Showing posts with label ಅಪರಾಧ ಎನ್ನದಯ್ಯ ಅಪರಿಮಿತವೆ ಸರಿ vasudeva vittala. Show all posts
Showing posts with label ಅಪರಾಧ ಎನ್ನದಯ್ಯ ಅಪರಿಮಿತವೆ ಸರಿ vasudeva vittala. Show all posts

Friday, 27 December 2019

ಅಪರಾಧ ಎನ್ನದಯ್ಯ ಅಪರಿಮಿತವೆ ಸರಿ ankita vasudeva vittala

by ವ್ಯಾಸತತ್ವಜ್ಞರು

ಅಪರಾಧ ಎನ್ನದಯ್ಯ ಅಪರಿಮಿತವೆ ಸರಿ ||ಪ||

ಕೃಪಣವತ್ಸಲ ಕೃಷ್ಣ ಕೃಪೆಯ ಮಾಡುವದಿಲ್ಲವೆ ||ಅ||

ಹುಡುಗರು ಮಾಡುವ ತಪ್ಪಿಗೆ ಜನನಿ ತಾ
ಬಿಡುವಳೆ ಅದರಿಂದ ದಯವ ಮಾಡದಲೆ
ನಡೆವ ಕುದರಿ ತಾನು ಮಲಗಿದಡೆ ಇನ್ನು
ಕಡೆಗೆ ಕಟ್ಟುವರೇನೊ ತಿರಗಿ ನೋಡದಲೆ ||೧||

ಮಾಡುಯೆಂದದರನು ಬಿಟ್ಟರೆ ಅಪರಾಧ
ಬ್ಯಾಡವೆಂದರಾನು ಮಾಡುವುದಪರಾಧ
ಈಡಿಲ್ಲ ನಿನ್ನ ದಯೆಯೆಂತೆಂದು ನಾನಿಂದು
ಮಾಡುವೆ ಬಿನ್ನಪ ನಾಚಿಕಿಲ್ಲದಲೆ ||೨||

ಬೇಡಿಕೊಂಬೆನೊ ವಾಸುದೇವವಿಠಲ ನೀನು
ನೋಡದಿದ್ದರೆ ಭಕ್ತ ಜನರು ತಮ್ಮ
ಬೀಡು ಸೇರಲೀಸರೊ ಕೇಡೇನೋ ಇದಕಿಂತ
ನೋಡು ನೀ ಇದರಿಂದ ಕೃಪಣ ವತ್ಸಲ ಕೃಷ್ಣ ||೩||
*******