Showing posts with label ವಿಜಯೀಂದ್ರ ಮುನೀಂದ್ರ gurupurandara vittala vijayeendra teertha stutih. Show all posts
Showing posts with label ವಿಜಯೀಂದ್ರ ಮುನೀಂದ್ರ gurupurandara vittala vijayeendra teertha stutih. Show all posts

Friday, 27 December 2019

ವಿಜಯೀಂದ್ರ ಮುನೀಂದ್ರ guruprandara vittala vijayeendra teertha stutih

ಪುರಂದರ ದಾಸರ ಮಕ್ಕಳ ಅಂಕಿತಗಳು – ವರದ ಪುರಂದರ ವಿಠಲ (ವರದಪ್ಪ), ಗುರುಪುರಂದರ (ಗುರುರಾಯ), ಅಭಿನವಪುರಂದರ (ಅಭಿನವಪ್ಪ), ಗುರುಮಧ್ವಪತಿವಿಠಲ (ಮಧ್ವಪತಿ). 

ವಿಜಯೀ೦ದ್ರ ಮುನೀಂದ್ರರೆಂಬಾಶ್ಚರ್ಯದ ।
ಗಜೇಂದ್ರ ಬಂದಿದೆ ಸುಜನರು ನೋಡ ಬನ್ನಿ ।। ಪ ।।

ಕಲುಷವೆಂಬ ಪಂಕವ ನೀಡಾಡಿ । ವಿ ।
ಮಲ ಹರಿ ಪದ ತೀರ್ಥದ ಜಲಪಾನ ಮಾಡಿ ।
ಸಲೆ ಮಧ್ವಮತಾಂಬುಧಿಯೊಳು ।
ನಲಿ ನಲಿದು ಕುಣಿದಾಡುತಲಿ ।। 1 ।।

ರಮೇಶನ ಧ್ಯಾನವೆಂಬ ಮದವೇರಿ ।
ಮಮತೆಯೆಂಬ ಕದಳಿ ಕಿತ್ತೀಡಾಡಿ ।
ವಿಮಲ ಶ್ರೀಹರಿ ಪದ ರಜ ಶಿರದಿ ಧರಿಸಿ ।
ಕುಮತಗಳೆಂಬ ತರುಗಳ ಮುರಿಯುತಲಿ ।। 2 ।।

ಗುರು ಸುರೇಂದ್ರತೀರ್ಥರೆಂಬ ।
ವರ ಮಾವಟಿಗನ ಆಜ್ಞೆಯೊಳಿದ್ದು ।
ಗುರು ಪುರಂದರವಿಠಲ ಭಕ್ತಿಯೆಂಬ ।
ಸರಪಣಿಯೊಳು ನಲಿ ನಲಿದಾಡುತಲಿ ।। 3 ।।
********