Showing posts with label ಕಣ್ಣೆತ್ತಿ ನೋಡಲುಬೇಡ ಅವಳಸಣ್ಣ purandara vittala. Show all posts
Showing posts with label ಕಣ್ಣೆತ್ತಿ ನೋಡಲುಬೇಡ ಅವಳಸಣ್ಣ purandara vittala. Show all posts

Wednesday, 4 December 2019

ಕಣ್ಣೆತ್ತಿ ನೋಡಲುಬೇಡ ಅವಳಸಣ್ಣ purandara vittala

ಪುರಂದರದಾಸರು
ರಾಗ ದರ್ಬಾರಿ ಆದಿತಾಳ

ಕಣ್ಣೆತ್ತಿ ನೋಡಲು ಬೇಡ ||ಪ||
ಅವಳ , ಸಣ್ಣ ಬೈತಲೆ ನೋಡಿ ಮರುಳಾಗಬೇಡ ||ಅ||

ಕಣ್ಣಿಟ್ಟು ಕೀಚಕ ಕೆಟ್ಟ , ಪರ-
ಹೆಣ್ಣಿಗಾಗಿ ರಾವಣ ತಲೆಕೊಟ್ಟ
ಇನ್ನೆಷ್ಟು ಹೇಳಲಾ ನಷ್ಟ
ಹೆಣ್ಣ ಮೋಹಿಸಿದರೆ ಬರುವೋದು ಕಷ್ಟ ||

ದೂಷಿಸದಿರು ದುರುಳ ಕಣ್ಣ , ಅವಳ
ಥೋರ ಕಕ್ಕಸಕುಚ ನಡು ಬಹುಸಣ್ಣ
ಸೀರೆಯ ಬಿಗಿದುಟ್ಟ ಹೆಣ್ಣ , ಅವಳ
ಓರೆನೋಟ ನೋಡಿ ಹಾರಬೇಡಣ್ಣ ||

ಹಸಿವು ಇಲ್ಲದ ಸವಿಯೂಟ , ತನ್ನ
ವಶಕ್ಕೆ ಬಾರದ ಪರಸ್ತ್ರೀಯರ ಕೂಟ
ದೇಶದೊಳಪಕೀರ್ತಿ ಮಾಟ , ವಸು-
ಧೇಶ ಪುರಂದರವಿಠಲಗಲ್ಲದ ನೋಟ ||
***

pallavi

kaNNetti nODalu bEDa

anupallavi

avaLa saNNa baitale nODi maruLADa bEDa

caraNam 1

kaNNiTTu kIcaka keTTa para heNNigAgi rAvaNa tale koTTa
inneSTu hELalu naSTa para heNNa mOhisidare baruvOdu kaSTa

caraNam 2

dUSisadiru duruLa kaNNa avaLa tOra kakkasa kuca naDubahu saNNa
sIreya bigiduTTa heNNa avaLa Ore nODava nODi hAra bEDaNNa

caraNam 3

hasivu illada saviyUTa tanna vashake bArada para strIyara kUTa
dEsha dEshadoLalpa kIrti mATa vsudhEsha purandara viTTalagallada nODa
***

ಕಣ್ಣೆತ್ತಿ ನೋಡಲುಬೇಡ 
ಅವಳಸಣ್ಣ ಜೈತಲೆ ಕಂಡು ಮರುಳಾಗಬೇಡ ಪ.

ಕಣ್ಣಿಟ್ಟ ಕೀಚಕ ಕೆಟ್ಟ -ಪರಹೆಣ್ಣಿಗಾಗಿ ರಾವಣ ತಲೆಕೊಟ್ಟಏನು ಮಾಡಿದಳಣ್ಣ ನಷ್ಟ -ಪರಹೆಣ್ಣನು ಮೋಹಿಸಿದವ ಬಲು ಭ್ರಷ್ಠ 1

ದೂರದಲ್ಲಿಯ ಸುಖದಣ್ಣ - ಅವಳಚಾರು ಕಂಚುಕದೊಳಗಿನ ಕುಚವಣ್ಣಸೀರೆಯ ಬಿಗಿದುಟ್ಟ ಹೆಣ್ಣ - ಅವಳಓರೆನೋಟ ನೋಡಿ ಹಾರಬೇಡಣ್ಣ 2

ಹಸಿವು ಇಲ್ಲರ ಸವಿಯೂಟ - ತನ್ನವಶಕೆ ಬಾರದ ಪರಹಸ್ವಿನ ಕೂಟದೆಸೆದೆಸೆಗಪಕೀರ್ತಿಯಾಟ - ನಮ್ಮವಸುಧೀಶ ಪುರಂದರವಿಠಲನೊಳ್ನೋಟ 3
********