..
kruti: tandevaradagopala vittala (ಪ್ರಹ್ಲಾದಗೌಡರು)
ಶ್ರೀ ಜಯತೀರ್ಥರು
ಜಯತು ಜಯತು ಜಯರಾಯಾ ಶುಭ ಜಯತು ಶುಕಪ್ರೀಯಾಕಾಯಯ್ಯ ಕವಿಗೇಯ ಮಹರಾಯಾ ಪ
ಜಗದೀಶ ಸಖನಾಗಿ ಶಸ್ತ್ರಾಸ್ತ್ರವನೆ ಕೈಗೊಂಡುಜಯಶೀಲನೆಂದೆನಿಸಿ ಜಗದೊಳಗೆ ಮೆರೆದೆ ಜಯ ಭೀಮರಾಯನು ಈ ಮೇದಿನೀ ಸ್ಥಳಕ್ಕೆ ಬರಲು ಅಸಮ ಪಶು ಎಂದೆನಿಸಿ ಸೇವಿಸಿದಿ ನಿತ್ಯಾ ಸತ್ಯಾ 1
ಸರ್ವೇಶ ಗುಣ ಮಣಿ ಸರ್ವಜ್ಞರಾಯರು ವಿರಚಿಸಿದ ಗ್ರಂಥಗಳನಿರೇ ಸಜ್ಜನರಿಗೆ ಸುe್ಞÁನವನು ತೋರಿ ಸುe್ಞÁನಿಗಳವಾಗ್ಬಾಣದಿಂದರಿದ್ಯೋ ತರಿದ್ಯೊ 2
ಶಿರಿದೇವಿ ವರಬಲದಿ ಆಗಮಾದ್ರಿಯ ಮಥಿಸಿಸತ್ಸುಖಾ ತೆಗೆದು ಸಾಧುಗಳಿಗಿತ್ತೇಮಳಾಪುರಿನಿಲಯ ಪವನೇಶತಂದೆವರದಗೋಪಾಲವಿಠ್ಠಲನ ದೂತಾ ಖ್ಯಾತಾ ದಾತಾ 3
***
ಜಯತು ಜಯತು ಜಯರಾಯಾ
ಶುಭ ಜಯತು ಶುಕಪ್ರೀಯಾ
ಕಾಯಯ್ಯ ಕವಿಗೇಯ ಮಹರಾಯಾ || PA ||
ಜಗದೀಶ ಸಖನಾಗಿ ಶಸ್ತ್ರಾಸ್ತ್ರವನೆ ಕೈಗೊಂಡು
ಜಯಶೀಲನೆಂದೆನಿಸಿ ಜಗದೊಳಗೆ ಮೆರೆದೆ
ಜಯ ಭೀಮರಾಯನು ಈ ಮೇದಿನೀ ಸ್ಥಳಕ್ಕೆ ಬರಲು
ಅಸಮ ಪಶು ಎಂದೆನಿಸಿ ಸೇವಿಸಿದಿ ನಿತ್ಯಾ ಸತ್ಯಾ || 1 ||
ಸರ್ವೇಶ ಗುಣ ಮಣಿ ಸರ್ವಜ್ಞರಾಯರು
ವಿರಚಿಸಿದ ಗ್ರಂಥಗಳನಿರೇ ಸಜ್ಜನರಿಗೆ
ಸುಜ್ಞಾನವನು ತೋರಿ ಸುಜ್ಞಾನಿಗಳ
ವಾಗ್ಬಾಣದಿಂದರಿದ್ಯೋ ತರಿದ್ಯೊ || 2 ||
ಶಿರಿದೇವಿ ವರಬಲದಿ ಆಗಮಾದ್ರಿಯ ಮಥಿಸಿ
ಸತ್ಸುಖಾ ತೆಗೆದು ಸಾಧುಗಳಿಗಿತ್ತೇ
ಮಳಾಪುರಿನಿಲಯ ಪವನೇಶ
ತಂದೆವರದಗೋಪಾಲವಿಠ್ಠಲನ ದೂತಾ ಖ್ಯಾತಾ ದಾತಾ || 3 ||
***
Jayatu jayatu jayarāyā śubha jayatu śukaprīyā kāyayya kavigēya maharāyā || PA ||
jagadīśa sakhanāgi śastrāstravane kaigoṇḍu jayaśīlanendenisi jagadoḷage merede jaya bhīmarāyanu ī mēdinī sthaḷakke baralu asama paśu endenisi sēvisidi nityā satyā || 1 ||
sarvēśa guṇa maṇi sarvajñarāyaru viracisida granthagaḷanirē sajjanarige sujñānavanu tōri sujñānigaḷa vāgbāṇadindaridyō taridyo || 2 ||
śiridēvi varabaladi āgamādriya mathisi satsukhā tegedu sādhugaḷigittē maḷāpurinilaya pavanēśa tandevaradagōpālaviṭhṭhalana dūtā khyātā dātā || 3 ||
Plain English
Jayatu jayatu jayaraya subha jayatu sukapriya kayayya kavigeya maharaya || PA ||
jagadisa sakhanagi sastrastravane kaigondu jayasilanendenisi jagadolage merede jaya bhimarayanu i medini sthalakke baralu asama pasu endenisi sevisidi nitya satya || 1 ||
sarvesa guna mani sarvajnarayaru viracisida granthagalanire sajjanarige sujnanavanu tori sujnanigala vagbanadindaridyo taridyo || 2 ||
siridevi varabaladi agamadriya mathisi satsukha tegedu sadhugaligitte malapurinilaya pavanesa tandevaradagopalaviththalana duta khyata data || 3 ||
***