Showing posts with label ಶರಣು ಮಂಜುನಾಥಾ ಪಾಲಿಸು ಶರಣ ಜನರ ಪ್ರೀತಾ govinda. Show all posts
Showing posts with label ಶರಣು ಮಂಜುನಾಥಾ ಪಾಲಿಸು ಶರಣ ಜನರ ಪ್ರೀತಾ govinda. Show all posts

Sunday, 17 November 2019

ಶರಣು ಮಂಜುನಾಥಾ ಪಾಲಿಸು ಶರಣ ಜನರ ಪ್ರೀತಾ ankita govinda

by ಗೋವಿಂದದಾಸ
ಶರಣು ಮಂಜುನಾಥಾ | ಪಾಲಿಸು || ಶರಣ ಜನರ ಪ್ರೀತಾ ||ಮರೆಯದೆ ನಿನ್ನಯ ಚರಣವ ನಂಬಿದ |ತರಳನ ಮೇಲ್ ದಯವಿರಿಸೈ ಜಯ ಜಯ 1

ಧರ್ಮಾಧರ್ಮವನೂ ಶೋಧಿಪ | ಧರ್ಮದೇವ ನೀನು ||ಧರ್ಮ ಸುಕರ್ಮದ ಮರ್ಮವನರಿಯುತಾ ||ಧರ್ಮಸ್ಥಳದಲಿ ನೆಲಸಿದೆ ಜಯ ಜಯ 2

ಕಪ್ಪಕಾಣಿಕೆಗಳನೂ | ದಿನ ದಿನ ತಪ್ಪದೆ ತರಿಸುವನೂ ||ಸರ್ಪಧರನೆ ನಿನ್ನಪ್ಪಣೆಯಿಂದ | ಣ್ಣಪ್ಪನು ನರರನು -ಒಪ್ಪಿಸಿ ಜಯ ಜಯ 3

ದುಷ್ಟ ಜನರು ಬರಿದೇ | ಕೊಡುತಿಹ | ಕಷ್ಟವ ನಿನಗೊರೆದೇ |ಸೃಷ್ಟಿಪಾಲ ಯನ್ನ ರಕ್ಷಿಸಬೇಹುದು |ಕೆಟ್ಟೆನಯ್ಯಾ ನಿಟಿಲಾಕ್ಷನೆ ಜಯ ಜಯ 4

ಚಂದ್ರಧರನೆ ಕಾಯೋ | ಕರುಣಾ-||ನಂದ ವರವನೀಯೋಮಂದರಧರಗೋ|ವಿಂದದಾಸನನಿಂದು |ಚಂದದಿ ಪಾಲಿಸು |ವಂದಿಪೆ ಜಯ ಜಯ 5
*******