Showing posts with label ಪಾಹಿ ವಿನತಾತ್ಮಜ ಪತಗಾಧಿರಾಜಾ karpara narahari. Show all posts
Showing posts with label ಪಾಹಿ ವಿನತಾತ್ಮಜ ಪತಗಾಧಿರಾಜಾ karpara narahari. Show all posts

Monday, 2 August 2021

ಪಾಹಿ ವಿನತಾತ್ಮಜ ಪತಗಾಧಿರಾಜಾ ankita karpara narahari

ಪಾಹಿ ವಿನತಾತ್ಮಜ ಪತಗಾಧಿರಾಜಾ ಪ


ಪಾಹಿಮಾಂ ವೈದೇಹಿರಮಣಗೆ ವಾಹನತ್ವವ

ಪಡೆದ ಗರುಡನೆ ಅ.ಪ


ವಂದಿಸುವೆ ಅರವಿಂದನಾಭನ

ಶ್ಯಂದನೋತ್ತಮನೆನಿಸಿ ಜಗದೊಳು

ಅಂದು ಸುರಕೃತ ಸಿಂಧು ಮಥನದಿ ಮಂದರವ

ತಂದಿಟ್ಟ ಧೀರನೆ 1


ಕಾಳಗದಿ ಕಪಿವೀರರಿಗೆ ಕೃತವ್ಯಾಳ

ಬಂಧವ ಬಿಡಿಸಿದಂಥ

ವಾಲಖಿಲ್ಯರ ವರವ ಪಡೆದ ವಿಶಾಲಮಹಿಮನೆ

ಕಾಲಿಗೆರಗುವೆ 2


ಧರಣಿಯೊಳು ಬಹು ಶರಣು

ಜನರಘ ತರಿದಭೀಷ್ಟಿಯ

ಗರಿವ ಕಾರ್ಪರ ನರಹರಿಯಶುಭಚರಣ

ಪೆಗಲೊಳು ಧರಿಸಿರುವ ಸೌಪರ್ಣಿ ರಮಣನೆ 3

****