Showing posts with label ಗುಣಿಸುವೆ ಗಣನಾಥಾ ಗುಣಗಣ tandevaradagopala vittala. Show all posts
Showing posts with label ಗುಣಿಸುವೆ ಗಣನಾಥಾ ಗುಣಗಣ tandevaradagopala vittala. Show all posts

Thursday, 5 August 2021

ಗುಣಿಸುವೆ ಗಣನಾಥಾ ಗುಣಗಣ ankita tandevaradagopala vittala

 ..


kruti: tandevaradagopala vittala (ಪ್ರಹ್ಲಾದಗೌಡರು)

ಗುಣಿಸುವೆ ಗಣನಾಥಾ ಪ

ಗುಣಗಣ ಚರಿತನೆ ಗುಣದೊಳು ಮೊದಲಿಗನೆಂದು ಸಾರಿ ಸಾರಿ ನಿನ್ನ ಅ.ಪ.

ಎಂದಿಗು ನಿನ್ನ ಪದದ್ವಂದ್ವ ನಂಬಿದ ಕಂದನ ಮಾತ ಲಾಲಿಸೊಇಂದುವರಿಯ ಎನ್ನ ಮಂದಿರದೊಳು ಬಂದು ತಂದೆ ಕರುಣದಿ ಪಾಲಿಸೊ 1
ಮಾರ ತಾಪಕೆ ಶಿಲುಕಿ ಮಾರಿ ಮೋರೆಯ ನೋಡಿ ಮರುಳಾದೆನೊಮಾರನನುಜನೆ ಎನ್ನ ಗಾರುಮಾಡದೆ ಪೊರೆಯೊ ನಿನ್ನ ಪಾದಕೆರಗಿದೆನಯ್ಯ 2
ಉಜ್ಜಿ ಕೂಪವ ನೋಡಿ ಮೆಚ್ಚಿ ಬಲುಪರಿ ಹುಚ್ಚನಾದೆನೊ ದೇವಾ ಇಚ್ಛೆ ಪೂರೈಸೊ ನಮ್ಮಸ್ವಚ್ಛ ತಂದೆವರದಗೋಪಾಲವಿಠಲನರ್ಚಕ 3
***