva janarAriharu?
beMbalake iharemage BAratada janakOTi
munnuggi sAguvevu viGnavellava dATi ||3||
muridiralu saMdhAna karediralu saMgrAma
eddu niMtihaviMdu girinagara vana grAma
raamarAjyada racane gaida SuBa hAraike
KULa rAvaNapaDege koTTa koneyeccarike ||4||
***
ಕಳೆದಿಹುದು ಕಾರಿರುಳು ಕರಗಿಹುದು ಕಾರ್ಮುಗಿಲು |
ಇಂದು ಹಿಂದು ಭಾಸ್ಕರನ ಉದಯಕಾಲ |
ನಾಡ ಪರಿವರ್ತನೆಯ ಪರ್ವಕಾಲ || || ಪ ||
ಉಷೆಯುದಿಸಿ ಬಂದಿಹಳು, ನಿಶೆಯುಸಿರ ನೀಗಿಹಳು
ಅರುಣ ಕಿರಣದ ಪ್ರಭೆಗೆ ಸ್ವಾಗತವ ಕೋರಹಳು
ಮೈಮರೆತು ಮಲಗಿದ್ದ ನಾಡು ಮೇಲೆದ್ದಿಹುದು
ದಾಸ್ಯದವಶೇಷವದು ಧರೆಗುರುಳಿ ಬಿದ್ದಿಹುದು || 1 ||
ಪುಟಪುಟದ ಇತಿಹಾಸ ಸಟೆಯ ಧಿಕ್ಕರಿಸಿಹುದು
ದಿಟದ ಧೀಮಂತಿಕೆಯ ದಿಟ್ಟತನ ಧರಿಸಿಹುದು
ದ್ರೋಹಿಗಳು ಒಡ್ಡಿರುವ ಭೀಕರ ಸವಾಲುಗಳ
ಕಟಿಬದ್ಧ ಯುವಜನತೆ ಛಲದಿ ಸ್ವೀಕರಿಸಿಹುದು || 2 ||
ಎಚ್ಚೆತ್ತ ಕೇಸರಿಗೆ ವನದೊಳೆದುರಾರಿಹರು ?
ತುಂಬಿ ಮೊರೆವಂಬುಧಿಯ ತಡೆವ ಜನರಾರಿಹರು ?
ಬೆಂಬಲಕೆ ಇಹರೆಮಗೆ ಭಾರತದ ಜನಕೋಟಿ
ಮುನ್ನುಗ್ಗಿ ಸಾಗುವೆವು ವಿಘ್ನವೆಲ್ಲವ ದಾಟಿ || 3 ||
ಮುರಿದಿರಲು ಸಂಧಾನ, ಕರೆದಿರಲು ಸಂಗ್ರಾಮ
ಎದ್ದು ನಿಂತಿಹವಿಂದು ಗಿರಿನಗರ ವನ ಗ್ರಾಮ
ರಾಮರಾಜ್ಯದ ರಚನೆ ಗೈವ ಶುಭ ಹಾರೈಕೆ
ಖೂಳ ರಾವಣಪಡೆಗೆ ಕೊಟ್ಟ ಕೊನೆಯೆಚ್ಚರಿಕೆ || 4 |
***